
ಉತ್ತರ ಕಾಶಿಯಲ್ಲಿ ಭೂಕಂಪನ
ಉತ್ತರಕಾಶಿ: ಉತ್ತರಾಖಂಡದಲ್ಲಿ ಸತತ ಮೂರು ಭೂಕಂಪನಗಳು ಸಂಭವಿಸಿದ್ದು, ಜನತೆ ಭಯಭೀತಿಯಿಂದ ಹೊರಗೆ ಓಡಿಬಂದ ಘಟನೆ ವರದಿಯಾಗಿದೆ.
ದೈವನಾಡು ಉತ್ತರಾಖಂಡದ ಉತ್ತರಕಾಶಿಯಲ್ಲಿ ಕೇವಲ 21 ನಿಮಿಷಗಳ ಅಂತರದಲ್ಲಿ 3 ಕಂಪನಗಳು ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಶನಿವಾರ ತಡರಾತ್ರಿ ಒಂದರ ಹಿಂದೆ ಒಂದರಂತೆ ಮೂರು ಬಾರಿ ಭೂಕಂಪನ ಸಂಭವಿಸಿದ್ದು, ಈ ಭೂಕಂಪಗಳ ಕಂಪನದಿಂದಾಗಿ ಜನರು ಗಾಬರಿಯಿಂದ ಮನೆಯಿಂದ ಹೊರಬಂದರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.5ರಷ್ಟಿತ್ತು. ಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
1/2
Report:
Uttarkashi is shaken by three consecutive earthquakes.
In the early hours of Sunday, Uttarkashi was shaken by an earthquake with a magnitude of 2.5 and two subsequent earthquakes.— OsintTV(@OsintTV) March 5, 2023
ಭೂಕಂಪನದ ಕೇಂದ್ರ ಬಿಂದು ಉತ್ತರ ಕಾಶಿಯ ತಹಸಿಲ್ ಭಟ್ವಾಡಿಯ ಸಿರೋಹ್ ಅರಣ್ಯ ಕೇಂದ್ರಿತವಾಗಿತ್ತು ಎಂದು ಭೂಕಂಪನ ಮಾಪನ ಕೇಂದ್ರದ ಮೂಲಗಳು ತಿಳಿಸಿವೆ. ಉತ್ತರಕಾಶಿಯಲ್ಲಿ ತಡರಾತ್ರಿ 12:40ಕ್ಕೆ ಇದ್ದಕ್ಕಿದ್ದಂತೆ ಪಾತ್ರೆಗಳು ಅಲುಗಾಡುವ ಸದ್ದು, ಕಿಟಕಿ ಗಾಜುಗಳ ಸದ್ದು ಕೇಳಿಸಿತು. ಇದಾದ ಸ್ವಲ್ಪ ಸಮಯದ ನಂತರ, 12:45 ಕ್ಕೆ, ಭೂಕಂಪದ ಎರಡನೇ ಕಂಪನವು ಅನುಭವವಾಯಿತು, ಇದರಿಂದಾಗಿ ಜನರು ಭಯಭೀತರಾಗಿದ್ದರು. ಅದೇ ಸಮಯದಲ್ಲಿ, ಸ್ವಲ್ಪ ಸಮಯದ ನಂತರ 1:01 ಕ್ಕೆ ಮೂರನೇ ಕಂಪನ ಸಂಭವಿಸಿತು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಅಂತೆಯೇ ಈ ರೀತಿಯಾಗಿ, ಭೂಕಂಪಗಳ ಪುನರಾವರ್ತಿತ ಕಂಪನಗಳು ದೊಡ್ಡ ಅಹಿತಕರ ಘಟನೆಯ ಸಂಕೇತವೇ ಎಂಬ ಭಯವನ್ನು ಸೃಷ್ಟಿಸಿತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅನೇಕ ಜನರು ಭಯದಿಂದ ರಾತ್ರಿಯನ್ನು ಮನೆಯ ಹೊರಗೆ ಕಳೆದರು.
