ಖ್ಯಾತ ಗಾಯಕಿ ಬಾಂಬೆ ಜಯಶ್ರೀಗೆ ಬ್ರೈನ್ ಹ್ಯಾಮರೇಜ್, ಆಸ್ಪತ್ರೆಗೆ ತುರ್ತು ಏರ್ ಲಿಫ್ಟ್!

ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಅವರು ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಏರ್ ಲಿಫ್ಚ್ ಮಾಡಲಾಗಿದೆ.
ಗಾಯಕಿ ಬಾಂಬೇ ಜಯಶ್ರೀ
ಗಾಯಕಿ ಬಾಂಬೇ ಜಯಶ್ರೀ

ಚೆನ್ನೈ: ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಅವರು ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಏರ್ ಲಿಫ್ಚ್ ಮಾಡಲಾಗಿದೆ.

ಬ್ರಿಟನ್ ನ ಲಿವರ್‌ಪೂಲ್ ಹೋಟೆಲ್‌ನಲ್ಲಿ ಬಾಂಬೆ ಜಯಶ್ರೀ ಅವರಿಗೆ ಮೆದುಳಿನ ರಕ್ತಸ್ರಾವವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಕೂಡಲೇ ಅವರಿಗೆ ತುರ್ತು ಮೆದುಳು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅಂತೆಯೇ ಮತ್ತೊಂದು ಮೂಲಗಳ ಪ್ರಕಾರ ಜಯಶ್ರೀ ಅವರ ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯಮೂಲಗಳು ತಿಳಿಸಿವೆ. ಗಾಯಕಿ ಜಯಶ್ರೀ ಬ್ರಿಟನ್ ಪ್ರವಾಸದಲ್ಲಿದ್ದಾಗ ಅವರು ಈ ಬ್ರೈನ್ ಹ್ಯಾಮರೇಜ್ ಗೆ ತುತ್ತಾಗಿದ್ದಾರೆ.

ವರದಿಗಳ ಪ್ರಕಾರ, ಹಿಂದಿನ ರಾತ್ರಿ ಅವರು ತೀವ್ರ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರು ಉಪಹಾರ ಮತ್ತು ಊಟಕ್ಕೆ ಬರಲಿಲ್ಲ. ನಂತರ ಅವರು ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಂತೆಯೇ ಜಯಶ್ರೀ ಅವರ ಆರೋಗ್ಯ ಸ್ಥಿರವಾದ ಬಳಿಕ ಅವರನ್ನು ಚೆನ್ನೈಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಂದು, ಅವರು ಲಿವರ್‌ಪೂಲ್ ವಿಶ್ವವಿದ್ಯಾಲಯದ ಯೊಕೊ ಒನೊ ಲೆನ್ನನ್ ಕೇಂದ್ರದ ತುಂಗ್ ಆಡಿಟೋರಿಯಂನಲ್ಲಿ ಪ್ರದರ್ಶನ ನೀಡಬೇಕಿತ್ತು. ಕಳೆದ ವಾರವಷ್ಟೇ ಸಂಗೀತ ಅಕಾಡೆಮಿಯು 2023ರ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಜಯಶ್ರೀ ಅವರಿಗೆ ಪ್ರದಾನ ಮಾಡುವುದಾಗಿ ಘೋಷಿಸಿತ್ತು.

ಜಯಶ್ರೀ ಅವರು ಚಲನಚಿತ್ರಗಳಿಗೆ ಹಲವಾರು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. ಜಯಶ್ರೀ ಅವರು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಇತ್ತೀಚೆಗಷ್ಟೇ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ ಪ್ರಶಸ್ತಿ ಲಭಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com