ದೆಹಲಿಯಲ್ಲಿ ಮೊದಲ JN.1 ಪ್ರಕರಣ; ದೇಶದಲ್ಲಿ ಕೊರೋನಾ ಉಪ ತಳಿ ಸಂಖ್ಯೆ 109ಕ್ಕೆ ಏರಿಕೆ

ದೇಶದ ರಾಜಧಾನಿ ದೆಹಲಿಯಲ್ಲಿ ಮೊದಲ ಕೋವಿಡ್-19 ಉಪ-ತಳಿ JN.1 ಪ್ರಕರಣ ವರದಿಯಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಗುರುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮೊದಲ ಕೋವಿಡ್-19 ಉಪ-ತಳಿ JN.1 ಪ್ರಕರಣ ವರದಿಯಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಗುರುವಾರ ಹೇಳಿದ್ದಾರೆ.

ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಮೂರು ಮಾದರಿಗಳನ್ನು ಕಳುಹಿಸಲಾಗಿತ್ತು. ಅವುಗಳಲ್ಲಿ ಒಂದು ಜೆಎನ್.1 ರೂಪಾಂತರದ ಪಾಸಿಟಿವ್ ವರದಿಯಾಗಿದ್ದರೆ ಉಳಿದ ಎರಡು ಒಮಿಕ್ರಾನ್.

ದೆಹಲಿಯಲ್ಲಿ 52 ವರ್ಷದ ಮಹಿಳೆಯಲ್ಲಿ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.ಜೆಎನ್.1 ಓಮಿಕ್ರಾನ್‌ನ ಉಪ ತಳಿ ಸೌಮ್ಯವಾದ ಸೋಂಕಿನಿಂದ ಕೂಡಿದ್ದು, ಸೌಮ್ಯ ರೋಗಲಕ್ಷಣಗಳಿಗಾಗಿ ದಾಖಲಿಸಲಾಯಿತು. ಕೆಮ್ಮು ಮತ್ತು ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು ಇದೆ. ಆಮ್ಲಜನಕದ ಅಗತ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ದೆಹಲಿಯಲ್ಲಿ ಸುಮಾರು 35 ಸಕ್ರಿಯ ಪ್ರಕರಣಗಳು ನಿನ್ನೆ ವರದಿಯಾಗಿದ್ದು, ಒಂಬತ್ತು ಹೊಸ ಸೋಂಕುಗಳು ವರದಿಯಾಗಿವೆ, ಆದರೆ ಕೊಮೊರ್ಬಿಡಿಟಿಗಳನ್ನು ಹೊಂದಿದ್ದ 28 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ ಪ್ರಾಥಮಿಕ ಕಾರಣವಲ್ಲದಿದ್ದರೂ ಮೃತಪಟ್ಟಿದ್ದಾರೆ. 

ಮೃತರು ಮಲ್ಟಿ-ಸಿಸ್ಟಮ್ ಇನ್‌ಫ್ಲಮೇಟರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು. ಕೋವಿಡ್-19 ಉಪ-ತಳಿ ಜೆಎನ್-1 40 ಪ್ರಕರಣಗಳು ವರದಿಯಾಗಿವೆ, ಡಿಸೆಂಬರ್ 26 ರವರೆಗೆ ದೇಶಾದ್ಯಂತ ಹೊಸ ರೂಪಾಂತರದ ಪ್ರಕರಣಗಳ ಸಂಖ್ಯೆ 109 ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗುಜರಾತ್‌ನಿಂದ 36, ಕರ್ನಾಟಕದಿಂದ 34, ಗೋವಾದಿಂದ 14, ಮಹಾರಾಷ್ಟ್ರದಿಂದ 9, ಕೇರಳದಿಂದ 6, ರಾಜಸ್ಥಾನ ಮತ್ತು ತಮಿಳುನಾಡಿನಿಂದ ತಲಾ ನಾಲ್ಕು ಮತ್ತು ತೆಲಂಗಾಣದಿಂದ ಎರಡು ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಿನ ರೋಗಿಗಳು ಪ್ರಸ್ತುತ ಹೋಮ್ ಐಸೋಲೇಶನ್‌ನಲ್ಲಿದ್ದಾರೆ ಎಂದು ಅವರು ಹೇಳಿದರು.

ಭಾರತದಲ್ಲಿ ಒಂದೇ ದಿನದಲ್ಲಿ 529 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ, ಆದರೆ ದೇಶದ ಸಕ್ರಿಯ ಸೋಂಕಿನ ಸಂಖ್ಯೆ 4,093 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com