'ಇಂಡಿಯಾ' ಹೆಸರನ್ನು 'ಭಾರತ' ಎಂದು ಬದಲಿಸಲು ಪ್ರಕ್ರಿಯೆ ಏನು? ಕಾನೂನು ಏನು ಹೇಳುತ್ತದೆ, ತಜ್ಞರು ಏನಂತಾರೆ?
ಇಂಡಿಯಾ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡುವ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ನಿನ್ನೆಯಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಪ್ರತಿಸ್ಪರ್ಧಿಯಾಗಿರುವ ಇಂಡಿಯಾ ಮೈತ್ರಿಕೂಟ ಸದಸ್ಯರು ಭಾರತ್ ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Published: 06th September 2023 11:20 AM | Last Updated: 06th September 2023 07:08 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಇಂಡಿಯಾ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡುವ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ನಿನ್ನೆಯಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಪ್ರತಿಸ್ಪರ್ಧಿಯಾಗಿರುವ ಇಂಡಿಯಾ ಮೈತ್ರಿಕೂಟ ಸದಸ್ಯರು ಭಾರತ್ ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಂವಿಧಾನದ 1 ನೇ ವಿಧಿಯಲ್ಲಿ ಬರೆದಿರುವ ಇಂಡಿಯಾ, ಅದು ಭಾರತ' ಕೇವಲ ವಿವರಣಾತ್ಮಕವಾಗಿದ್ದು, ಎರಡನ್ನು ಪರಸ್ಪರ ಬದಲಾಯಿಸಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕ ತಜ್ಞ ಪಿ ಡಿ ಟಿ ಆಚಾರಿ ಹೇಳಿದ್ದಾರೆ. ರಿಪಬ್ಲಿಕ್ ಆಫ್ ಇಂಡಿಯಾ ಹೆಸರಿನ ಯಾವುದೇ ಬದಲಾವಣೆಗೆ ಹಲವು ತಿದ್ದುಪಡಿಗಳ ಅಗತ್ಯವಿದೆ ಎನ್ನುತ್ತಾರೆ.
ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿ ನೀಡಲಾದ ಜಿ20 ಔತಣಕೂಟದ ಆಹ್ವಾನ ಹಿನ್ನೆಲೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ. ಸರ್ಕಾರವು ಇಂಡಿಯಾ ಕೈಬಿಟ್ಟು ಕೇವಲ ಭಾರತದೊಂದಿಗೆ ಉಳಿಯಲು ಯೋಜಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿ ದೇಶದ ಹೆಸರಿನ ಬಗ್ಗೆ ಭಾರಿ ಚರ್ಚೆಯನ್ನು ಹುಟ್ಟುಹಾಕಿವೆ.
ದೇಶದ ಹೆಸರಿನ ಮೇಲೆ ಪ್ರಸ್ತುತ ಸ್ಥಾನದಲ್ಲಿ ಬದಲಾವಣೆಗಳನ್ನು ತರಲು ಏನು ಮಾಡಬೇಕಾಗುತ್ತದೆ ಎಂಬುದಕ್ಕೆ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಆಚಾರಿ, ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಆರ್ಟಿಕಲ್ 1 (ಬದಲಾಯಿಸಬೇಕಾಗಿದೆ) ಮತ್ತು ನಂತರ ಅಲ್ಲಿ ಎಲ್ಲಾ ಇತರ ಸಂವಿಧಾನ ವಿಧಿಗಳಲ್ಲಿ ಪರಿಣಾಮವಾಗಿ ಬದಲಾವಣೆಗಳಾಗುತ್ತವೆ.
ಇದನ್ನೂ ಓದಿ: ಇಂಡಿಯಾ ಅಥವಾ ಭಾರತ; ನಮ್ಮ ದೇಶವನ್ನು ಏನೆಂದು ಉಲ್ಲೇಖಿಸಬೇಕು?; 2016 ರಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನೆಂದರೆ...
