ಅಬಕಾರಿ ನೀತಿ ಪ್ರಕರಣ: ಸಿಬಿಐನಿಂದ ಸಿಸೋಡಿಯಾ ವಿಚಾರಣೆ, ಜೈಲಿನಲ್ಲಿರಬೇಕಾದರೂ ಸಿದ್ಧ ಎಂದ ದೆಹಲಿ ಡಿಸಿಎಂ

ದೆಹಲಿಯ ಹಿಂದಿನ ಅಬಕಾರಿ ನೀತಿಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಭಾನುವಾರ ಸಿಬಿಐ ವಿಚಾರಣೆಗೆ ಹಾಜರಾಗಲಿದ್ದು, ಈ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರಿಗೆ ಬಂಧನ ಭೀತಿ ಎದುರಾಗಿದೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿಯ ಹಿಂದಿನ ಅಬಕಾರಿ ನೀತಿಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಭಾನುವಾರ ಸಿಬಿಐ ವಿಚಾರಣೆಗೆ ಹಾಜರಾಗಲಿದ್ದು, ಈ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರಿಗೆ ಬಂಧನ ಭೀತಿ ಎದುರಾಗಿದೆ.

ಕಳೆದ ಭಾನುವಾರವೇ ಸಿಬಿಐ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದಿತ್ತು. ಆದರೆ, ಬಜೆಟ್ ಪ್ರಕ್ರಿಯೆ ಕಾರಣ ನೀಡಿ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಫೆ.26ರಂದು ವಿಚಾರಣೆ ದಿನಾಂಕ ನಿಗದಿ ಮಾಡಲಾಗಿತ್ತು.

ಈ ನಡುವೆ ಸಿಬಿಐ ತಮ್ಮನ್ನು ಬಂಧಿಸುತ್ತದೆ ಎಂಬ ಆತಂಕವನ್ನು ಮನೀಶ್ ಸಿಸೋಡಿಯಾ ಅವರು ಆತಂಕ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ ಅವರು, ಇಂದು ಮತ್ತೆ ಸಿಬಿಐ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಸಿಬಿಐ ಸಂಪೂರ್ಣ ತನಿಖೆಗೆ ಸಹಕಾರ ನೀಡುತ್ತೇನೆ. ಲಕ್ಷಾಂತರ ಮಕ್ಕಳ ಪ್ರೀತಿ ಮತ್ತು ಕೋಟ್ಯಂತರ ದೇಶವಾಸಿಗಳ ಆಶೀರ್ವಾದ ನನ್ನೊಂದಿಗಿದೆ. ಒಂದಿಷ್ಟು ತಿಂಗಳು ಜೈಲಿನಲ್ಲಿ ಇರಬೇಕಾದರೂ ನಾನು ಸಿದ್ಧ. ನಾನು ಭಗತ್ ಸಿಂಗ್ ನ ಅನುಯಾಯಿ, ದೇಶಕ್ಕಾಗಿ ಭಗತ್ ಸಿಂಗ್ ಗಲ್ಲಿಗೇರಿದ. ಇಂತಹ ಸುಳ್ಳು ಆರೋಪಗಳಿಂದ ಜೈಲಿಗೆ ಹೋಗುವುದು ಸಣ್ಣ ವಿಷಯ ಎಂದು ಹೇಳಿದ್ದಾರೆ,

ಲಕ್ಷಾಂತರ ಮಕ್ಕಳ ಮತ್ತು ಅವರ ಪೋಷಕರ ಆಶೀರ್ವಾದ ನಿಮ್ಮ ಮೇಲಿದೆ: ಸಿಎಂ ಕೇಜ್ರಿವಾಲ್ ಟ್ವೀಟ್
ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಲಕ್ಷಾಂತರ ಮಕ್ಕಳ ಮತ್ತು ಅವರ ಪೋಷಕರ ಆಶೀರ್ವಾದ ನಿಮ್ಮ ಮೇಲಿದೆ ಎಂದು ಹೇಳಿದ್ದಾರೆ.

ಲಕ್ಷಾಂತರ ಮಕ್ಕಳ ಮತ್ತು ಅವರ ಪೋಷಕರ ಆಶೀರ್ವಾದ ನಿಮ್ಮ ಮೇಲಿದೆ. ದೇಶ ಮತ್ತು ಸಮಾಜಕ್ಕಾಗಿ ಜೈಲಿಗೆ ಹೋದಾಗ ಜೈಲಿಗೆ ಹೋಗುವುದು ಶಾಪವಲ್ಲ, ಕೀರ್ತಿ, ನೀನು ಬೇಗ ಜೈಲಿನಿಂದ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಕ್ಕಳು, ಪೋಷಕರು ಮತ್ತು ದೆಹಲಿಯ ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಿಸೋಡಿಯಾ ರೋಡ್ ಶೋ
ಈ ನಡುವೆ ಸಿಬಿಐ ವಿಚಾರಣೆಗೆ ಹಾಜರಾಗಲಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಈ ವೇಳೆ ರೋಡ್ ಶೋ ನಡೆಸಲಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರೋಡ್ ಶೋ ನಡೆಯುವ ಸ್ಥಳಗಳಲ್ಲಿ ದೆಹಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com