ಪೆನ್ನಯಾರ್ ನದಿ ವಿವಾದ: 4 ವಾರಗಳಲ್ಲಿ ನ್ಯಾಯಮಂಡಳಿ ರಚಿಸಿ ವಿವಾದ ಬಗೆಹರಿಸಲು ಕೇಂದ್ರಕ್ಕೆ 'ಸುಪ್ರೀಂ' ಸೂಚನೆ

ತಮಿಳುನಾಡು-ಕರ್ನಾಟಕ ನಡುವಿನ ಪೆನ್ನಯಾರ್ ನದಿ ವಿವಾದವನ್ನು ಬಗೆಹರಿಸಲು ಅಂತಾರಾಜ್ಯ ನದಿ ನೀರು ವಿವಾದಗಳ ನ್ಯಾಯಾಧಿಕರಣವನ್ನು ರಚಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಪ್ರಕರಣವನ್ನು ನ್ಯಾಯಮೂರ್ತಿ ಎಂಆರ್ ಶಾ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಇಡಲಾಗಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ತಮಿಳುನಾಡು-ಕರ್ನಾಟಕ ನಡುವಿನ ಪೆನ್ನಯಾರ್ ನದಿ ವಿವಾದವನ್ನು ಬಗೆಹರಿಸಲು ಅಂತಾರಾಜ್ಯ ನದಿ ನೀರು ವಿವಾದಗಳ ನ್ಯಾಯಾಧಿಕರಣವನ್ನು ರಚಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಪ್ರಕರಣವನ್ನು ನ್ಯಾಯಮೂರ್ತಿ ಎಂಆರ್ ಶಾ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಇಡಲಾಗಿದೆ.

ಕಳೆದ ಡಿಸೆಂಬರ್ 14 ರಂದು, ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಸಿಟಿ ರವಿಕುಮಾರ್ ನೇತೃತ್ವದ ನ್ಯಾಯಪೀಠವು, ನ್ಯಾಯಾಧಿಕರಣವನ್ನು ರಚಿಸಲು ಮೂರು ತಿಂಗಳ ಕಾಲಾವಕಾಶವನ್ನು ನೀಡಿತ್ತು. ಆದರೆ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರಕ್ಕೆ ಆರು ತಿಂಗಳ ಕಾಲಾವಕಾಶ ನೀಡಲು ನಿರಾಕರಿಸಿತು.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರ್ಕಾರವು ನಾಲ್ಕು ವಾರಗಳಲ್ಲಿ ನ್ಯಾಯಮಂಡಳಿಯನ್ನು ರಚಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಜಲವಿವಾದಗಳ ನ್ಯಾಯಾಧಿಕರಣದ ಸಂವಿಧಾನಕ್ಕೆ ಸಂಪುಟದ ಟಿಪ್ಪಣಿಯನ್ನು ಅನುಮೋದಿಸಿದ ಕೇಂದ್ರ ಜಲಶಕ್ತಿ ಸಚಿವರ ಅನುಸಾರವಾಗಿ ಅದನ್ನು ಗೃಹ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ನವೆಂಬರ್‌ನಲ್ಲಿ ರವಾನಿಸಲಾಗಿದೆ ಎಂದು ಕೇಂದ್ರವು ಕಳೆದ ನವೆಂಬರ್ 29, 2022ರಲ್ಲಿ ಆರು ತಿಂಗಳ ಕಾಲಾವಕಾಶ ಕೋರಿತ್ತು. 

ಯೋಜನೆಗೆ ಶಾಶ್ವತ ತಡೆಯಾಜ್ಞೆ ಕೋರಿ 2018ರ ಮೇ 18ರಂದು ತಮಿಳುನಾಡು ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಬಂದಿದೆ. ಪೆನ್ನಾಯಾರ್ ಜಲ ವಿವಾದ 2007ರಿಂದ ಎರಡೂ ರಾಜ್ಯಗಳ ಮಧ್ಯೆ ತೀವ್ರವಾಗಿತ್ತು. 

ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ, “1ನೇ ಪ್ರತಿವಾದಿಯಾದ ಕರ್ನಾಟಕ ರಾಜ್ಯ ಕೈಗೊಂಡಿರುವ ಯೋಜನೆಗಳು ತಮಿಳು ನಾಡಿನ ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ವಿಲ್ಲುಪುರಂ ಮತ್ತು ಕಡಲೂರು ಜಿಲ್ಲೆಗಳ ಲಕ್ಷಾಂತರ ರೈತರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ರಾಜ್ಯದ ಜನರ ಕುಡಿಯುವ ನೀರಿನ ಅಗತ್ಯಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ನದಿಯಲ್ಲಿ ನೀರಿನ ಮಟ್ಟ ಬಹಳ ಕಡಿಮೆಯಾಗುತ್ತದೆ ಎಂದು ವಾದಿಸಿದೆ. 

1956 ರ ಅಂತಾರಾಜ್ಯ ನದಿ ವಿವಾದ ಕಾಯಿದೆಯ ನಿಬಂಧನೆಗಳ ಪ್ರಕಾರ, ನವೆಂಬರ್ 14, 2019 ರಂದು ಕೇಂದ್ರ ಸರ್ಕಾರದ ಅಧಿಕಾರವನ್ನು ಅನ್ವಯಿಸುವ ಮತ್ತು ಅಂತಾರಾಜ್ಯ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ಸಂವಿಧಾನವನ್ನು ಕೋರಿ ಸೂಕ್ತ ಅರ್ಜಿಯನ್ನು ಸಲ್ಲಿಸಲು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com