ಮರುಕಳಿಸಿದ ಹೈದರಾಬಾದ್ ಮಾದರಿಯ ಘಟನೆ: ಗುಜರಾತ್ ನಲ್ಲಿ ನಾಯಿ ದಾಳಿಗೊಳಗಾಗಿದ್ದ ಮಗು ಸಾವು!

ಇತ್ತೀಚೆಗೆ ಹೈದರಾಬಾದ್ ನಲ್ಲಿ ಬೀದಿ ನಾಯಿ ದಾಳಿಗೊಳಗಾಗಿ ಮಗು ಸಾವನ್ನಪ್ಪಿದ್ದ ಘಟನೆ ನಡೆದ ಬೆನ್ನಲ್ಲೇ ಗುಜರಾತ್ ನಲ್ಲಿ ಇಂತಹದ್ದೇ ನಡೆದಿದೆ. 
ಬೀದಿ ನಾಯಿಗಳು (ಸಂಗ್ರಹ ಚಿತ್ರ)
ಬೀದಿ ನಾಯಿಗಳು (ಸಂಗ್ರಹ ಚಿತ್ರ)

ಸೂರತ್: ಇತ್ತೀಚೆಗೆ ಹೈದರಾಬಾದ್ ನಲ್ಲಿ ಬೀದಿ ನಾಯಿ ದಾಳಿಗೊಳಗಾಗಿ ಮಗು ಸಾವನ್ನಪ್ಪಿದ್ದ ಘಟನೆ ನಡೆದ ಬೆನ್ನಲ್ಲೇ ಗುಜರಾತ್ ನಲ್ಲಿ ಇಂತಹದ್ದೇ ನಡೆದಿದೆ. 

ನಾಯಿ ಕಚ್ಚಿದ 30-40 ಗಾಯಗಳಿಂದಾಗಿ ಆಸ್ಪತ್ರೆ ದಾಖಲಾಗಿದ್ದ 2 ವರ್ಷದ ಮಗುವೊಂದು ಸೂರತ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಮಗುವಿನ ತಂದೆ ರವಿಕುಮಾರ್ ಖರ್ ದಂಪತಿ ದಿನಗೂಲಿ ನೌಕರರಾಗಿದ್ದು, ಡೈಮಂಡ್ ಬೌರ್ಸ್ ನ ಬಳಿ ಇರುವ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. 

ದಂಪತಿ ಭಾನುವಾರದಂದು ಕೆಲಸ ಮಾಡುತ್ತಿದ್ದಾಗ ಮಗುವಿಗೆ ನಾಯಿಗಳು ಕಚ್ಚಿವೆ ಎಂಬ ಮಾಹಿತಿ ರವಿಕುಮಾರ್ ಖರ್ ಗೆ ಬಂದಿತು. ತಕ್ಷಣವೇ ಮನೆಗೆ ಬಂದು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ಆಸ್ಪತ್ರೆಗೆ ಕರೆತಂದಾಗ ಮಗುವಿನ ಕೈ, ಕಾಲು, ಹಿಂಭಾಗ, ಎದೆಯ ಹತ್ತಿರ 30-40 ಗಾಯಗಳಾಗಿದ್ದವು, ಈ ಹಿನ್ನೆಲೆಯಲ್ಲಿ ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆಯನ್ನೂ ನಡೆಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಚೇತರಿಕೆ ಕಾಣುತ್ತಿತ್ತು ಆದರೆ ಏಕಾ ಏಕಿ ಸಾವನ್ನಪಿದೆ ಎಂದು ಡಾ. ಕೇತನ್ ನಾಯಕ್ ತಿಳಿಸಿದ್ದಾರೆ. 

ಸೂರತ್ ಪುರಸಭೆ ಸರ್ಕಾರೇತರ ಆಸ್ಪತ್ರೆಯ ಮೂಲಕ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು, ದಿನವೊಂದಕ್ಕೆ 30 ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ನಗರದಲ್ಲಿ ನಾಯಿಗಳ ಸಂಖ್ಯೆ 20,000 ದಾಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com