ತೆಲಂಗಾಣ ವಿಧಾನಸಭೆ ಚುನಾವಣೆ: ಮತದಾನದ ವೇಳೆ ಇಬ್ಬರು ಮತದಾರರು ಸಾವು

ತೆಲಂಗಾಣದ ಆದಿಲಾಬಾದ್ ಪಟ್ಟಣದಲ್ಲಿ ಗುರುವಾರ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಇಬ್ಬರು ಮತದಾರರು ಸಾವಿಗೀಡಾಗಿದ್ದಾರೆ. ಮತಗಟ್ಟೆಯಲ್ಲೇ ಹಿರಿಯ ನಾಗರಿಕರಿಬ್ಬರೂ ಅಸ್ವಸ್ಥರಾಗಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ತೆಲಂಗಾಣದ ಆದಿಲಾಬಾದ್ ಪಟ್ಟಣದಲ್ಲಿ ಗುರುವಾರ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಇಬ್ಬರು ಮತದಾರರು ಸಾವಿಗೀಡಾಗಿದ್ದಾರೆ.

ಮತಗಟ್ಟೆಯಲ್ಲೇ ಹಿರಿಯ ನಾಗರಿಕರಿಬ್ಬರೂ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಒಬ್ಬರು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ಟಿ ಗಂಗಮ್ಮ (78) ಮೂರ್ಛೆ ರೋಗಕ್ಕೆ ತುತ್ತಾದರು. ಕೂಡಲೇ ಅವರನ್ನು ಸರ್ಕಾರಿ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಆರ್‌ಐಎಂಎಸ್) ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಸಾವಿಗೀಡಾದರು. 

ಪಟ್ಟಣದ ಇನ್ನೊಂದು ಮತಗಟ್ಟೆಯಲ್ಲಿ ರಾಜಣ್ಣ (65) ಕುಸಿದು ಬಿದ್ದಿದ್ದಾರೆ. ಅವರನ್ನು ರಿಮ್ಸ್‌ಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com