ಮರ್ಯಾದಾ ಹತ್ಯೆ: ಪತ್ನಿಯನ್ನು ತವರು ಮನೆಗೆ ಕಳಿಸಿ, ಡೇಟಾ ಕೇಬಲ್‌ನಿಂದ ಮಗಳ ಕತ್ತು ಹಿಸುಕಿ ಕೊಂದ ತಂದೆ
ಮರ್ಯಾದಾ ಹತ್ಯೆಯ ಪ್ರಕರಣವೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಮಗನ ಸಮ್ಮುಖದಲ್ಲಿಯೇ ಡೇಟಾ ಕೇಬಲ್ ಬಳಸಿ ತನ್ನ ಅಪ್ರಾಪ್ತ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಾಲಕಿಯ ತಂದೆಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
Published: 21st March 2023 10:16 AM | Last Updated: 21st March 2023 11:09 AM | A+A A-

ಸಾಂದರ್ಭಿಕ ಚಿತ್ರ
ಕಾನ್ಪುರ: ಮರ್ಯಾದಾ ಹತ್ಯೆಯ ಪ್ರಕರಣವೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಮಗನ ಸಮ್ಮುಖದಲ್ಲಿಯೇ ಡೇಟಾ ಕೇಬಲ್ ಬಳಸಿ ತನ್ನ ಅಪ್ರಾಪ್ತ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾನೆ.
ಅಪರಾಧ ಮಾಡುವ ಮೊದಲು ಆತ ತನ್ನ ಪತ್ನಿಯನ್ನು ಆಕೆಯ ತಾಯಿಯ ಮನೆಗೆ ಕಳುಹಿಸಿದ್ದ. ಘಟನೆಯ ಬಗ್ಗೆ ಮಗ ತನ್ನ ತಾಯಿಗೆ ತಿಳಿಸಿದ್ದು, ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಫೋರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ಬಾಲಕಿಯ ತಂದೆಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ರಾವತ್‌ಪುರ ಪೊಲೀಸ್ ಠಾಣೆ ಪ್ರಭಾರಿ ನೀರಜ್ ಓಜಾ ಮಾತನಾಡಿ, ರಾಧಾ ಪುರಂ ನಿವಾಸಿ ಶ್ಯಾಮ್ ಬಹದ್ದೂರ್ ಎಂಬಾತ ತನ್ನ 16 ವರ್ಷದ ಮಗಳು ಅರ್ಚನಾಳ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡು ಆಕೆಗೆ ಛೀಮಾರಿ ಹಾಕಿದ್ದಲ್ಲದೆ, ಥಳಿಸಿದ್ದ. ಈ ವಿಚಾರವಾಗಿ ಪತ್ನಿ ಸಂಗೀತಾ ಅವರೊಂದಿಗೆ ಜಗಳವಾಡುತ್ತಿದ್ದ. ಪದೇ ಪದೆ ಜಗಳವಾಗುತ್ತಿದ್ದರಿಂದ ಶ್ಯಾಮ್ ಬಹದ್ದೂರ್ ಕೆಲ ದಿನಗಳ ಹಿಂದೆ ಸಂಗೀತಾಳನ್ನು ಆಕೆಯ ತವರು ಮನೆಗೆ ಕಳುಹಿಸಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: ತಂದೆ, ಸಹೋದರನಿಂದಲೇ ವೈದ್ಯಕೀಯ ವಿದ್ಯಾರ್ಥಿನಿಗೆ ಬೆಂಕಿ; 5 ಮಂದಿ ವಶಕ್ಕೆ
ಸೋಮವಾರ ಸಂಜೆ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಶ್ಯಾಮ್, ಮಗಳು ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಕಂಡಿದ್ದಾನೆ. ಈ ವೇಳೆ ಆಕೆಗೆ ತೀವ್ರವಾಗಿ ಥಳಿಸಿದ್ದಾನೆ. ತೀವ್ರವಾಗಿ ಕೋಪಗೊಂಡಿದ್ದ ಆತ, ತನ್ನ ಮಗನ ಮುಂದೆಯೇ ಅವಳ ಮೊಬೈಲ್ ಫೋನ್‌ನ ಡೇಟಾ ಕೇಬಲ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ' ಎಂದು ಓಜಾ ಹೇಳಿದರು.
ಕೃತ್ಯವನ್ನು ಒಪ್ಪಿಕೊಂಡಿರುವ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಇದರೊಂದಿಗೆ ಸ್ಥಳದಲ್ಲಿ ತನಿಖೆ ನಡೆಸಿ ಕೊಲೆಯ ಬಗ್ಗೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಫೋರೆನ್ಸಿಕ್ ತಂಡವು ಬಾಲಕಿಯ ಕತ್ತು ಹಿಸುಕಲು ಬಳಸಿದ ಡೇಟಾ ಕೇಬಲ್ ಅನ್ನು ಸಹ ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.