ಕಾಂಜಾವಾಲಾ ಮಹಿಳೆ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು: ಅಪಘಾತದ ವೇಳೆ ಪ್ರಮುಖ ಆರೋಪಿ ಕಾರಿನಲ್ಲಿ ಅಲ್ಲ ಮನೆಯಲ್ಲಿದ್ದ: ಪೊಲೀಸ್ ಹೇಳಿಕೆ

ಕಾಂಜಾವಾಲಾ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಕಾರನ್ನು ಓಡಿಸುತ್ತಿದ್ದ ಆರೋಪದ ಮೇರೆಗೆ ಬಂಧಿತನಾಗಿದ್ದ ವ್ಯಕ್ತಿ ಅಪಘಾತದ ವೇಳೆ ಕಾರಿನಲ್ಲಿ ಅಲ್ಲ ಮನೆಯಲ್ಲಿದ್ದ ಎಂಬ ಸ್ಫೋಟಕ ಮಾಹಿತಿಯನ್ನು ದೆಹಲಿ ಪೊಲೀಸರು ಹೊರ ಹಾಕಿದ್ದಾರೆ.
ದೆಹಲಿ ಕಾಂಜಾವಾಲ ಅಪಘಾತ
ದೆಹಲಿ ಕಾಂಜಾವಾಲ ಅಪಘಾತ

ನವದೆಹಲಿ: ಕಂಜಾವಾಲಾ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಕಾರನ್ನು ಓಡಿಸುತ್ತಿದ್ದ ಆರೋಪದ ಮೇರೆಗೆ ಬಂಧಿತನಾಗಿದ್ದ ವ್ಯಕ್ತಿ ಅಪಘಾತದ ವೇಳೆ ಕಾರಿನಲ್ಲಿ ಅಲ್ಲ ಮನೆಯಲ್ಲಿದ್ದ ಎಂಬ ಸ್ಫೋಟಕ ಮಾಹಿತಿಯನ್ನು ದೆಹಲಿ ಪೊಲೀಸರು ಹೊರ ಹಾಕಿದ್ದಾರೆ.

ಅಪಘಾತ ಪ್ರಕರಣದ ಪ್ರಮುಖ ಆರೋಪಿಯನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈತ ಈ ರೀತಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದ್ದು, ಇದೀಗ ಕಾರಿನ ಮಾಲೀಕ ಸೇರಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.  ಗುರುವಾರ ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಅಧಿಕಾರಿ ಸಾಗರ್ ಪಿ.ಹೂಡಾ ಅವರು ಕೊಲೆ ಪ್ರಕರಣವನ್ನು ಇನ್ನೂ ಮಾಡಬೇಕಾಗಿದೆ, ಏಕೆಂದರೆ ಕೊಲೆಗೆ ಉದ್ದೇಶದ ಅಗತ್ಯವಿದೆ ಮತ್ತು ಇದುವರೆಗಿನ ತನಿಖೆಯಲ್ಲಿ ಯಾವುದೇ ಉದ್ದೇಶವು ಬಹಿರಂಗವಾಗಿಲ್ಲ. ಅಪರಾಧ ನಡೆದ ಸ್ಥಳಕ್ಕೆ ಸಹ ಚೆನ್ನಾಗಿ ಭೇಟಿ ನೀಡಿದ್ದೇನೆ. ದೆಹಲಿ ಪೊಲೀಸರ 18 ತಂಡಗಳು ಈ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. 

ಐವರು ಆರೋಪಿಗಳು ಬಂಧಿತರಾಗಿದ್ದು, ಅವರ ಹೇಳಿಕೆಗಳ ಆಧಾರದ ಮೇಲೆ ಸಿಕ್ಕಿರುವ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಸಾಗರ್ ಹೂಡಾ ತಿಳಿಸಿದ್ದಾರೆ. ಆರೋಪಿಗಳ ಹೇಳಿಕೆಯಲ್ಲಿ ಹಲವು ಅಂಶಗಳು ವಿಭಿನ್ನವಾಗಿರುವುದು ಕಂಡು ಬಂದಿದೆ. ಸಿಸಿಟಿವಿ ಹಾಗೂ ಸಿಡಿಆರ್ ಆಧರಿಸಿ ಇನ್ನೂ ಇಬ್ಬರು ಇರುವುದು ತಿಳಿದು ಬಂದಿದೆ ಎಂದು ಅಧಿಕಾರಿ ತಿಳಿಸಿದರು.

