ಉತ್ತರ ಪ್ರದೇಶ: ತಂದೆಯನ್ನು ಕೊಂದು, ಸೂಟ್‌ಕೇಸ್‌ಗೆ ತುಂಬಲು ದೇಹವನ್ನು ಕತ್ತರಿಸಿದ ಆರೋಪಿ
ಭೀಕರ ಘಟನೆಯೊಂದರಲ್ಲಿ, ಗೋರಖ್‌ಪುರದಲ್ಲಿ ವ್ಯಕ್ತಿಯೊಬ್ಬ ಆಸ್ತಿ ವಿವಾದಕ್ಕಾಗಿ ತನ್ನ 62 ವರ್ಷದ ತಂದೆಯನ್ನು ಕೊಂದಿದ್ದಾನೆ. ಸೂಟ್‌ಕೇಸ್‌ಗೆ ತುಂಬಲು ಮತ್ತು ವಿಲೇವಾರಿ ಮಾಡಲು ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ.
Published: 13th March 2023 08:55 AM | Last Updated: 13th March 2023 08:56 AM | A+A A-

ಸಾಂದರ್ಭಿಕ ಚಿತ್ರ
ಗೋರಖ್‌ಪುರ: ಭೀಕರ ಘಟನೆಯೊಂದರಲ್ಲಿ, ಗೋರಖ್‌ಪುರದಲ್ಲಿ ವ್ಯಕ್ತಿಯೊಬ್ಬ ಆಸ್ತಿ ವಿವಾದಕ್ಕಾಗಿ ತನ್ನ 62 ವರ್ಷದ ತಂದೆಯನ್ನು ಕೊಂದಿದ್ದಾನೆ.
30 ವರ್ಷದ ಆರೋಪಿ ಸಂತೋಷ್ ಕುಮಾರ್ ಗುಪ್ತಾ, ಸೂಟ್‌ಕೇಸ್‌ಗೆ ತುಂಬಲು ಮತ್ತು ವಿಲೇವಾರಿ ಮಾಡಲು ಸಂತ್ರಸ್ತ ಮುರಳಿಧರ್ ಗುಪ್ತಾ ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ.
ತಿವಾರಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೂರಜ್ ಕುಂಡ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯ ಸಹೋದರ ಪ್ರಶಾಂತ್ ಗುಪ್ತಾ ಪೊಲೀಸರಿಗೆ ದೂರು ನೀಡಿದ ನಂತರ ಭಾನುವಾರ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ಸಂತೋಷ್ ಅಲಿಯಾಸ್ ಪ್ರಿನ್ಸ್ ವಿರುದ್ಧ ತನ್ನ ತಂದೆಯನ್ನು ಕೊಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ (ನಗರ) ಕೃಷ್ಣ ಕುಮಾರ್ ಬಿಷ್ಣೋಯ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯನ್ನು ಕೊಂದು, ದೇಹವನ್ನು ತುಂಡುಗಳಾಗಿ ಕತ್ತರಿಸಿ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಹೂತಿಟ್ಟ ವ್ಯಕ್ತಿ!
ಸಂತ್ರಸ್ತನ ಪತ್ನಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಧನರಾಗಿದ್ದರು. ಮುರಳಿ ಅವರು ನೆಲ ಮಹಡಿಯಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದರು ಮತ್ತು ಮೊದಲ ಮಹಡಿಯಲ್ಲಿನ ಮನೆಯಲ್ಲಿ ವಾಸವಾಗಿದ್ದರು. ಸಂತ್ರಸ್ತ ಮನೆಯಲ್ಲಿ ಒಬ್ಬರೇ ಇದ್ದಾಗ, ಆರೋಪಿ ಹಲ್ಲೆ ನಡೆಸಿದ್ದಾನೆ.
ಮತ್ತೋರ್ವ ಪುತ್ರ ಪ್ರಶಾಂತ್ ಗುಪ್ತಾ ಮದುವೆಯೊಂದರಲ್ಲಿ ಪಾಲ್ಗೊಂಡು ತಡರಾತ್ರಿ ಮನೆಗೆ ಬಂದಿದ್ದು, ಮನೆಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ.
ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.