ನೂತನ ಸಂಸತ್ ಕಟ್ಟಡದ ಸ್ಮರಣಾರ್ಥ 75 ರೂಪಾಯಿ ನಾಣ್ಯ, ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ
ನೂತನ ಸಂಸತ್ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದು, ಕಟ್ಟಡ ಉದ್ಘಾಟನೆ ಸ್ಮರಣಾರ್ಥ 75 ರೂಪಾಯಿ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಭಾನುವಾರ ಬಿಡುಗಡೆಗೊಳಿಸಿದ್ದಾರೆ.
Published: 28th May 2023 08:47 AM | Last Updated: 28th May 2023 01:02 PM | A+A A-

ಅಂಚೆಚೀಟಿ, ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ.
ನವದೆಹಲಿ: ನೂತನ ಸಂಸತ್ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದು, ಕಟ್ಟಡ ಉದ್ಘಾಟನೆ ಸ್ಮರಣಾರ್ಥ 75 ರೂಪಾಯಿ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಭಾನುವಾರ ಬಿಡುಗಡೆಗೊಳಿಸಿದ್ದಾರೆ.
ಈ ನಾಣ್ಯವನ್ನು ನಾಲ್ಕು ಲೋಹಗಳಿಂದ ಮಾಡಲಾಗಿದ್ದು, ಶೇ.50 ಬೆಳ್ಳಿ, ಶೇ.40 ತಾಮ್ರ, ಶೇ.5 ನಿಕಲ್ ಮತ್ತು ಶೇ.5 ಸತುವನ್ನು ಈ ನಾಣ್ಯ ಹೊಂದಿದೆ. ನಾಣ್ಯದ ತೂಕ 35 ಗ್ರಾಂನಷ್ಟು ಹೊಂದಿರಲಿದೆ.
ಇನ್ನು ಅದರ ವಿನ್ಯಾಸದ ಬಗ್ಗೆ ಹೇಳುವುದಾದರೆ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭವಿದ್ದು, ಅದರ ಕೆಳಭಾಗದಲ್ಲಿ 75 ರೂ ಎಂದು ಬರೆಯಲಾಗಿದೆ.
ಸಂಸತ್ ಸಂಕೀರ್ಣ ಮತ್ತು ಹೊಸ ಸಂಸತ್ತಿನ ಕಟ್ಟಡದ ಚಿತ್ರವನ್ನು ಈ ನಾಣ್ಯ ಹೊಂದಿದೆ. ನಾಣ್ಯವು 44 ಎಂಎಂ ವ್ಯಾಸವನ್ನು ಹೊಂದಿದ್ದು, ವೃತ್ತಾಕಾರದಲ್ಲಿದೆ.
#WATCH | Prime Minister Narendra Modi releases a stamp and Rs 75 coin in the new Parliament. pic.twitter.com/7YSi1j9dW9
— ANI (@ANI) May 28, 2023