ಮತ್ತೊಂದು ಮೂತ್ರ ವಿಸರ್ಜನೆ ಘಟನೆ: ಈ ಬಾರಿ ರೈಲಿನಲ್ಲಿ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್‌ನಿಂದಲೇ ಅವಾಂತರ
ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ ನಡೆದಿದ್ದು, ಈ ಬಾರಿ ಅಮೃತಸರ ಮತ್ತು ಕೋಲ್ಕತ್ತಾ ನಡುವಿನ ಅಕಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯಾಗಿದೆ. ರೈಲಿನಲ್ಲಿ ನಿಯೋಜನೆಗೊಂಡಿದ್ದ ಬಿಹಾರದ ಟಿಟಿಇ ಮುನ್ನಾ ಕುಮಾರ್ ಎಂಬಾತ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
Published: 14th March 2023 12:55 PM | Last Updated: 14th March 2023 12:55 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ ನಡೆದಿದ್ದು, ಈ ಬಾರಿ ಅಮೃತಸರ ಮತ್ತು ಕೋಲ್ಕತ್ತಾ ನಡುವಿನ ಅಕಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯಾಗಿದೆ.
ರೈಲಿನಲ್ಲಿ ನಿಯೋಜನೆಗೊಂಡಿದ್ದ ಬಿಹಾರದ ಟಿಟಿಇ ಮುನ್ನಾ ಕುಮಾರ್ ಎಂಬಾತ ತನ್ನ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಮಹಿಳೆ ಮಲಗಿದ್ದಾಗ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಮೂತ್ರ ವಿಸರ್ಜನೆ ಮಾಡಿದ್ದಾನೆ. ಮಹಿಳೆ ಎಚ್ಚರಗೊಂಡು ಕೂಗಿಕೊಂಡಿದ್ದಾಳೆ ಮತ್ತು ಆಕೆಯ ಪತಿ ಟಿಟಿಇಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಇತರ ಪ್ರಯಾಣಿಕರು ಸಹ ಎಚ್ಚೆತ್ತುಕೊಂಡು ಟಿಟಿಇಯನ್ನು ಥಳಿಸಿದ್ದಾರೆ. ನಂತರ ಆತನನ್ನು ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಒಪ್ಪಿಸಿದ್ದಾರೆ. ಟಿಟಿಇಯನ್ನು ಜಿಆರ್‌ಪಿ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದೆ.
ಇದನ್ನೂ ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದ ಮಿಶ್ರಾಗೆ ಏರ್ ಇಂಡಿಯಾದಿಂದ 4 ತಿಂಗಳು ನಿಷೇಧ
ಅಮೃತಸರ ನಿವಾಸಿ ರಾಜೇಶ್ ಅವರ ಪತ್ನಿ ನೀಡಿರುವ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಆರ್‌ಪಿ ಚಾರ್‌ಬಾಗ್ ರೈಲ್ವೆ ನಿಲ್ದಾಣದ ಉಸ್ತುವಾರಿ ನವರತ್ನ ಗೌತಮ್ ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ನಂತರ, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಶಂಕರ್ ಮಿಶ್ರಾ ಅವರನ್ನು ಬಂಧಿಸಲಾಯಿತು ಮತ್ತು ಏರ್ ಇಂಡಿಯಾ ವಿಮಾನದಲ್ಲಿ ಹಾರಾಟ ಮಾಡದಂತೆ 4 ತಿಂಗಳ ನಿಷೇಧವನ್ನು ವಿಧಿಸಲಾಯಿತು.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಅಮೆರಿಕನ್ ಏರ್‌ಲೈನ್ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ
ಇತ್ತೀಚೆಗಿನ ಮತ್ತೊಂದು ಘಟನೆಯೆಂದರೆ, ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಕುಡುಕನೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ನಂತರ, ಆತನನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.