ಯಾರನ್ನೋ ರಕ್ಷಿಸಲು ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿ?
ಇನ್ನು ಪ್ರಕರಣದಲ್ಲಿ ಬಂಧಿತನಾಗಿರುವ ದೀಪಕ್ ತನ್ನನ್ನು ಚಾಲಕ ಎಂದು ಕರೆದುಕೊಂಡಿದ್ದು, ಅಪಘಾತದ ವೇಳೆ ಕಾರು ಚಲಾಯಿಸಿದ್ದು ತಾನೆೇ ಎಂಗು ಹೇಳಿಕೊಂಡಿದ್ದಾನೆ. ಪೊಲೀಸ್ ತನಿಖೆಯ ಪ್ರಕಾರ ಮತ್ತೋರ್ವ ಬಂಧಿತ ಆರೋಪಿ ಅಮಿತ್ ವಾಹನವನ್ನು ಓಡಿಸುತ್ತಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಯಾಗಿದ್ದರು. ಆತನ ಸಹಚರನಾಗಿದ್ದ ಈತನನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ನಮ್ಮ ತಂಡವು ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಅಂತಿಮ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ ಎಂದರು.

'ಲೈಂಗಿಕ ದೌರ್ಜನ್ಯದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ'
ಸಿಸಿಟಿವಿಯ ಸಮಯದ ಪ್ರಕಾರ, ಕರೆ ದಾಖಲೆಗಳ ಆಧಾರದ ಮೇಲೆ ಯಾವುದೇ ಹಳೆಯ ಲಿಂಕ್ ಕಂಡುಬಂದಿಲ್ಲ ಎಂದು ಸಾಗರ್ ಹೂಡಾ ಹೇಳಿದ್ದಾರೆ. ಇದರೊಂದಿಗೆ ಆರೋಪಿ ಮತ್ತು ಪ್ರತ್ಯಕ್ಷದರ್ಶಿ ನಡುವೆ ಹಳೆಯ ಸಂಪರ್ಕ ಪತ್ತೆಯಾಗಿಲ್ಲ. ಲೈಂಗಿಕ ಕಿರುಕುಳವನ್ನು ಸೂಚಿಸುವ ಯಾವುದೇ ಅಂಶ ಕೂಡ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.

ಸಂತ್ರಸ್ಥೆ ಸ್ನೇಹಿತೆ ನಿಧಿ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ?
ಈ ಪ್ರಕರಣದಲ್ಲಿ ಸಂತ್ರಸ್ಥೆ ಸ್ನೇಹಿತೆ ನಿಧಿ ಪ್ರಮುಖ ಸಾಕ್ಷಿಯಾಗಿದ್ದು, ನಾವು ಅವರ 164 ಹೇಳಿಕೆಗಳನ್ನು ದಾಖಲಿಸಿದ್ದೇವೆ ಎಂದು ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ. ಅಪಘಾತದ ಬಳಿಕ ಆದರೆ ಅವರು ಪೊಲೀಸರಿಗೆ ಏಕೆ ದೂರು ನೀಡಲಿಲ್ಲ ಎಂಬುದು ನಮಗೆ ತಿಳಿಯುತ್ತಿಲ್ಲ. ನಾವು ಕೂಡ ಕೌನ್ಸೆಲಿಂಗ್ ಮಾಡಿದ್ದೇವೆ.. ಏನಾದರೂ ಟ್ರಾಮಾ ಅಥವಾ ಆಘಾತ ಆಗಿರಬಹುದು.. ಎಲ್ಲಾ ಆಯಾಮಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು. 

ಕಾರು ಮಾಲೀಕನ ಬಂಧನ
ನಮ್ಮ ಬಳಿ ಇರುವ ಆರೋಪಿಗಳನ್ನು ಮತ್ತೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದರು. ಇನ್ನೂ ಇಬ್ಬರು ಆರೋಪಿಗಳ ಬಂಧನಕ್ಕೆ ಯತ್ನಿಸಲಾಗುತ್ತಿದೆ.  ಈ ಪೈಕಿ ಕಾರು ಮಾಲೀಕ ಅಶುತೋಷ್ ಮತ್ತು ಅಂಕುಶ್ ರನ್ನು ಇಂದು ಬಂಧಿಸಲಾಗಿದೆ. ಅಶುತೋಷ್ ಕಾರು ಮಾಲೀಕ ಎಂದು ತಿಳಿದುಬಂದಿದೆ.  ಘಟನೆಯ ಕೆಲವೇ ಗಂಟೆಗಳಲ್ಲಿ ಬಂಧಿತರಾದವರು ದೀಪಕ್ ಖನ್ನಾ, ಮನೋಜ್ ಮಿತ್ತಲ್, ಅಮಿತ್ ಖನ್ನಾ, ಕ್ರಿಶನ್ ಮತ್ತು ಮಿಥುನ್. ಇನ್ನಿಬ್ಬರು ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮುಚ್ಚಿಡಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಬೆಳಗ್ಗೆ ಕಾರಿನ ಮಾಲೀಕ ಅಶುತೋಷ್ ನನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಗುರುವಾರ ಐದು ಮಂದಿ ಆರೋಪಿಗಳ ಬಂಧನವಾಗಿತ್ತು. ಅವರನ್ನು ದೆಹಲಿ ನ್ಯಾಯಾಲಯ ನಾಲ್ಕು ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಬಂಧಿತರ ಪೈಕಿ ಓರ್ವ, ಅಪಘಾತ ನಡೆದಾಗ ಕಾರಿನಲ್ಲಿ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com