'ವಿಮಾನ ಹೈಜಾಕ್' ಕುರಿತು ಫೋನ್‌ನಲ್ಲಿ ಸಂಭಾಷಣೆ: ವಿಸ್ತಾರ ವಿಮಾನದಲ್ಲಿದ್ದ ಪ್ರಯಾಣಿಕನ ಬಂಧನ

'ವಿಮಾನ ಹೈಜಾಕ್' ಮಾಡುವ ಬಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಕಾರಣಕ್ಕಾಗಿ ವಿಸ್ತಾರಾ ವಿಮಾನದಲ್ಲಿದ್ದ ರಿತೇಶ್ ಸಂಜಯ್‌ಕುಮಾರ್ ಜುನೇಜಾ ಎಂದು ಗುರುತಿಸಲಾದ 23 ವರ್ಷದ ಪ್ರಯಾಣಿಕನನ್ನು ವಿಮಾನದ ಸಿಬ್ಬಂದಿ ನೀಡಿದ ದೂರಿನ ನಂತರ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: 'ವಿಮಾನ ಹೈಜಾಕ್' ಮಾಡುವ ಬಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಕಾರಣಕ್ಕಾಗಿ ವಿಸ್ತಾರಾ ವಿಮಾನದಲ್ಲಿದ್ದ ರಿತೇಶ್ ಸಂಜಯ್‌ಕುಮಾರ್ ಜುನೇಜಾ ಎಂದು ಗುರುತಿಸಲಾದ 23 ವರ್ಷದ ಪ್ರಯಾಣಿಕನನ್ನು ವಿಮಾನದ ಸಿಬ್ಬಂದಿ ನೀಡಿದ ದೂರಿನ ನಂತರ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ವಿಮಾನ ಮತ್ತು ಇದು ನಡೆದ ಮಾರ್ಗದ ಬಗ್ಗೆ ಯಾವುದೇ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ಪೋಲೀಸರ ಪ್ರಕಾರ, ವ್ಯಕ್ತಿ ಫೋನ್‌ನಲ್ಲಿ 'ಹೈಜಾಕ್' ಬಗ್ಗೆ ಮಾತನಾಡುವುದನ್ನು ವಿಮಾನದಲ್ಲಿದ್ದ ಸಿಬ್ಬಂದಿ ಕೇಳಿದ್ದಾರೆ. ಈ ವೇಳೆ ಆ ಪ್ರಯಾಣಿಕರನ್ನು ವಿಚಾರಿಸಿದಾಗ, ಆತ ಮಾನಸಿಕ ಅಸ್ವಸ್ಥ ಎಂದಿದ್ದಾನೆ.

ಮುಂಬೈನ ಸಹಾರ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ಮತ್ತು 505 (2) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಈ ವಿಷಯದ ಕುರಿತು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com