70 ವರ್ಷದ ವ್ಯಕ್ತಿಯನ್ನು ಬಾನೆಟ್ ಮೇಲೆ 8 ಕಿ.ಮೀ ಎಳೆದೊಯ್ದು ಕೆಳಗೆ ಇಳಿಸಿ ಕಾರು ಹತ್ತಿಸಿ ಕೊಂದ ದುರುಳ!

ದೆಹಲಿಯ ಕಂಝಾವಾಲಾದಂತಹ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ವೇಗವಾಗಿ ಬಂದ ಕಾರು 70 ವರ್ಷದ ವೃದ್ದರೊಬ್ಬರಿಗೆ ಡಿಕ್ಕಿ ಹೊಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ದೆಹಲಿಯ ಕಂಝಾವಾಲಾದಂತಹ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ವೇಗವಾಗಿ ಬಂದ ಕಾರು 70 ವರ್ಷದ ವೃದ್ದರೊಬ್ಬರಿಗೆ ಡಿಕ್ಕಿ ಹೊಡೆದಿದೆ. 

ಇದಾದ ಬಳಿಕ ಬಾನೆಟ್ ಮೇಲೆ ಸಿಲುಕಿದ್ದ ವೃದ್ಧನನ್ನು ಕಾರು ಸವಾರ ಸುಮಾರು 8 ಕಿ.ಮೀ.ವರೆಗೆ ಎಳೆದೊಯ್ದಿದ್ದು ನಂತರ ಕೆಳಗೆ ತಬ್ಬಿ ಆತನ ಮೇಲೆ ಕಾರು ಹತ್ತಿಸಿ ಕೊಂದಿರುವ ದಾರುಣ ಘಟನೆ ನಡೆದಿದೆ. ಘಟನೆಯ ನಂತರ ಆರೋಪಿ ಚಾಲಕ ಕೂಡ ಸ್ಥಳದಿಂದ ಪರಾರಿಯಾಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರೋಪಿ ಚಾಲಕ 70 ವರ್ಷದ ವ್ಯಕ್ತಿಯನ್ನು 8 ಕಿ.ಮೀ ಎಳೆದೊಯ್ದಿದ್ದು ನಂತರ ಬ್ರೇಕ್ ಹಾಕಿ ವ್ಯಕ್ತಿಯನ್ನು ಕೆಳಗೆ ಬೀಳಿಸಿದ್ದಾನೆ. ಬಳಿಕ ಕಾರನ್ನು ಆತನ ಮೇಲೆ ಹತ್ತಿಸಿ ಕೊಂದು ಪಿಪ್ರಕೋತಿ ಬಳಿ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕಳೆದ ಶುಕ್ರವಾರ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸಂಜೆ ಈ ಘಟನೆ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೋತಿಹಾರಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ವೃದ್ಧನನ್ನು ಬಂಗಾರ ಗ್ರಾಮದ ನಿವಾಸಿ 70 ವರ್ಷದ ಶಂಕರ ಚೌಧರಿ ಎಂದು ಗುರುತಿಸಲಾಗಿದೆ. ಅಪಘಾತದ ಸಮಯದಲ್ಲಿ, ವೃದ್ಧರು ತಮ್ಮ ಸೈಕಲ್‌ಗಳಲ್ಲಿ NH-28 ರ ಕೊತ್ವಾ ಬಳಿಯ ಬಂಗಾರ ರಸ್ತೆಯನ್ನು ದಾಟುತ್ತಿದ್ದರು. ಮುದುಕ ಕಾರನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ಚಾಲಕ ಕಾರನ್ನು ಚಲಾಯಿಸುತ್ತಲೇ ಇದ್ದ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮಾಲೀಕರ ಹೆಸರನ್ನು ಜಿಲ್ಲಾ ಸಾರಿಗೆ ಕಚೇರಿಯಲ್ಲಿ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಪಿಪ್ರಕೋತಿ ಪೊಲೀಸ್ ಠಾಣೆ ಎಸ್‌ಎಚ್‌ಒ ಅನುಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕಾರು ಗೋಪಾಲಗಂಜ್ ಕಡೆಯಿಂದ ಬರುತ್ತಿತ್ತು. ಸುಮಾರು ಒಂದು ಗಂಟೆ ಕಾಲ ಬಾನೆಟ್ ಮೇಲೆ ಮುದುಕನನ್ನು ಎಳೆದೊಯ್ದರು. ಸ್ಥಳೀಯರು ಸಹ ತಮ್ಮ ಬೈಕ್‌ಗಳಲ್ಲಿ ವಾಹನವನ್ನು ಹಿಂಬಾಲಿಸಿ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಕಾರು ಮೋತಿಹಾರಿ ಮೂಲದ ವೈದ್ಯರಿಗೆ ಸೇರಿದ್ದು. ಕೊತ್ವಾ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೋತಿಹಾರಿ ಎಸ್‌ಡಿಪಿಒ ಆರೂರ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಚಾಲಕನನ್ನು ಗುರುತಿಸಲು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತಿದೆ. ಘಟನೆ ನಂತರ ಸ್ಥಳೀಯರು ರಸ್ತೆ ತಡೆ ನಡೆಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com