ಉತ್ತರ ಪ್ರದೇಶ: ಅಕ್ರಮ ಮಾಂಸ ದಂಧೆ ಆರೋಪದ ಮೇಲೆ ಮಾಜಿ ಸಚಿವ ಯಾಕೂಬ್ ಖುರೇಷಿ ಹಾಗೂ ಪುತ್ರನ ಬಂಧನ

ಅಕ್ರಮ ಮಾಂಸ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಹಾಜಿ ಯಾಕೂಬ್ ಖುರೇಷಿ ಮತ್ತು ಅವರ ಹಿರಿಯ ಪುತ್ರ ಇಮ್ರಾನ್ ಯಾಕೂಬ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯಾಕೂಬ್ ಖುರೇಷಿ-ಇಮ್ರಾನ್
ಬಂಧಿತ ಯಾಕೂಬ್ ಖುರೇಷಿ-ಇಮ್ರಾನ್

ಮೀರತ್‌(ಉತ್ತರಪ್ರದೇಶ): ಅಕ್ರಮ ಮಾಂಸ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಹಾಜಿ ಯಾಕೂಬ್ ಖುರೇಷಿ ಮತ್ತು ಅವರ ಹಿರಿಯ ಪುತ್ರ ಇಮ್ರಾನ್ ಯಾಕೂಬ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಒಂಬತ್ತು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ತಂದೆ-ಮಗನನ್ನು ಇಬ್ಬರನ್ನೂ ಮೀರತ್ ಪೊಲೀಸರು ದೆಹಲಿಯಿಂದ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಇಬ್ಬರ ವಿರುದ್ಧ ಗೂಂಡಾ ಕಾಯ್ದೆಯನ್ನು ದಾಖಲಿಸಲಾಗಿತ್ತು.

ಹಾಜಿ ಯಾಕೂಬ್ ಮತ್ತು ಅವರ ಕುಟುಂಬದ ವಿರುದ್ಧ ಮಾರ್ಚ್ 2022ರಲ್ಲಿ ಮೀರತ್‌ನ ಖಾರ್ಖೋಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರದೇಶದಲ್ಲಿ ಯಾಕೂಬ್‌ನ ಅಕ್ರಮ ಮಾಂಸದ ಕಾರ್ಖಾನೆಯು ಹೊರಗಿನಿಂದ ತಂದ ಮಾಂಸದ ಪ್ಯಾಕೇಜಿಂಗ್ ವ್ಯವಹಾರವನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಕಾರ್ಖಾನೆಯ ಪರವಾನಿಗೆ ಅವಧಿ ಮುಗಿದಿದ್ದರೂ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ದಾಳಿಯಲ್ಲಿ ಟನ್‌ಗಟ್ಟಲೆ ಮಾಂಸ ಪತ್ತೆಯಾಗಿದ್ದು, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಯಾಕೂಬ್ ಜೊತೆಗೆ ಆತನ ಇಬ್ಬರು ಪುತ್ರರು ಹಾಗೂ ಆತನ ಪತ್ನಿಯನ್ನೂ ಪೊಲೀಸರು ಆರೋಪಿಗಳನ್ನಾಗಿ ಮಾಡಿದ್ದರು.

ತಲೆಮರೆಸಿಕೊಂಡಿದ್ದ ತಂದೆ-ಮಗನ ಸುಳಿವಿಗಾಗಿ ಆರಂಭದಲ್ಲಿ 25-25 ಸಾವಿರ ಬಹುಮಾನ ಘೋಷಿಸಲಾಗಿತ್ತು. ನಂತರ ಪೊಲೀಸರು ಅದನ್ನು 50 ಸಾವಿರಕ್ಕೆ ಹೆಚ್ಚಿಸಿದ್ದರು. ಈ ಪ್ರಕರಣದಲ್ಲಿ ಯಾಕೂಬ್ ಖುರೇಷಿ, ಸಂಜೀದಾ ಖುರೇಷಿ, ಇಮ್ರಾನ್ ಖುರೇಷಿ, ಫಿರೋಜ್ ಖುರೇಷಿ, ಮೋಹಿತ್ ತ್ಯಾಗಿ, ಫೈಜಾಬ್ ಮತ್ತು ಮುಜೀಬ್ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು 7 ಜನರ ವಿರುದ್ಧ ದರೋಡೆಕೋರರ ಕಾಯ್ದೆಯನ್ನು ಹಾಕಲಾಗಿದ್ದು, 17 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com