"ಇಂಡಿಯಾ ಪದವನ್ನು ಎಲ್ಲೆಲ್ಲ ಬಳಸಲಾಗುತ್ತಿದೆಯೋ ಅಲ್ಲೆಲ್ಲ ಹೋಗಬೇಕಾಗುತ್ತದೆ. ಒಂದು ದೇಶಕ್ಕೆ ಒಂದೇ ಹೆಸರನ್ನು ಹೊಂದಬಹುದಷ್ಟೆ. ಎರಡು ಹೆಸರುಗಳನ್ನು ಪರಸ್ಪರ ಬದಲಾಯಿಸಲು ಸಾಧ್ಯವಿಲ್ಲ, ಅದು ಭಾರತದಲ್ಲಿ ಮಾತ್ರವಲ್ಲದೆ ಹೊರಗೆ ಕೂಡ ಸಾಕಷ್ಟು ಗೊಂದಲವನ್ನು ಉಂಟುಮಾಡುತ್ತದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸುತ್ತಾ ಹೇಳುತ್ತಾರೆ.
ವಿಶ್ವಸಂಸ್ಥೆಯಲ್ಲಿ ಭಾರತದ ಹೆಸರು ರಿಪಬ್ಲಿಕ್ ಆಫ್ ಇಂಡಿಯಾ, ನಾಳೆ ರಿಪಬ್ಲಿಕ್ ಆಫ್ ಭಾರತ್ ಎಂದು ಬರೆಯಬೇಕಾದರೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಮತ್ತು ಸಂಬಂಧಿತ ಎಲ್ಲಾ ದೇಶಗಳಿಗೆ ನಮ್ಮ ದೇಶದ ಹೆಸರನ್ನು ಬದಲಿಸಲಾಗಿದೆ ಎಂದು ಸಂವಹನ ಕಳುಹಿಸಬೇಕಾಗುತ್ತದೆ.
ಆ ಬದಲಾವಣೆಯನ್ನು ಸಂವಿಧಾನದ ತಿದ್ದುಪಡಿಯಿಂದ ತರಬೇಕು, ಇಲ್ಲದಿದ್ದರೆ ಇಂಡಿಯಾದ ಹೆಸರು ಇಂಡಿಯಾ ಎಂದು ಮಾತ್ರ ಇರುತ್ತದೆ. ಇಂಡಿಯಾ ಎಂದರೆ ಭಾರತ ಎಂದು ಸಂವಿಧಾನ ವಿಧಿ 1 ರಲ್ಲಿ ಬರೆಯಲಾಗಿದೆ, ಇದು ಕೇವಲ ವಿವರಣಾತ್ಮಕವಾಗಿದೆ, ಇವೆರಡೂ ಪರಸ್ಪರ ಬದಲಾಯಿಸಿಕೊಳ್ಳುವುದಿಲ್ಲ. ಅವುಗಳನ್ನು ಅದಲು ಬದಲಾಗಿ ಬಳಸುವುದೆಂದರೆ ಆತ್ಮಹತ್ಯೆ ಮಾಡಿಕೊಂಡಂತೆ. ಒಂದು ದೇಶಕ್ಕೆ ಯಾವಾಗಲೂ ಒಂದೇ ಹೆಸರಿರುವುದು ವಾಡಿಕೆ ಎನ್ನುತ್ತಾರೆ ಆಚಾರಿ.
ಇದನ್ನೂ ಓದಿ: 'INDIA' ಮೈತ್ರಿಕೂಟವು 'ಭಾರತ್' ಎಂದು ಮರುನಾಮಕರಣ ಮಾಡಿಕೊಂಡರೆ, ಬಿಜೆಪಿ ಮತ್ತೆ ಹೆಸರು ಬದಲಿಸುತ್ತದೆಯೇ: ಅರವಿಂದ್ ಕೇಜ್ರಿವಾಲ್
ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಹೆಸರು ಬದಲಾವಣೆಯ ವಿಷಯ ಪ್ರಸ್ತಾಪವಾಗಬಹುದು ಎಂಬ ಊಹಾಪೋಹಗಳ ನಡುವೆ, ಹಲವಾರು ವಿರೋಧ ಪಕ್ಷದ ನಾಯಕರು "ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿದೆ" ಮತ್ತು ನಿಬಂಧನೆ ಎಂದು ಹೇಳುವ ಆರ್ಟಿಕಲ್ 1 ನ್ನು ಹಂಚಿಕೊಂಡಿದ್ದಾರೆ. ಅದು ದೇಶದ ರಾಷ್ಟ್ರಪತಿಗಳನ್ನು "ಪ್ರೆಸಿಡೆಂಟ್ ಆಫ್ ಇಂಡಿಯಾ" ಎಂದು ಉಲ್ಲೇಖಿಸುತ್ತದೆ.