ಉದಯ್ ಪುರ ತಲುಪಬೇಕಿದ್ದ ಏರ್ ಇಂಡಿಗೋ ವಿಮಾನದ ಪ್ರಯಾಣಿಕ ಬಂದಿಳಿದಿದ್ದು ಪಾಟ್ನಾದಲ್ಲಿ!: ತನಿಖೆಗೆ ಆದೇಶ

ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ವೈಮಾನಿಕ ಕ್ಷೇತ್ರದಲ್ಲಿ ವಿಚಿತ್ರ, ವಿಲಕ್ಷಣ ಎನ್ನುವಂತಹ ಘಟನೆಗಳು ನಡೆಯುತ್ತಿದೆ. 
ಇಂಡಿಗೋ ವಿಮಾನ
ಇಂಡಿಗೋ ವಿಮಾನ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ವೈಮಾನಿಕ ಕ್ಷೇತ್ರದಲ್ಲಿ ವಿಚಿತ್ರ, ವಿಲಕ್ಷಣ ಎನ್ನುವಂತಹ ಘಟನೆಗಳು ನಡೆಯುತ್ತಿದೆ. 

ಪಾಟ್ನಾಗೆ ತೆರಳಬೇಕಿದ್ದ ಪ್ರಯಾಣಿಕನೋರ್ವ ಉದಯ್ ಪುರಕ್ಕೆ ತೆರಳುವ ವಿಮಾನವನ್ನು ಹತ್ತಿದ್ದು, ತಾನು ತಲುಪಬೇಕಿದ್ದ ಪ್ರದೇಶಕ್ಕಿಂತ 1,400 ಕಿ.ಮೀ ದೂರದ ಪ್ರದೇಶದಲ್ಲಿ ಬಂದಿಳಿದಿದ್ದಾನೆ. ಈ ಘಟನೆ ಬಗ್ಗೆ ಡಿಜಿಸಿಎ ತನಿಖೆಗೆ ಆಗ್ರಹಿಸಿದ್ದಾರೆ. 

ಈ ಘಟನೆ ಜ.30 ರಂದು ನಡೆದಿದ್ದು, ಮರುದಿನ ಆತನನ್ನು ಆತ ತಲುಪಬೇಕಿದ್ದ ಪ್ರದೇಶಕ್ಕೆ ಕಳಿಸಲಾಯಿತು. ಪ್ರಯಾಣಿಕ ಅಫ್ಸರ್ ಹುಸೇನ್, ಇಂಡಿಗೋ ವಿಮಾನ 6E-214 ದ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಜ.30 ರಂದು ದೆಹಲಿ ವಿಮಾನ ನಿಲ್ದಾಣ ತಲುಪಿ ನಿಗದಿಯಾಗಿದ್ದ ವಿಮಾನ ಏರಲು ಸಜ್ಜಾಗಿದ್ದರು. ಆದರೆ ಪ್ರಮಾದವಶಾತ್ ಉದಯ್ ಪುರಕ್ಕೆ ನಿಗದಿಯಾಗಿದ್ದ ವಿಮಾನ 6E-319 ಗೆ ಏರಿದ್ದರು.
 
ಉದಯ್ ಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗಲೇ ಆತನಿಗೆ ಆತನ ತಪ್ಪು ಅರಿವಾಗಿದೆ. ಈ ಬಳಿಕ ಏರ್ ಲೈನ್ ಗೆ ಆಗಿರುವ ಪ್ರಮಾದ ಬಗ್ಗೆ ವಿವರಿಸಿದ್ದಾರೆ. ಆತನನ್ನು ಇಂಡಿಗೋ ವಿಮಾನ ಪಾಟ್ನಾಗೆ ಜ.31 ರಂದು ತಲುಪಿಸಿತು.

ಇದನ್ನೂ ಓದಿ: ಬೆಂಗಳೂರು: ಏರ್‌ಪೋರ್ಟ್ ಶಟಲ್ ಬಸ್ ಬರಲು ವಿಳಂಬ, ತಾಸುಗಟ್ಟಲೆ ಆಕಾಶ ಏರ್ ವಿಮಾನದಲ್ಲೇ ಕುಳಿತ ಪ್ರಯಾಣಿಕರು!
 
ಈ ಘಟನೆಯ ಬಗ್ಗೆ ತನಿಖೆಗೆ ನಡೆಸಿ ಪ್ರಯಾಣಿಕರ ಬೋರ್ಡಿಂಗ್ ಪಾಸ್ ನ್ನು ಏಕೆ ಸ್ಕ್ಯಾನ್ ಮಾಡಲಿಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಪ್ರಯಾಣಿಕರು ವಿಮಾನ ಏರುವ ಮುನ್ನ ಎರಡು ಕೇಂದ್ರಗಳಲ್ಲಿ ಅವರ ಬೋರ್ಡಿಂಗ್ ಪಾಸ್ ನ್ನು ಪರಿಶೀಲಿಸಲಾಗುತ್ತದೆ. ಆದರೂ ಈ ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಡಿಜಿಸಿಎ ತನಿಖೆಗೆ ಆದೇಶಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com