ಕರೆನ್ಸಿ ನೋಟುಗಳಲ್ಲಿ ಗಾಂಧಿ ಬದಲಿಗೆ ಸಾವರ್ಕರ್ ಫೋಟೋ ಹಾಕಿ: ಹಿಂದೂ ಮಹಾಸಭಾ ಒತ್ತಾಯ
ಕರೆನ್ಸಿ ನೋಟುಗಳ ಮೇಲಿನ ಮಹಾತ್ಮ ಗಾಂಧಿ ಫೋಟೋ ತೆಗೆದು ವಿಡಿ ಸಾವರ್ಕರ್ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಭಾನುವಾರ ಒತ್ತಾಯಿಸಿದೆ.
Published: 26th February 2023 07:46 PM | Last Updated: 26th February 2023 07:57 PM | A+A A-

ವಿ.ಡಿ ಸಾವರ್ಕರ್
ಮೀರತ್: ಕರೆನ್ಸಿ ನೋಟುಗಳ ಮೇಲಿನ ಮಹಾತ್ಮ ಗಾಂಧಿ ಫೋಟೋ ತೆಗೆದು ವಿಡಿ ಸಾವರ್ಕರ್ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಭಾನುವಾರ ಒತ್ತಾಯಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿರುವ ಹಿಂದೂ ಮಹಾಸಭಾ, ಸಂಸತ್ ಭವನಕ್ಕೆ ಹೋಗುವ ರಸ್ತೆಗೆ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಳಿಕೊಂಡಿದೆ. ಇದು ಮೋದಿ ಸರ್ಕಾರದಿಂದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದೂ ಮಹಾಸಭಾದ ಮಾಜಿ ಅಧ್ಯಕ್ಷ ಸಾವರ್ಕರ್ ಅವರಿಗೆ ನೀಡಲಿರುವ ನಿಜವಾದ ಗೌರವವಾಗಿದೆ ಎಂದು ಮಹಾಸಭಾ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: ಸಾವರ್ಕರ್ ಪ್ರವಾಸೋದ್ಯಮ ಸರ್ಕ್ಯೂಟ್ ನಿರ್ಮಿಸುತ್ತೇವೆ: ಮಹಾ ಸಚಿವ ಲೋಧಾ
ಶಾರದಾ ರಸ್ತೆಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾದ ಕಚೇರಿಯಲ್ಲಿ ಸಾವರ್ಕರ್ ಅವರ 58ನೇ ಪುಣ್ಯತಿಥಿಯನ್ನು ಭಾನುವಾರ ಹವನ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಒಬ್ಬ ಮಹಾನ್ ಕ್ರಾಂತಿಕಾರಿ ಎಂದು ಬಣ್ಣಿಸಿದರು.