ಹಸುವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪರಿಣಾಮವಿಲ್ಲ: ಗುಜರಾತ್ ನ್ಯಾಯಾಲಯ
ದೇಶದಲ್ಲಿ ಗೋವುಗಳನ್ನು ಸಂರಕ್ಷಿಸುವ ಅಗತ್ಯವನ್ನು ಗುಜರಾತ್‌ನ ತಾಪಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಒತ್ತಿ ಹೇಳಿದ್ದು, "ಗೋವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪರಿಣಾಮವಿರುವುದಿಲ್ಲ ಎಂದು ವಿಜ್ಞಾನವು ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟಿದೆ.
Published: 24th January 2023 11:31 AM | Last Updated: 27th January 2023 04:26 PM | A+A A-

ಸಂಗ್ರಹ ಚಿತ್ರ
ವ್ಯಾರಾ (ಗುಜರಾತ್): ದೇಶದಲ್ಲಿ ಗೋವುಗಳನ್ನು ಸಂರಕ್ಷಿಸುವ ಅಗತ್ಯವನ್ನು ಗುಜರಾತ್‌ನ ತಾಪಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಒತ್ತಿ ಹೇಳಿದ್ದು, "ಗೋವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪರಿಣಾಮವಿರುವುದಿಲ್ಲ ಎಂದು ವಿಜ್ಞಾನವು ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟಿದೆ.
ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಗುಜರಾತ್‌ನ ತಾಪಿ ಜಿಲ್ಲಾ ನ್ಯಾಯಾಲಯವು ಯುವಕನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮಹಾರಾಷ್ಟ್ರದಿಂದ ಅಕ್ರಮವಾಗಿ ದನಗಳನ್ನು ತಂದಿದ್ದ 22 ವರ್ಷದ ಯುವಕನನ್ನು ತಪ್ಪಿತಸ್ಥ ಎಂದು ಘೋಷಿಸಿದೆ.
ಶಿಕ್ಷೆಯ ತೀರ್ಪು ಪ್ರಕಟಿಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಮೀರ್ ವಿನೋದಚಂದ್ರ ವ್ಯಾಸ್, ಗೋವು ಕೇವಲ ಪ್ರಾಣಿಯಲ್ಲ, ಅದು ತಾಯಿ. ಯಾವ ದಿನ ಹಸುವಿನ ರಕ್ತವು ಭೂಮಿಯ ಮೇಲೆ ಬೀಳುವುದಿಲ್ಲವೋ ಅಂದಿನಿಂದ ಭೂಮಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಭೂಮಿಯ ಕಲ್ಯಾಣವಾಗುತ್ತದೆ. ಗೋಹತ್ಯೆ ನಿಲ್ಲಿಸಿದರೆ, ಪ್ರಪಂಚದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದೆಲ್ಲೆಡೆ ಸರ್ಕಾರಿ ಗೋಶಾಲೆಯ 31 ಗೋವುಗಳ ದತ್ತು ಸ್ವೀಕಾರ: ನಟ ಸುದೀಪ್ ಘೋಷಣೆ
16 ಕ್ಕೂ ಹೆಚ್ಚು ಹಸುಗಳು ಮತ್ತು ಅದರ ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೊಹಮ್ಮದ್ ಅಮೀನ್ ಎಂಬುವವರನ್ನು ಆಗಸ್ಟ್ 27, 2020 ರಂದು ಬಂಧನಕ್ಕೊಳಪಡಿಸಲಾಗಿತ್ತು. ಅಂದಿನಿಂದ ಅಮೀನ್ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದರು. ಇದೀಗ ಈತನಿಗೆ ಗುಜರಾತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ರೂ.5 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಧೀಶರು ತಮ್ಮ ಆದೇಶದಲ್ಲಿ, ಹಸುವಿನ ಧಾರ್ಮಿಕ ಅಂಶಗಳನ್ನು ಮಾತ್ರವಲ್ಲದೆ ಅದರ ಆರ್ಥಿಕ, ಸಾಮಾಜಿಕ, ವೈಜ್ಞಾನಿಕ ಮತ್ತು ಆರೋಗ್ಯ ಪ್ರಯೋಜನಗಳನ್ನು ಪರಿಗಣಿಸುವ ಅಗತ್ಯವನ್ನು ಸೂಚಿಸಿದ್ದಾರೆ.
ಯಾಂತ್ರೀಕೃತ ಕಸಾಯಿಖಾನೆಗಳು ಗೋವುಗಳನ್ನು ಕೊಲ್ಲಲು ಬಂದಿವೆ. ಗೋವುಗಳನ್ನು ಹತ್ಯೆ ಮಾಡಲಾಗುತ್ತಿದ್ದು, ಅವುಗಳ ಜೀವಕ್ಕೆ ದೊಡ್ಡ ಅಪಾಯವಿದೆ. ಮಾಂಸಾಹಾರಿಗಳು ಮಾಂಸವನ್ನು ಸೇವಿಸುತ್ತಾರೆ ಮತ್ತು ಇದಕ್ಕಾಗಿ ಹಸುವಿನ ಮಾಂಸವನ್ನು ಸಹ ಬಳಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಗೋವುಗಳ ದತ್ತು ಪಡೆಯುವ 'ಪುಣ್ಯಕೋಟಿ' ಯೋಜನೆ: ನೀರಸ ಸ್ಪಂದನೆ; ಆನ್ ಲೈನ್ ಮಾದರಿಗೆ ಸಿಎಂ ಒಲವು
ಇದೇ ವೇಳೆ ಜನರು ಗೋವಿನ ಪ್ರಾಮುಖ್ಯತೆಯನ್ನು ಅರಿತುಕೊಳ್ಳಲು, ನ್ಯಾಯಾಧೀಶರು ಕೆಲವು ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದರು. "ಧರ್ಮವು ಗೋವಿನಿಂದ ಹುಟ್ಟಿದೆ". ಏಕೆಂದರೆ ಧರ್ಮವು ಗೋವಿನ ಮಗನಾದ 'ವೃಷಭ' (ಗೂಳಿ) ರೂಪದಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದು, ಗೋ ಹತ್ಯೆಗಳು ಕಡಿಮೆಯಾಗುವುದರ ಬದಲಿಗೆ ಇನ್ನೂ ಹೆಚ್ಚಳವಾಗುತ್ತಿದೆ. ಇಂದು ದೇಶದಲ್ಲಿ ಗೋವುಗಳು ಅಪಾಯತದಲ್ಲಿದೆ. ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಅವುಗಳ ಹತ್ಯೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಭಾರತದಲ್ಲಿ ಈಗಾಗಲೇ ಶೇ 75 ರಷ್ಟು ಗೋವುಗಳು ಕಣ್ಮರೆಯಾಗಿವೆ ಎಂದು ನ್ಯಾಯಾಲಯ ತಿಳಿಸಿದೆ.