ಮಹಾರಾಷ್ಟ್ರ: ಕೆಮಿಕಲ್ ತುಂಬಿದ್ದ ಡ್ರಮ್ ಬಳಿ ಸಿಗರೇಟ್ ಹಚ್ಚಿದ ವ್ಯಕ್ತಿ, ಸ್ಫೋಟದಲ್ಲಿ ಇಬ್ಬರ ಸಾವು
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಹನಕಾರಿ ರಾಸಾಯನಿಕ ತುಂಬಿದ ಡ್ರಮ್‌ಗಳು ಸ್ಫೋಟಗೊಂಡು ಇಬ್ಬರು ಸ್ಕ್ರ್ಯಾಪ್ ವಿತರಕರು ಮೃತಪಟ್ಟಿದ್ದಾರೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 01st February 2023 04:24 PM | Last Updated: 01st February 2023 04:24 PM | A+A A-

ಸಾಂದರ್ಭಿಕ ಚಿತ್ರ
ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಹನಕಾರಿ ರಾಸಾಯನಿಕ ತುಂಬಿದ ಡ್ರಮ್‌ಗಳು ಸ್ಫೋಟಗೊಂಡು ಇಬ್ಬರು ಸ್ಕ್ರ್ಯಾಪ್ ವಿತರಕರು ಮೃತಪಟ್ಟಿದ್ದಾರೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತರು ಭಿವಂಡಿಯ ಕಂಬೆಯಲ್ಲಿ ಕಂಟೈನರ್‌ಗಳಿಂದ ಡೈಥಿಲೀನ್ ಗ್ಲೈಕೋಲ್ ಅನ್ನು ತೆಗೆದುಕೊಳ್ಳುತ್ತಿದ್ದಾಗ ಅವರಲ್ಲಿ ಒಬ್ಬಾತ ಸಿಗರೇಟ್ ಹಚ್ಚಿದ್ದಾರೆ. ಇದರಿಂದಾಗಿ ಬೆಳಿಗ್ಗೆ 8.30 ರ ಸುಮಾರಿಗೆ ಬೆಂಕಿ ತಗುಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಕಿಯಿಂದಾಗಿ ನಾಲ್ಕು ಡ್ರಮ್‌ಗಳು ಸ್ಫೋಟಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಅವಿನಾಶ್ ಸಾವಂತ್ ಹೇಳಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ನಿಜಾಂಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.