ಚಂದ್ರಯಾನ-3: ಇನ್ನು ಕೇವಲ 10 ದಿನ ಮಾತ್ರ ಬಾಕಿ; ಕೆಲಸ ಚುರುಕುಗೊಳಿಸಿದ ಪ್ರಗ್ಯಾನ್ ರೋವರ್

ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಇದೀಗ ಸಮಯದ ವಿರುದ್ಧದ ರೇಸ್ ಆಗಿ ಪರಿಣಮಿಸಿದ್ದು ಬಾಕಿ ಉಳಿದಿರುವ 10 ದಿನಗಳಲ್ಲಿ ಚಂದ್ರನ ಮೈಲ್ಮೇನ ಗರಿಷ್ಠ ದತ್ತಾಂಶ ಸಂಗ್ರಹಿಸಲು ತನ್ನ ಕೆಲಸ ಚುರುಕುಗೊಳಿಸಿದೆ.
ಚಂದ್ರಯಾನ-3
ಚಂದ್ರಯಾನ-3

ಬೆಂಗಳೂರು: ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಇದೀಗ ಸಮಯದ ವಿರುದ್ಧದ ರೇಸ್ ಆಗಿ ಪರಿಣಮಿಸಿದ್ದು ಬಾಕಿ ಉಳಿದಿರುವ 10 ದಿನಗಳಲ್ಲಿ ಚಂದ್ರನ ಮೈಲ್ಮೇನ ಗರಿಷ್ಠ ದತ್ತಾಂಶ ಸಂಗ್ರಹಿಸಲು ತನ್ನ ಕೆಲಸ ಚುರುಕುಗೊಳಿಸಿದೆ.

ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ಚಂದ್ರಯಾನ-3 ರ ರೋವರ್ ಮಾಡ್ಯೂಲ್ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿದೆ ಎಂದು ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ಎಂ ದೇಸಾಯಿ ಭಾನುವಾರ ಹೇಳಿದ್ದಾರೆ. ಸಮಯಕ್ಕೆ ವಿರುದ್ಧವಾಗಿ ರೋವರ್ ಕೆಲಸ ಮಾಡುತ್ತಿದ್ದು, ಆರು ಚಕ್ರಗಳ ರೋವರ್ ಮೂಲಕ ಗುರುತಿಸಲಾಗದ ದಕ್ಷಿಣ ಧ್ರುವದ ಗರಿಷ್ಠ ದೂರವನ್ನು ಕ್ರಮಿಸಲು ISRO ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆಯೇ ಈ ಬಗ್ಗೆ ಸ್ಪಷ್ಚ ಗುರಿ ಹೊಂದಿದ್ದ ವಿಜ್ಞಾನಿಗಳು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಮತ್ತು ರೋವರ್ ಗಳು ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕವೇ ನಿಜವಾದ ಕಾರ್ಯ ಪ್ರಾರಂಭವಾಗುತ್ತದೆ ಎಂದು ಹೇಳಿದ್ದರು. ಅದರಂತೆ ಇದೀಗ ರೋವರ್ ಮತ್ತು ಲ್ಯಾಂಡರ್ ಕೆಲಸ ಆರಂಭಿಸಿದ್ದು, ಅವುಗಳ ಜೊತೆ ವಿಜ್ಞಾನಿಗಳು ಕೂಡ ರೇಸ್ ಗೆ ಬಿದ್ದು ಕೆಲಸ ಮಾಡುತ್ತಿದ್ದಾರೆ. 

ಈಗಾಗಲೇ ವಿಜ್ಞಾನಿಗಳು ರೋವರ್ ಮತ್ತು ಲ್ಯಾಂಡರ್ ಗಳ ಮೂಲಕ ತಾವಂದುಕೊಂಡಿದ್ದ ಗುರಿಗಳ ಪೈಕಿ ಎರಡು ಮುಖ್ಯ ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸಿದ್ದು, ಮೂರನೇ ಗುರಿ ಸಾಧಿಸುವಂತೆ ರೋವರ್ ಕಾರ್ಯಾರಂಭ ಮಾಡುತ್ತಿದೆ. ಹೀಗಾಗಿ ಪ್ರಗ್ಯಾನ್ ರೋವರ್ ಸಮಯದ ವಿರುದ್ಧದ ಸ್ಪರ್ಧೆಯಲ್ಲಿದೆ. ರೋವರ್ ಚಂದ್ರನ ದಕ್ಷಿಣ ಧ್ರುವದ ಸಾಧ್ಯವಾದಷ್ಟು ದೂರವನ್ನು ಆವರಿಸುವಂತೆ ಮಾಡುವುದು ನಮ್ಮ ಗಮನವಾಗಿದೆ, ಇದರಿಂದಾಗಿ ಅದು ಹೆಚ್ಚಿನ ಪ್ರಯೋಗಗಳನ್ನು ನಡೆಸುತ್ತದೆ ಮತ್ತು ನಾವು ಇಲ್ಲಿ ಭೂಮಿಯ ಮೇಲೆ ಡೇಟಾವನ್ನು ಪಡೆಯುತ್ತೇವೆ ಎಂದು ದೇಸಾಯಿ ಹೇಳಿದರು.

"ಚಂದ್ರನಲ್ಲಿ ಒಂದು ದಿನಕ್ಕೆ ಸಮನಾಗಿರುವ ಈ ಕಾರ್ಯಾಚರಣೆಗೆ ನಮಗೆ ಒಟ್ಟು 14 ದಿನಗಳಿವೆ, ಈಗಾಗಲೇ ನಾಲ್ಕು ದಿನಗಳು ಪೂರ್ಣಗೊಂಡಿವೆ. ಉಳಿದ ಹತ್ತು ದಿನಗಳಲ್ಲಿ ನಾವು ಮಾಡಬಹುದಾದ ಹೆಚ್ಚಿನ ಪ್ರಯೋಗಗಳು ಮತ್ತು ಸಂಶೋಧನೆಗಳು ಮುಖ್ಯವಾಗುತ್ತವೆ. ನಾವು ಒಂದು ಸಮಯದ ವಿರುದ್ಧ ಓಟದ ಸ್ಪರ್ಧೆಯಲ್ಲಿದ್ದೇವೆ. ಏಕೆಂದರೆ ಈ 10 ದಿನಗಳಲ್ಲಿ, ನಾವು ಗರಿಷ್ಠ ಕೆಲಸವನ್ನು ಮಾಡಬೇಕಾಗಿದೆ ಮತ್ತು ಎಲ್ಲಾ ಇಸ್ರೋ ವಿಜ್ಞಾನಿಗಳು ಅದರಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ದೇಸಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com