ತನ್ನನ್ನು ನೋಡಿ ನಾಯಿ ಬೊಗಳಿದ್ದಕ್ಕೆ 65 ವರ್ಷದ ವೃದ್ಧೆಗೆ ಒದ್ದು ಕೊಂದ ವ್ಯಕ್ತಿ!

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ತನ್ನನ್ನು ನೋಡಿ ನಾಯಿ ಬೊಗಳಿದ್ದಕ್ಕೆ 35 ವರ್ಷದ ವ್ಯಕ್ತಿಯೊಬ್ಬ ವೃದ್ಧ ಮಹಿಳೆಯ ಹೊಟ್ಟೆಗೆ ಒದ್ದು ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ತನ್ನನ್ನು ನೋಡಿ ನಾಯಿ ಬೊಗಳಿದ್ದಕ್ಕೆ 35 ವರ್ಷದ ವ್ಯಕ್ತಿಯೊಬ್ಬ ವೃದ್ಧ ಮಹಿಳೆಯ ಹೊಟ್ಟೆಗೆ ಒದ್ದು ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ ಮುಸಖೇಡಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಾಂತಿ ನಗರದ ನಿವಾಸಿಯಾದ ಆರೋಪಿ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುತ್ತಿದ್ದಾಗ ನಾಯಿ ಆತನನ್ನು ನೋಡಿ ಬೊಗಳಲು ಆರಂಭಿಸಿದೆ. ತನ್ನನ್ನು ನೋಡಿ ನಿರಂತರವಾಗಿ ನಾಯಿ ಬೊಗಳುತ್ತಿದ್ದರಿಂದ ರಸ್ತೆ ದಾಟಲು ಆರೋಪಿಗೆ ಸಾಧ್ಯವಾಗಲಿಲ್ಲ ಎಂದು ಆಜಾದ್ ನಗರ ಪೊಲೀಸ್ ಠಾಣೆ ಪ್ರಭಾರಿ ನೀರಜ್ ಮೇಧಾ ತಿಳಿಸಿದ್ದಾರೆ.

ಇದರಿಂದ ಆ ವ್ಯಕ್ತಿ ಕೂಗಾಡಿದ್ದಾನೆ. ಈ ವೇಳೆ ನಾಯಿಯ ಮಾಲೀಕೆ 65 ವರ್ಷದ ಮಹಿಳೆ ತನ್ನ ಮನೆಯಿಂದ ಹೊರಬಂದಿದ್ದು ನಂತರ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ನಂತರ ಆಕ್ರೋಶಗೊಂಡ ಆರೋಪಿ ಮಹಿಳೆಯ ಹೊಟ್ಟೆಗೆ ಒದ್ದಿದ್ದಾನೆ. ಇದರಿಂದ ಆಕೆ ರಸ್ತೆಯಲ್ಲಿ ಬಿದ್ದಿದ್ದಾಳೆ. ಕೂಲಡೇ ನೆರೆಮನೆಯವರು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಿಳೆಯ ಸಾವಿನ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com