ಮಧ್ಯ ಪ್ರದೇಶ: ಸಮಾಜಕ್ಕೆ ಹೆದರಿ ತನ್ನ ನವಜಾತ ಶಿಶುವನ್ನು ಕೊಂದ ಅವಿವಾಹಿತ ಅತ್ಯಾಚಾರ ಸಂತ್ರಸ್ತೆ

ಸಮಾಜಕ್ಕೆ ಹೆದರಿ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಝಬುವಾ ಜಿಲ್ಲೆಯಲ್ಲಿ ಅವಿವಾಹಿತ ಅತ್ಯಾಚಾರ ಸಂತ್ರಸ್ತೆಯು ತನ್ನ ನವಜಾತ ಶಿಶುವನ್ನು ಕೊಂದಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಭೋಪಾಲ್: ಸಮಾಜಕ್ಕೆ ಹೆದರಿ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಝಬುವಾ ಜಿಲ್ಲೆಯಲ್ಲಿ ಅವಿವಾಹಿತ ಅತ್ಯಾಚಾರ ಸಂತ್ರಸ್ತೆಯು ತನ್ನ ನವಜಾತ ಶಿಶುವನ್ನು ಕೊಂದಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಯುವತಿ ಮೇಲೆ ಕಳೆದ ವರ್ಷ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಗರ್ಭಾವಸ್ಥೆಯ ಬಗ್ಗೆ ತಿಳಿದ ಪೊಲೀಸರು, ಯಾವಾಗ ಮಗು ಜನಿಸುತ್ತದೆಯೋ ಆಗ ಮಾಹಿತಿ ನೀಡುವಂತೆ ಆಕೆಯ ಕುಟುಂಬಕ್ಕೆ ಹೇಳಿದ್ದರು. ಆದರೆ, ಸಾಮಾಜಿಕ ಕಳಂಕಕ್ಕೆ ಹೆದರಿದ ಕುಟುಂಬವು ಮಗುವನ್ನು ಕೊಲ್ಲಲು ನಿರ್ಧರಿಸಿತು.

ಅತ್ಯಾಚಾರ ಪ್ರಕರಣದ ತನಿಖೆಗಾಗಿ ಪೊಲೀಸರು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ಆಕೆಯ ಮನೆಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಅಲ್ಲಿಗೆ ತಲುಪಿದ ಪೊಲೀಸರಿಗೆ ಮಗುವನ್ನು ಕೊಂದು ನಿರ್ಜನ ಪ್ರದೇಶದಲ್ಲಿ ಹೂಳಲಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, 'ಕಾಲಿನಿಂದ ಕುತ್ತಿಗೆ ಹಿಸುಕಿ ಮಗುವನ್ನ ಕೊಂದಿದ್ದಾಳೆ. ಮೃತದೇಹವನ್ನು ಸಮಾಧಿಯಿಂದ ಹೊರತೆಗೆದ ನಂತರ ನವಜಾತ ಶಿಶುವಿನ ಕ್ರೂರ ಹತ್ಯೆಯನ್ನು ದೃಢಪಡಿಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಬೆನ್ನುಮೂಳೆಯ ಮೇಲ್ಭಾಗದಲ್ಲಿ ಅನೇಕ ಮುರಿತವಾಗಿರುವುದು ಕಂಡುಬಂದಿದೆ. ಎಲ್ಲಾ 3 ಆರೋಪಿಗಳಾದ ಯುವತಿ ಮತ್ತು ಆಕೆಯ ಚಿಕ್ಕಪ್ಪ-ಚಿಕ್ಕಮ್ಮನನ್ನು ಬಂಧಿಸಿ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com