ಉತ್ತರಪ್ರದೇಶ: ಬುಲ್ಡೋಜರ್ ಕಾರ್ಯಾಚರಣೆ, ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯ ಫತೇಪುರ್ ಮನೆ ಧ್ವಂಸ!
ಫತೇಪುರ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿ ಸೋನು ಅಲಿಯಾಸ್ ಸಿಕಂದರ್ ಎಂಬ ವ್ಯಕ್ತಿಯ ನಿವಾಸದಲ್ಲಿ ಉತ್ತರ ಪ್ರದೇಶ ಪೊಲೀಸರು ಎರಡನೇ ಧ್ವಂಸ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 05th July 2023 05:09 PM | Last Updated: 05th July 2023 05:11 PM | A+A A-

ಕಾರ್ಯಾಚರಣೆ
ಫತೇಪುರ್(ಉತ್ತರಪ್ರದೇಶ): ಫತೇಪುರ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿ ಸೋನು ಅಲಿಯಾಸ್ ಸಿಕಂದರ್ ಎಂಬ ವ್ಯಕ್ತಿಯ ನಿವಾಸದಲ್ಲಿ ಉತ್ತರ ಪ್ರದೇಶ ಪೊಲೀಸರು ಎರಡನೇ ಧ್ವಂಸ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 22ರ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು ಎರಡು ದಿನಗಳ ನಂತರ ಸಂತ್ರಸ್ಥೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಇನ್ನು ಪ್ರಕರಣ ಸಂಬಂಧ ಸೋನುನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು.
ಜೂನ್ 22ರಂದು, ರಾಧಾನಗರ ಪ್ರದೇಶದ ಹಳ್ಳಿಯೊಂದರ ಹುಡುಗಿಯೊಬ್ಬಳು ಮದುವೆಗೆ ಹಾಜರಾಗಲು ಬಿಂಡ್ಕಿ ಕೊತ್ವಾಲಿ ಪ್ರದೇಶಕ್ಕೆ ಹೋಗಿದ್ದಳು. ಆಗ ಜ್ವಾಲಗಂಜ್ ನಿವಾಸಿ ಸೋನು ಅಲಿಯಾಸ್ ಸಿಕಂದರ್ ಅಲ್ಲಿಗೆ ಬಂದು ಆಕೆಯನ್ನು ಅಪಹರಿಸಿದ್ದಾನೆ. ಸಮೀಪದ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ನಂತರ ಆಕೆಯನ್ನು ಇಟ್ಟಿಗೆಯಿಂದ ಹೊಡೆದಿದ್ದನು.
ಇದಕ್ಕೂ ಮೊದಲು ಜೂನ್ 27ರಂದು ಅಧಿಕಾರಿಗಳು ಫತೇಪುರ್ ಜಿಲ್ಲೆಯ ಸೋನು ಅವರ ನಿವಾಸವನ್ನು ಧ್ವಂಸಗೊಳಿಸಿದರು. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲಿ ಧ್ವಂಸ ಕಾರ್ಯಾಚರಣೆ ನಡೆಸಲಾಯಿತು.