ಇಡಿಯಿಂದ ಕವಿತಾ ಗ್ರಿಲ್: ಹೈದ್ರಾಬಾದ್ ನಲ್ಲಿ Raid ಡಿಟರ್ಜಂಟ್ ಫೋಸ್ಟರ್ ಗಳು!

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಭಾರತ್ ರಾಷ್ಟ್ರ (ಬಿಆರ್‌ಎಸ್) ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿದ್ದಂತೆ, ಹೈದರಾಬಾದ್‌ನಾದ್ಯಂತ ಸಾರ್ವಜನಿಕ ಗೋಡೆಗಳ ಮೇಲೆ Raid ಡಿಟರ್ಜಂಟ್ ಫೋಸ್ಟರ್ ಗಳನ್ನು ಹಾಕಲಾಗಿದೆ. 
ಫೋಸ್ಟರ್ ಗಳು
ಫೋಸ್ಟರ್ ಗಳು

ಹೈದ್ರಾಬಾದ್: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಭಾರತ್ ರಾಷ್ಟ್ರ (ಬಿಆರ್‌ಎಸ್) ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿದ್ದಂತೆ, ಹೈದರಾಬಾದ್‌ನಾದ್ಯಂತ ಸಾರ್ವಜನಿಕ ಗೋಡೆಗಳ ಮೇಲೆ Raid ಡಿಟರ್ಜಂಟ್ ಫೋಸ್ಟರ್ ಗಳನ್ನು ಹಾಕಲಾಗಿದೆ. 

ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ನಾಯಕರು ಈಗ ಯಾವುದೇ ಸಂಸ್ಥೆಯಿಂದ ತನಿಖೆ ಎದುರಿಸುತ್ತಿಲ್ಲ ಎಂಬರ್ಥದ ಫೋಸ್ಟರ್ ಗಳಲ್ಲಿ , ಕೊಳಕಾಗಿದ್ದ ನಾಯಕರ ಶರ್ಟ್ ಡಿಟರ್ಜಂಟ್ ಹಾಕಿದ ತಕ್ಷಣ ಸ್ವಚ್ಛವಾಗುತ್ತದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ "ಪ್ರಜಾಪ್ರಭುತ್ವದ ವಿಧ್ವಂಸಕ" ಮತ್ತು  ಬೂಟಾಟಿಕೆಯ ಅಜ್ಜ, ಬೈ ಬೈ ಮೋದಿ ಎಂದು ಲೇವಡಿ ಮಾಡುವ ಫೋಸ್ಟರ್ ಗಳು ಗಮನ ಸೆಳೆದವು. 

ಮದ್ಯ ನೀತಿ ಪ್ರಕರಣದಲ್ಲಿ ಕೆ ಕವಿತಾ ಅವರನ್ನು ಇಡಿ ಇಂದು ದೆಹಲಿಯಲ್ಲಿ ವಿಚಾರಣೆ ನಡೆಸುತ್ತಿದೆ. ಇದಕ್ಕೂ ಮೊದಲು, ಶುಕ್ರವಾರ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಉಲ್ಲೇಖಿಸಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡುವಂತೆ ಕವಿತಾ ಫೆಡರಲ್ ಇಡಿಯನ್ನು ಕೇಳಿದ್ದರು. ಕೇಂದ್ರೀಯ ಸಂಸ್ಥೆ ಆಕೆಯ ಮನವಿಗೆ ಸಮ್ಮತಿಸಿದ್ದು, ವಿಚಾರಣೆಯನ್ನು ಇಂದಿಗೆ ಮರು ನಿಗದಿಪಡಿಸಿತ್ತು.

ಇದೇ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇಡಿ ಬಂಧಿಸಿರುವುದು ಗಮನಾರ್ಹ. ಇಡಿ ವಿಚಾರಣೆಗೆ ಸಮನ್ಸ್ ನೀಡಿದ ಗಂಟೆಗಳ ನಂತರ ಮಾರ್ಚ್ 8 ರಂದು ಅವರು ರಾಷ್ಟ್ರ ರಾಜಧಾನಿಗೆ ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com