ದೆಹಲಿ: ಶುಲ್ಕದ ವಿಚಾರದಲ್ಲಿ ಪಾರ್ಕಿಂಗ್ ಸಿಬ್ಬಂದಿಗೆ ಬ್ಯಾಟ್‌ನಿಂದ ಥಳಿಸಿದ ಶಾಲಾ ಶಿಕ್ಷಕ, ಬಂಧನ
ವಸಂತ್ ವಿಹಾರ್‌ನ ಬಸಂತ್ ಲೋಕದಲ್ಲಿರುವ ಪಿವಿಆರ್ ಪ್ರಿಯಾ ಎಂಬಲ್ಲಿ ಪಾರ್ಕಿಂಗ್ ಶುಲ್ಕವಾಗಿ 60 ರೂಪಾಯಿ ನೀಡುವಂತೆ ಕೇಳಿದ ಪಾರ್ಕಿಂಗ್ ಅಟೆಂಡರ್‌ಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಖಾಸಗಿ ಶಾಲೆಯೊಂದರ 28 ವರ್ಷದ ಶಿಕ್ಷಕನನ್ನು ಬಂಧಿಸಲಾಗಿದೆ
Published: 04th February 2023 07:49 AM | Last Updated: 04th February 2023 07:49 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ವಸಂತ್ ವಿಹಾರ್‌ನ ಬಸಂತ್ ಲೋಕದಲ್ಲಿರುವ ಪಿವಿಆರ್ ಪ್ರಿಯಾ ಎಂಬಲ್ಲಿ ಪಾರ್ಕಿಂಗ್ ಶುಲ್ಕವಾಗಿ 60 ರೂಪಾಯಿ ನೀಡುವಂತೆ ಕೇಳಿದ ಪಾರ್ಕಿಂಗ್ ಅಟೆಂಡರ್‌ಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಖಾಸಗಿ ಶಾಲೆಯೊಂದರ 28 ವರ್ಷದ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಫೆಬ್ರುವರಿ 1 ರಂದು ಈ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ವಿಕ್ರಮ್ ಜೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಮೆಹ್ರೌಲಿಯ ಸೈದುಲಾಜಾಬ್ ನಿವಾಸಿಯಾಗಿರುವ ಅವರು ದಕ್ಷಿಣ ದೆಹಲಿಯ ಖಾಸಗಿ ಶಾಲೆಯೊಂದರಲ್ಲಿ ಪಿಟಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರುವರಿ 1 ರಂದು ರಾತ್ರಿ 10.30ರ ಸುಮಾರಿಗೆ ಘಟನೆ ಬಗ್ಗೆ ಪಿಸಿಆರ್‌ಗೆ ಕರೆ ಬಂದಿತು. ನಂತರ ಪೊಲೀಸರು ಸ್ಥಳಕ್ಕೆ ತಲುಪಿದರು ಮತ್ತು ಗಾಯಗೊಂಡ ಪಾರ್ಕಿಂಗ್ ಅಟೆಂಡೆಂಟ್ ಅನ್ನು ವಿಕಾಸ್ ಠಾಕೂರ್ ಎಂದು ಗುರುತಿಸಲಾಗಿದೆ. ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ದರು ಎಂದು ಡಿಸಿಪಿ (ನೈಋತ್ಯ) ಮನೋಜ್ ಸಿ ಹೇಳಿದ್ದಾರೆ.
ಅವರಿಗೆ ತಲೆ ಬಲಭಾಗಕ್ಕೆ ಗಾಯವಾಗಿದೆ ಮತ್ತು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಸದ್ಯ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಡಿಸಿಪಿ ಹೇಳಿದರು. ತನಿಖೆಯ ಸಮಯದಲ್ಲಿ, ಪಾರ್ಕಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುವ ಪ್ರತ್ಯಕ್ಷದರ್ಶಿ ಮನೋಜ್ ಕುಮಾರ್ (34), ರಾತ್ರಿ 7 ಗಂಟೆಗೆ ಹೋಂಡಾ ಅಮೇಜ್ ಕಾರು ಪಾರ್ಕಿಂಗ್ ಸ್ಥಳಕ್ಕೆ ಬಂದಿತು ಮತ್ತು ಕಾರು ಮಾಲೀಕರು ಫೆಬ್ರವರಿ 1 ರಂದು ರಾತ್ರಿ 10.30 ರ ಸುಮಾರಿಗೆ ಕುಡಿದ ಸ್ಥಿತಿಯಲ್ಲಿ ಮರಳಿದರು ಎಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದರು.
ವಿಕಾಸ್ ಕುಮಾರ್ ಕಾರು ಮಾಲೀಕರಿಗೆ ಪಾರ್ಕಿಂಗ್ ಶುಲ್ಕವಾಗಿ 60 ರೂಪಾಯಿ ನೀಡುವಂತೆ ಕೇಳಿದಾಗ ಆರೋಪಿ ವಿಕ್ರಮ್ ಜೀತ್ ಸಿಂಗ್ ನಿಂದಿಸಲು ಆರಂಭಿಸಿದರು. ಬಳಿಕ ಕಾರಿನಿಂದ ಬ್ಯಾಟ್ ತೆಗೆದು ವಿಕಾಸ್ ತಲೆಗೆ ಹೊಡೆದು ಪರಾರಿಯಾಗಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ವಸಂತ ವಿಹಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 308 (ಅಪರಾಧೀಯ ನರಹತ್ಯೆಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ಸಮಯದಲ್ಲಿ, ಪೊಲೀಸರು ಕಾರಿನ ನೋಂದಣಿ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದರು ಮತ್ತು ವಾಹನದ ಜೊತೆಗೆ ಸಿಂಗ್ ಅವರನ್ನು ಬಂಧಿಸಿದರು. ವಿಚಾರಣೆ ನಂತರ, ಅಪರಾಧಕ್ಕೆ ಬಳಸಿದ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.