ಪೊಂಡುಗಲ್ಲು: ಬುಧವಾರ ಮುಂಜಾನೆ ಪಲ್ನಾಡು ಜಿಲ್ಲೆಯ ಹಳ್ಳಿಯೊಂದರಲ್ಲಿ ತಾವು ಪ್ರಯಾಣಿಸುತ್ತಿದ್ದ ಆಟೋರಿಕ್ಷಾಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆಯ ತೆಲಂಗಾಣದ ಮಹಿಳೆಯರು ರಾಜ್ಯದ ಪಲ್ನಾಡು ಜಿಲ್ಲೆಯ ಪುಲಿಪಾಡು ಗ್ರಾಮಕ್ಕೆ ಮೆಣಸಿನಕಾಯಿ ಕೊಯ್ಲು ಮಾಡಲು ತೆರಳುತ್ತಿದ್ದಾಗ ಇಂದು ಮುಂಜಾನೆ ಈ ಅವಘಡ ಸಂಭವಿಸಿದೆ.
ಗುಡೂರು ಕಡೆಯಿಂದ ಲಖನೌ ಕಡೆಗೆ ಹೋಗುತ್ತಿದ್ದ ನಿಂಬೆಹಣ್ಣು ತುಂಬಿದ್ದ ಟ್ರಕ್ ಮುಂಜಾನೆ 4.42 ರ ಸುಮಾರಿಗೆ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ ಮತ್ತು ವಾಹನವನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ ಎಂದು ಗುರಜಾಲ ಉಪವಿಭಾಗಾಧಿಕಾರಿ ಎ. ಪಲ್ಲಪು ರಾಜು ಹೇಳಿದರು.
ಗಾಯಾಳುಗಳನ್ನು ತೆಲಂಗಾಣದ ಮಿರಿಯಾಲಗುಡಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಆರು ಮಹಿಳೆಯರು ತ್ರಿಚಕ್ರ ವಾಹನ ಆಟೋದಲ್ಲಿ ಪ್ರಯಾಣಿಸುತ್ತಿದ್ದ 12 ಸದಸ್ಯರ ಗುಂಪಿನ ಭಾಗವಾಗಿದ್ದರು. ಐಪಿಸಿ ಸೆಕ್ಷನ್ 304 (ಎ) ಮತ್ತು 337 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement