ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ: ಚರ್ಚೆಯಾಗಲಿರುವ ವಿಷಯಗಳ ಪಟ್ಟಿಯಲ್ಲಿ ವಾಣಿಜ್ಯ ಒಪ್ಪಂದ, ಚೀನಾ

ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮಾ.20 ರಂದು ಭಾರತಕ್ಕೆ ಆಗಮಿಸಿದ್ದು, ದ್ವಿಪಕ್ಷೀಯ ಸಭೆಯಲ್ಲಿ ವಾಣಿಜ್ಯ, ತಂತ್ರಜ್ಞಾನದ ಒಪ್ಪಂದವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಹಾಗೂ ಚೀನಾದಿಂದ ಎದುರಾಗುತ್ತಿರುವ ಆತಂಕಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ಜಪಾನ್ ಪ್ರಧಾನಿ-ಪ್ರಧಾನಿ ಮೋದಿ
ಜಪಾನ್ ಪ್ರಧಾನಿ-ಪ್ರಧಾನಿ ಮೋದಿ

ನವದೆಹಲಿ: ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮಾ.20 ರಂದು ಭಾರತಕ್ಕೆ ಆಗಮಿಸಿದ್ದು, ದ್ವಿಪಕ್ಷೀಯ ಸಭೆಯಲ್ಲಿ ವಾಣಿಜ್ಯ, ತಂತ್ರಜ್ಞಾನದ ಒಪ್ಪಂದವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಹಾಗೂ ಚೀನಾದಿಂದ ಎದುರಾಗುತ್ತಿರುವ ಆತಂಕಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
 
ಭಾರತ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ, ಶಾಂತಿ, ಆಹಾರ ಹಾಗೂ ಇಂಧನ ಬೆಲೆಗಳ ಏರಿಕೆ ಸವಾಲುಗಳ ಬಗ್ಗೆಯೂ ಜಪಾನ್ ಪ್ರಧಾನಿ ಕಿಶಿದಾ ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಲಿದ್ದಾರೆ.

ಇದೇ ವೇಳೆ ಭಾರತದ ಜಿ-20 ಹಾಗೂ ಜಪಾನ್ ನ ಜಿ-7 ಅಧ್ಯಕ್ಷತೆಗಳು ಒಮ್ಮುಖವಾಗಿ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ನಡುವೆ ರಕ್ಷಣೆ, ಭದ್ರತೆ, ಹೂಡಿಕೆ, ಉನ್ನತ ತಂತ್ರಜ್ಞಾನದ ವಿಷಯಗಳಲ್ಲಿ ಭಾರತ-ಜಪಾನ್ ಹೆಚ್ಚಿನ ಸಹಕಾರಕ್ಕೆ ಮುಂದಾಗುವುದನ್ನು ಈ ದ್ವಿಪಕ್ಷೀಯ ಸಭೆಯಲ್ಲಿ ನಿರೀಕ್ಷಿಸಬಹುದಾಗಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಭಾರತಕ್ಕೆ ಆಗಮಿಸಿದ್ದ ಕಿಶಿದಾ, ಅಂದು ಮುಂದಿನ 5 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ (3,20,000 ಕೋಟಿ ರೂಪಾಯಿ)ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com