ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ವಿರುದ್ಧ ಹೋರಾಡುವ ಧೈರ್ಯವಿದೆ: ಮಹಾಧಿವೇಶನದಲ್ಲಿ ಪ್ರಿಯಾಂಕಾ ಗಾಂಧಿ
ನವ ರಾಯಪುರ: ಲೋಕಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು ಒಂದಾಗುವ ನಿರೀಕ್ಷೆಗಳಿವೆ. ಆದರೆ, ಹೆಚ್ಚಿನ ನಿರೀಕ್ಷೆಗಳು ಕಾಂಗ್ರೆಸ್‌ನಿಂದ ಇವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪಕ್ಷದ ಸಂದೇಶ ಮತ್ತು ಸರ್ಕಾರದ ವೈಫಲ್ಯಗಳನ್ನು ಜನರ ಬಳಿಗೆ ಕೊಂಡೊಯ್ಯುವಂತೆ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಉತ್ತೇಜಿಸಿದರು.
'ಈಗ ನಮಗೆ ಒಂದು ವರ್ಷ ಮಾತ್ರ ಉಳಿದಿದೆ. ನಮ್ಮಲ್ಲಿ (ವಿರೋಧ ಪಕ್ಷಗಳು) ನಿರೀಕ್ಷೆಗಳಿವೆ. ನಾವು ಒಂದಾಗುತ್ತೇವೆ. ಎಲ್ಲಾ ವಿರೋಧ ಪಕ್ಷಗಳು ಮತ್ತು ಅವರ (ಬಿಜೆಪಿ) ಸಿದ್ಧಾಂತವನ್ನು ವಿರೋಧಿಸುವ ಜನರು ಒಗ್ಗಟ್ಟಿನಿಂದ ಹೋರಾಡಬೇಕು. ಪ್ರತಿಯೊಬ್ಬರಿಂದಲೂ ನಿರೀಕ್ಷೆಗಳಿವೆ ಆದರೆ, ಹೆಚ್ಚಿನ ನಿರೀಕ್ಷೆಗಳು ಕಾಂಗ್ರೆಸ್‌ನಿಂದ ಇವೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲ್ಲಿ ನಡೆದ ಕಾಂಗ್ರೆಸ್‌ನ 85ನೇ ಮಹಾಧಿವೇಶನದಲ್ಲಿ ಹೇಳಿದರು.
ಪಕ್ಷಕ್ಕಾಗಿ ಹೋರಾಡುವ ಕಾಂಗ್ರೆಸ್ ಕಾರ್ಯಕರ್ತರ ಹೋರಾಟವನ್ನು ಅವರು ಶ್ಲಾಘಿಸಿದರು.
'ನಿಮಗೆ ಬಿಜೆಪಿ ವಿರುದ್ಧ ಹೋರಾಡುವ ಧೈರ್ಯವಿದೆ ಎಂದು ನಮಗೆ ತಿಳಿದಿದೆ. ದೇಶಕ್ಕಾಗಿ ಆ ಧೈರ್ಯವನ್ನು ಪ್ರದರ್ಶಿಸುವ ಸಮಯ ಬಂದಿದೆ'. ಮಂಡಲ ಮಟ್ಟದಿಂದಲೇ ಕಾಂಗ್ರೆಸ್ ಸಂಘಟನೆ ಕಟ್ಟಬೇಕು ಮತ್ತು ಬಲಪಡಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