ಒಡಿಶಾ ಸಚಿವರಿಗೆ ಗುಂಡೇಟು ಹಾರಿಸಿದ ಪೊಲೀಸ್ ಸಿಬ್ಬಂದಿ ಮಾನಸಿಕ ಅಸ್ವಸ್ಥ: ಪತ್ನಿ ಹೇಳಿಕೆ
ಒಡಿಶಾ ಆರೋಗ್ಯ ಸಚಿವ ನಬಾ ದಾಸ್‌ಗೆ ಗುಂಡು ಹಾರಿಸಿದ ಸಹಾಯಕ ಸಬ್ ಇನ್‌ಸೆಕ್ಟರ್ ಗೋಪಾಲ್ ದಾಸ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಅವರ ಪತ್ನಿ ಹೇಳಿದ್ದಾರೆ.
Published: 30th January 2023 12:49 PM | Last Updated: 30th January 2023 07:29 PM | A+A A-

ಸಚಿವ ನಬ ದಾಸ್ ಮತ್ತು ಗುಂಡುಹಾರಿಸಿದ ಪೊಲೀಸ್ ಸಿಬ್ಬಂದಿ
ಭುವನೇಶ್ವರ: ಒಡಿಶಾ ಆರೋಗ್ಯ ಸಚಿವ ನಬಾ ದಾಸ್‌ಗೆ ಗುಂಡು ಹಾರಿಸಿದ ಸಹಾಯಕ ಸಬ್ ಇನ್‌ಸೆಕ್ಟರ್ ಗೋಪಾಲ್ ದಾಸ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಅವರ ಪತ್ನಿ ಹೇಳಿದ್ದಾರೆ.
ಸಹಾಯಕ ಸಬ್ ಇನ್‌ಸೆಕ್ಟರ್ ಗೋಪಾಲ್ ದಾಸ್ ಕಳೆದ ಎಂಟು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಔಷಧೋಪಚಾರ ಮಾಡುತ್ತಿದ್ದು, ಆರೋಗ್ಯವಾಗಿದ್ದಾರೆ ಎಂದು ಅವರ ಪತ್ನಿ ಜಯಂತಿ ದಾಸ್ ಹೇಳಿದ್ದಾರೆ.
ನಬ ದಾಸ್ ಮೇಲೆ ಗುಂಡು ಹಾರಿಸಿದ ಎಎಸ್‌ಐ ಗೋಪಾಲ್ ದಾಸ್ ಅವರ ಪತ್ನಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮ ಪತಿ ಸಚಿವರ ಮೇಲೆ ಗುಂಡು ಹಾರಿಸಿದ ಕಾರಣದ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗುಂಡಿನ ದಾಳಿಗೆ ಗುರಿಯಾಗಿದ್ದ ಒಡಿಶಾ ಸಚಿವ ನಬ ದಾಸ್ ನಿಧನ
"ನನ್ನ ಹೆಸರು ಜಯಂತಿ ದಾಸ್. ನಾನು ನಬ ದಾಸ್ ಮೇಲೆ ಗುಂಡು ಹಾರಿಸಿದ ಸುದ್ದಿ ಕೇಳಿದೆ.. ಘಟನೆ ನನಗೂ ಆಘಾತವನ್ನುಂಟು ಮಾಡಿದೆ. ಅವರು ಏಕೆ ಹೀಗೆ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ನಾನು ಬೆಳಿಗ್ಗೆಯಿಂದ ಅವರೊಂದಿಗೆ ಮಾತನಾಡಿರಲಿಲ್ಲ. ಅವರು ಸುಮಾರು ಹೊತ್ತು ನನ್ನ ಮಗಳೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದಾನೆ. ಬೆಳಿಗ್ಗೆ 11 ಗಂಟೆಗೆ ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಳಿಸಿದರು. ಅವರ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಮತ್ತು ಅದಕ್ಕಾಗಿ ಅವರು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ಕಳೆದ 8 ವರ್ಷಗಳಿಂದ ಔಷಧಿ ಸೇವಿಸುತ್ತಿದ್ದರು. ಅವರು ಔಷಧಿಗಳನ್ನು ಸೇವಿಸಿದ ನಂತರ ಅವರು ಚೆನ್ನಾಗಿ ವರ್ತಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ನಿನ್ನೆ ಆರೋಗ್ಯ ಸಚಿವ ನಬಾ ದಾಸ್ ಅವರು ಜಾರ್ಸುಗುಡಾ ಜಿಲ್ಲೆಯ ಬ್ರಜರಾಜನಗರದಲ್ಲಿ ಗುಂಡು ಹಾರಿಸಲಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಭುವನೇಶ್ವರ ಆಸ್ಪತ್ರೆಯಲ್ಲಿ ಭಾನುವಾರ ಸಾವನ್ನಪ್ಪಿದ್ದರು.