ಇದನ್ನೂ ಓದಿ: Joshimath Sinking: ಜೋಶಿಮಠ ಕುಸಿತಕ್ಕೆ ಮಿತಮೀರಿದ ಜನಸಂಖ್ಯೆ, ನಿರ್ಮಾಣ, ಮೂಲಸೌಕರ್ಯ ವೃದ್ಧಿ ಕಾರಣ: IUCN
ಇತ್ತೀಚೆಗೆ ಜನವರಿ 13 ರಂದು ಉತ್ತರಕಾಶಿಯಲ್ಲಿ ಭೂಕಂಪನದ ಅನುಭವವಾಗಿತ್ತು. ಉತ್ತರಕಾಶಿಯಲ್ಲಿ ತಡರಾತ್ರಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು 2.9 ಎಂದು ಅಳೆಯಲಾಗಿತ್ತು ಮತ್ತು ಇದರ ಕೇಂದ್ರಬಿಂದುವು ನೆಲದೊಳಗೆ 10 ಕಿಮೀ ಆಳದಲ್ಲಿ ದಾಖಲಾಗಿತ್ತು.
ಸತತ ಕಂಪನಕ್ಕೆ ಕಾರಣ?
ಉತ್ತರಾಖಂಡ ರಾಜ್ಯವು ಭೂಕಂಪಗಳ ವಿಷಯದಲ್ಲಿ ಬಹಳ ಸೂಕ್ಷ್ಮವಾಗಿದೆ. ಉತ್ತರಾಖಂಡವು ಭೂಕಂಪನ ವಲಯ ಐದರಲ್ಲಿ ಬರುತ್ತದೆ. ಉತ್ತರಕಾಶಿ, ಚಮೋಲಿ, ಗರ್ವಾಲ್‌ನ ರುದ್ರಪ್ರಯಾಗ ಜಿಲ್ಲೆ ಮತ್ತು ಕುಮಾವ್‌ನ ಕಾಪ್‌ಕೋಟ್, ಧಾರ್ಚುಲಾ, ಮುನ್ಸಿಯಾರಿ ಪ್ರದೇಶಗಳು ಭೂಕಂಪದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿವೆ. ಈ ಪ್ರದೇಶಗಳಲ್ಲಿಯೂ ಉತ್ತರಕಾಶಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.
ಇದನ್ನೂ ಓದಿ: ಜೋಶಿಮಠ ಬಿಕ್ಕಟ್ಟು: ಮನೆಗಳಲ್ಲಿ ಮತ್ತೆ ಹೊಸ ಬಿರುಕು, ಸ್ಥಳೀಯರಲ್ಲಿ ಮನೆಮಾಡಿದ ಆತಂಕ
ಉತ್ತರಕಾಶಿ ಜಿಲ್ಲೆ ಭೂಕಂಪದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಜಿಲ್ಲೆಯಾಗಿದ್ದು, ಇದು ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮ ವಲಯ-4 ಮತ್ತು 5 ರಲ್ಲಿ ಬರುತ್ತದೆ. 1991 ರಲ್ಲಿ ಉತ್ತರಕಾಶಿಯಲ್ಲಿ ಸಂಭವಿಸಿದ ಭೂಕಂಪನವು ಬಹಳಷ್ಟು ನಾಶವನ್ನು ಉಂಟುಮಾಡಿತ್ತು. 6.8 ತೀವ್ರತೆಯ ಈ ಭೂಕಂಪನದಲ್ಲಿ 768 ಮಂದಿ ಪ್ರಾಣ ಕಳೆದುಕೊಂಡಿದ್ದರು. 1800 ಜನರು ತೀವ್ರವಾಗಿ ಗಾಯಗೊಂಡರು ಮತ್ತು ಮೂರು ಸಾವಿರ ಕುಟುಂಬಗಳು ನಿರಾಶ್ರಿತರಾಗಿದ್ದರು.