ಪ್ರಜಾಪ್ರಭುತ್ವ ವಿರೋಧಿಗಳನ್ನು ಸೋಲಿಸಲು ಒಗ್ಗೂಡುತ್ತಿದ್ದೇವೆ: ಉದ್ಧವ್ ಠಾಕ್ರೆ
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿಪಕ್ಷಗಳ ಒಕ್ಕೂಟ ಕಸರತ್ತು ಮುಂದುವರೆದಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಶಿವಸೇನಾ (ಯುಟಿಬಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ.
Published: 24th May 2023 02:04 PM | Last Updated: 24th May 2023 02:39 PM | A+A A-

ಉದ್ಧವ್ ಠಾಕ್ರೆ, ಕೇಜ್ರಿವಾಲ್ ಮಾತುಕತೆ
ಮುಂಬೈ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿಪಕ್ಷಗಳ ಒಕ್ಕೂಟ ಕಸರತ್ತು ಮುಂದುವರೆದಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಶಿವಸೇನಾ (ಯುಟಿಬಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ದವ್ ಠಾಕ್ರೆ, ಪ್ರಜಾಪ್ರಭುತ್ವ ವಿರೋಧಿಗಳನ್ನು ಸೋಲಿಸಲು ನಾವು ಒಗ್ಗೂಡುತ್ತಿದ್ದೇವೆ ಎಂದು ತಿಳಿಸಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಮ್ ಆದ್ಮಿ ಪಕ್ಷದ (ಎಎಪಿ) ಇಬ್ಬರು ನಾಯಕರು ನಿನ್ನೆ ಸಂಜೆಯೇ ಮುಂಬೈಗೆ ಆಗಮಿಸಿದ್ದರು. ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ಕುರಿತಾದ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧದ ಎಎಪಿಯ ಹೋರಾಟಕ್ಕೆ ಬೆಂಬಲವನ್ನು ಪಡೆಯಲು ತಮ್ಮ ರಾಷ್ಟ್ರವ್ಯಾಪಿ ಪ್ರವಾಸದ ಭಾಗವಾಗಿ ಮಂಗಳವಾರ ಕೇಜ್ರಿವಾಲ್ ಮತ್ತು ಮಾನ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾದರು.
ಇದನ್ನೂ ಓದಿ: ಪ್ರಧಾನಿ ಹುದ್ದೆ ಆಕಾಂಕ್ಷಿಗಳಿಂದ ರಾಜಕೀಯ ಪ್ರವಾಸ ಆರಂಭ: ಕೇಜ್ರಿವಾಲ್-ಮಮತಾ ಭೇಟಿಗೆ ಬಿಜೆಪಿ ಟಾಂಗ್
ದೆಹಲಿಯಲ್ಲಿ ಅಧಿಕಾರಶಾಹಿಗಳ ನೇಮಕಾತಿ ಮತ್ತು ವರ್ಗಾವಣೆಯನ್ನು ನಿಯಂತ್ರಿಸುವ ಕೇಂದ್ರ ಸುಗ್ರೀವಾಜ್ಞೆಯ ವಿರುದ್ಧದ ಹೋರಾಟದಲ್ಲಿ ಕೇಜ್ರಿವಾಲ್ ಅವರನ್ನು ಟಿಎಂಸಿ ಬೆಂಬಲಿಸುತ್ತದೆ ಎಂದು ಬ್ಯಾನರ್ಜಿ ಭರವಸೆ ನೀಡಿದರು. ಕೇಂದ್ರ ಸುಗ್ರೀವಾಜ್ಞೆಯನ್ನು ಕಾನೂನಾಗಿ ಪರಿವರ್ತಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ನಡೆಯುವ ಮತದಾನವು 2024 ರ ಚುನಾವಣೆಯ ಮುಂಚಿನ ಸೆಮಿಫೈನಲ್ ಆಗಿರುತ್ತದೆ ಎಂದು ಕೇಜ್ರಿವಾಲ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.