ದೆಹಲಿಯ ಫತೇಪುರ್ ಬೆರಿ ಪ್ರದೇಶದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್, ಆರೋಪಿಗಳ ಬಂಧನ
ದಕ್ಷಿಣ ದೆಹಲಿಯ ಫತೇಪುರ್ ಬೆರಿ ಪ್ರದೇಶದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Published: 04th February 2023 07:33 AM | Last Updated: 04th February 2023 07:33 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದಕ್ಷಿಣ ದೆಹಲಿಯ ಫತೇಪುರ್ ಬೆರಿ ಪ್ರದೇಶದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಮಧ್ಯಪ್ರದೇಶದ ಸಿಧಿ ನಿವಾಸಿಗಳಾದ ರಾಮ್ನಿವಾಸ್ ಪಣಿಕಾ (27) ಮತ್ತು ಶಕ್ತಿಮಾನ್ ಸಿಂಗ್ (22) ಎಂದು ಗುರುತಿಸಲಾಗಿದೆ. ಇಬ್ಬರೂ ವಿವಾಹಿತರು ಮತ್ತು ಕಸದ ಮರುಬಳಕೆಗೆ ಸಂಬಂಧಿಸಿದ ಭೂಮಿ ಗ್ರೀನ್ ಕಂಪನಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
ಅಧಿಕಾರಿಯ ಪ್ರಕಾರ, ಸಂತ್ರಸ್ತ ಬಾಲಕಿಯ ಪೋಷಕರು ದಕ್ಷಿಣ ದೆಹಲಿಯ ಫತೇಪುರ್ ಬೆರಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಬೆಳಿಗ್ಗೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
'ತಾಯಿ ಮಗಳಿಗಾಗಿ ಹುಡುಕಾಡುತ್ತಿದ್ದಾಗ ಅವರ ನೆರೆಮನೆಯ ರಾಣಿ, ಅವರ ಮಗಳು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ, ಆರೋಪಿಗಳು ಕೂಡ ಅದೇ ದಿಕ್ಕಿನಲ್ಲಿ ಹೋಗುವುದನ್ನು ಸಹ ಆಕೆ ನೋಡಿದ್ದಾಗಿ ತಿಳಿಸಿದ್ದಾಳೆ' ಎಂದು ಡಿಸಿಪಿ ಹೇಳಿದರು.
ಬಳಿಕ ತಮ್ಮ ಮಗಳಿಗಾಗಿ ತಾಯಿ ಹುಡುಕುತ್ತಾ ತೆರಳಿದಾಗ, ಕಾಡಿನ ಪ್ರದೇಶದಲ್ಲಿ ತಮ್ಮ ಮಗಳು ತೀವ್ರವಾಗಿ ಅಳುತ್ತಿದ್ದದ್ದು ಕೇಳಿಬಂದಿದೆ. ಮಗಳ ಖಾಸಗಿ ಭಾಗದಿಂದ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಏನಾಯಿತು ಎಂದು ಆಕೆ ಕೇಳಿದಾಗ ಬಾಲಕಿ ಅಳುತ್ತಲೇ ಇದ್ದಳು ಎಂದು ತಿಳಿಸಿದ್ದಾರೆ.
ನಂತರ ಘಟನೆಯನ್ನು ಬಾಲಕಿಯ ತಾಯಿ ತನ್ನ ಪತಿಗೆ ತಿಳಿಸಿದ್ದಾರೆ ಬಳಿಕ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಪೊಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿ ಆರೋಪಿ ಇಬ್ಬರನ್ನು ಬಂಧಿಸಿದ್ದಾರೆ.
ಈಮಧ್ಯೆ, ಮಗುವನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಗಮನಾರ್ಹವಾಗಿ, ದೆಹಲಿ ಪೊಲೀಸರು ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 2022 ರ ಮೊದಲ ಆರೂವರೆ ತಿಂಗಳಲ್ಲಿ 1,100 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. 2021 ರಲ್ಲಿ ಅದೇ ಅವಧಿಯಲ್ಲಿ 1,033 ಮಹಿಳೆಯರು ಕೃತ್ಯಕ್ಕೆ ತುತ್ತಾಗಿದ್ದಾರೆ. ಈ ವರ್ಷದ ದತ್ತಾಂಶವನ್ನು 2021 ರ ಅಂಕಿಅಂಶಗಳೊಂದಿಗೆ ಹೋಲಿಸಿದರೆ, ಶೇ 6.48 ರಷ್ಟು ಹೆಚ್ಚಳವಾಗಿದೆ.