ಗುಜರಾತ್: ಕೈಗಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವು, ಹಲವರಿಗೆ ಗಾಯ
ಗುಜರಾತ್‌ನ ವಲ್ಸಾದ್ ಜಿಲ್ಲೆಯ ಕೈಗಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಉದ್ಯೋಗಿಗಳು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Published: 28th February 2023 02:02 PM | Last Updated: 28th February 2023 02:02 PM | A+A A-

ಗುಜರಾತ್‌ನ ವಲ್ಸಾದ್ ಜಿಲ್ಲೆಯ ಕೈಗಾರಿಕಾ ಘಟಕದಲ್ಲಿ ಸ್ಫೋಟ
ವಲ್ಸಾದ್: ಗುಜರಾತ್‌ನ ವಲ್ಸಾದ್ ಜಿಲ್ಲೆಯ ಕೈಗಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಉದ್ಯೋಗಿಗಳು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ರಾತ್ರಿ 11.30ರ ಸುಮಾರಿಗೆ ವೆನ್ ಪೆಟ್ರೋಕೆಮ್ ಮತ್ತು ಫಾರ್ಮಾದಲ್ಲಿ ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಲ್ಸಾದ್ ಜಿಲ್ಲಾ ಉಸ್ತುವಾರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಿಂಗ್ ಗುರ್ಜಾರ್ ತಿಳಿಸಿದ್ದಾರೆ.
ಕೇತನ್ ಪಟೇಲ್ ಪ್ರಕಾರ, 'ರಾತ್ರಿ 10.30 ರ ಸುಮಾರಿಗೆ ನನ್ನ ಚಿಕ್ಕಪ್ಪನಿಗೆ (ಕೀರ್ತಿ ಪಟೇಲ್) ಸ್ಥಾವರದಿಂದ ಕರೆ ಬಂದಿತು. ನಂತರ ಅವರು ಕೆಲಸಕ್ಕೆ ತೆರಳಿದರು. ರಾತ್ರಿ 11.30 ರ ಸುಮಾರಿಗೆ ನಮಗೆ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ ಕುರಿತು ಮಾಹಿತಿ ಬಂದಿದೆ. ಅದಾದ ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದರು.
ಅವಶೇಷಗಳಡಿಯಲ್ಲಿ ಇಬ್ಬರು ಸಿಲುಕಿರುವ ಶಂಕೆ ಇದೆ ಎಂದು ಕೇತನ್ ಹೇಳಿದ್ದಾರೆ.