ಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆ; 11 ಓಮಿಕ್ರಾನ್ ಉಪ-ರೂಪಾಂತರಗಳು ಪತ್ತೆ: ಮೂಲಗಳು

ಡಿಸೆಂಬರ್ 24 ಮತ್ತು ಜನವರಿ 3 ರ ನಡುವೆ ಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆಯ ಸಮಯದಲ್ಲಿ ಹನ್ನೊಂದು ಓಮಿಕ್ರಾನ್ ಉಪ-ರೂಪಾಂತರಗಳು ಕಂಡುಬಂದಿವೆ ಮತ್ತು ಈ ಎಲ್ಲಾ ರೂಪಾಂತರಗಳು ಭಾರತದಲ್ಲಿ ಈ ಹಿಂದೆಯೇ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು
ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು

ನವದೆಹಲಿ: ಡಿಸೆಂಬರ್ 24 ಮತ್ತು ಜನವರಿ 3 ರ ನಡುವೆ ಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆಯ ಸಮಯದಲ್ಲಿ ಹನ್ನೊಂದು ಓಮಿಕ್ರಾನ್ ಉಪ-ರೂಪಾಂತರಗಳು ಕಂಡುಬಂದಿವೆ ಮತ್ತು ಈ ಎಲ್ಲಾ ರೂಪಾಂತರಗಳು ಭಾರತದಲ್ಲಿ ಈ ಹಿಂದೆಯೇ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಈ ಅವಧಿಯಲ್ಲಿ ಪರೀಕ್ಷಿಸಲಾದ 19,227 ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ 124 ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಅವರೆಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಿಳಿಸಿವೆ.

124 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ, 40ರ ಜಿನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳನ್ನು ಪಡೆಯಲಾಗಿದೆ. ಈ ಪೈಕಿ XBB.1 ಸೇರಿದಂತೆ XBB ಯು 14 ಮಾದರಿಗಳಲ್ಲಿ ಮತ್ತು BF 7.4.1 ಒಂದು ಮಾದರಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಅವರು, ನಾಗರಿಕರು ಅನಗತ್ಯವಾಗಿ ಭಯಭೀತರಾಗಬೇಡಿ. ಆದರೆ, ಜಾಗರೂಕರಾಗಿರಿ ಮತ್ತು ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com