BBC ಕಚೇರಿಯಲ್ಲಿ ಐಟಿ ಶೋಧ: ತೆರಿಗೆ ವಂಚನೆ ಬೆಳಕಿಗೆ, ಪುರಾವೆ ಸಂಗ್ರಹ

ಪ್ರಧಾನಿ ಮೋದಿ ವಿರುದ್ಧ ಸಾಕ್ಷ್ಯಚಿತ್ರ ಪ್ರಸಾರ ಮಾಡಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ (BBC) ಕಚೇರಿ ಮೇಲೆ ದಾಳಿ ನಡೆಸಿದ್ದ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ಬಿಬಿಸಿಯಿಂದ ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ.
ಬಿಬಿಸಿ
ಬಿಬಿಸಿ

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಸಾಕ್ಷ್ಯಚಿತ್ರ ಪ್ರಸಾರ ಮಾಡಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ (BBC) ಕಚೇರಿ ಮೇಲೆ ದಾಳಿ ನಡೆಸಿದ್ದ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ಬಿಬಿಸಿಯಿಂದ ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ.

ಬಿಬಿಸಿ ಇಂಡಿಯಾ ವಿರುದ್ಧ ಆದಾಯ ತೆರಿಗೆ ಇಲಾಖೆ ನಡೆಸಿದ್ದ ದಾಳಿ ಮತ್ತು ಶೋಧ ಕಾರ್ಯ ಯಶಸ್ವಿಯಾಗಿದ್ದು, ಕಚೇರಿಯಲ್ಲಿ ತೆರಿಗೆ ವಂಚನೆಯ ಪುರಾವೆಗಳನ್ನು ಸಂಗ್ರಹಿಸಿದೆ. ಬಿಬಿಸಿ ಇಂಡಿಯಾದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. BBC ಯಿಂದ ಕೆಲವು ಹಣ ರವಾನೆಗಳ ಮೇಲೆ ತೆರಿಗೆಯನ್ನು ಪಾವತಿಸಲಾಗಿಲ್ಲ ಎಂದು ಪುರಾವೆಗಳು ತೋರಿಸುತ್ತಿವೆ, ಅದನ್ನು ಭಾರತದಲ್ಲಿ ಆದಾಯವೆಂದು ತೋರಿಸಲಾಗಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ವಕ್ತಾರರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಸತತ ಮೂರು ದಿನಗಳ ನಂತರ, ಆದಾಯ ತೆರಿಗೆ (ಐ-ಟಿ) ಇಲಾಖೆ ಗುರುವಾರ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ತನ್ನ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದರು.  ಶೋಧ ಕಾರ್ಯಾಚರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆದಾಯ ತೆರಿಗೆ ಇಲಾಖೆ ವಕ್ತಾರರು, "ಆದಾಯ ತೆರಿಗೆ ಕಾಯಿದೆ, 1961 (ಆಕ್ಟ್) ನ ಸೆಕ್ಷನ್ 133 ಎ ಅಡಿಯಲ್ಲಿ ಸಮೀಕ್ಷೆ ಕ್ರಮವನ್ನು ದೆಹಲಿ ಮತ್ತು ಮುಂಬೈನಲ್ಲಿರುವ ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಕಂಪನಿಯ ಗುಂಪು ಘಟಕಗಳ ವ್ಯಾಪಾರ ಆವರಣದಲ್ಲಿ ನಡೆಸಲಾಯಿತು. ಕಾಯಿದೆಯ ಸೆಕ್ಷನ್ 133A ಖಾತೆಗಳು ಅಥವಾ ಇತರ ದಾಖಲೆಗಳನ್ನು ಪರಿಶೀಲಿಸಲು ತನ್ನ ಅಧಿಕಾರ ವ್ಯಾಪ್ತಿಯೊಳಗೆ ಯಾವುದೇ ವ್ಯಾಪಾರ ಅಥವಾ ವೃತ್ತಿ ಅಥವಾ ದತ್ತಿ ಚಟುವಟಿಕೆಯ ಸ್ಥಳವನ್ನು ಪ್ರವೇಶಿಸಲು ಆದಾಯ-ತೆರಿಗೆ ಪ್ರಾಧಿಕಾರಕ್ಕೆ ಅಧಿಕಾರ ನೀಡುತ್ತದೆ ಎಂದು ವಿವರಿಸಿದ್ದಾರೆ.

ವಿವಿಧ ಗುಂಪು ಘಟಕಗಳು ತೋರಿಸುವ ಆದಾಯವು ಭಾರತದಲ್ಲಿನ ಕಾರ್ಯಾಚರಣೆಗಳ ಪ್ರಮಾಣಕ್ಕೆ ಅನುಗುಣವಾಗಿಲ್ಲ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಅಲ್ಲದೆ ಇದಕ್ಕಾಗಿ ಇತರ ಉದ್ಯೋಗಿಗಳ ಸೇವೆಯನ್ನು ಬಳಸಿಕೊಳ್ಳಲಾಗಿದೆ ಎಂದು ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ. ಇದಕ್ಕಾಗಿ ಭಾರತೀಯ ಘಟಕವು ಸಂಬಂಧಿಸಿದ ವಿದೇಶಿ ಘಟಕಕ್ಕೆ ಮರುಪಾವತಿಯನ್ನು ಮಾಡಿದೆ. ಅಂತಹ ರವಾನೆಗಳನ್ನು ತಡೆಹಿಡಿಯುವ ತೆರಿಗೆಗೆ ಒಳಪಡಿಸಲಾಗುತ್ತದೆ, ಅದನ್ನು ಮಾಡಲಾಗಿಲ್ಲ ಎಂದು ತೆರಿಗೆ ಇಲಾಖೆ ವಕ್ತಾರರು ಹೇಳಿದ್ದಾರೆ.

ಜೊತೆಗೆ, 'ವರ್ಗಾವಣೆ ದರ ನಿಗದಿ ದಾಖಲೆಗೆ ಸಂಬಂಧಿಸಿದಂತೆ ಹಲವು ಲೋಪದೋಷಗಳು ಕಂಡುಬಂದಿವೆ. ಸಮೀಕ್ಷೆಯ ಫಲವಾಗಿ ಉದ್ಯೋಗಿಗಳ ಹೇಳಿಕೆಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ದಾಖಲೆಗಳ ಮೂಲಕ ಪ್ರಮುಖ ಪುರಾವೆಗಳು ಪತ್ತೆಯಾಗಿದ್ದು, ಅದನ್ನು ಮತ್ತಷ್ಟು ಪರಿಶೀಲಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com