ನಿಫಾ ವೈರಸ್ ಹಾವಳಿಯಿಂದ ಕಂಗೆಟ್ಟಿದ್ದ ಕೇರಳ ನಿರಾಳ; 42 ಮಾದರಿಗಳ ಫಲಿತಾಂಶ ನೆಗೆಟಿವ್: ವೀಣಾ ಜಾರ್ಜ್
ಹೆಚ್ಚಿನ ಅಪಾಯ ಹೊಂದಿದ್ದ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಗಳ 42 ಮಾದರಿಗಳ ಪರೀಕ್ಷೆಯ ಫಲಿತಾಂಶ ದೊರಕಿದ್ದು, ಸದ್ಯ ಯಾವುದೇ ಹೊಸ ನಿಪಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇರಳ ಸರ್ಕಾರ ಭಾನುವಾರ ಹೇಳಿದೆ.
Published: 17th September 2023 01:21 PM | Last Updated: 17th September 2023 01:24 PM | A+A A-

ಪ್ರಾತನಿಧಿಕ ಚಿತ್ರ
ಕೋಯಿಕ್ಕೋಡ್: ಹೆಹೆಚ್ಚಿನ ಅಪಾಯ ಹೊಂದಿದ್ದ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಗಳ 42 ಮಾದರಿಗಳ ಪರೀಕ್ಷೆಯ ಫಲಿತಾಂಶ ದೊರಕಿದ್ದು, ಸದ್ಯ ಯಾವುದೇ ಹೊಸ ನಿಪಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇರಳ ಸರ್ಕಾರ ಭಾನುವಾರ ಹೇಳಿದೆ.
ಇಂದು ಬೆಳಗ್ಗೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, ಎಲ್ಲಾ 42 ಮಾದರಿಗಳ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಲಭ್ಯವಾಗಿದೆ. ಇನ್ನಷ್ಟು ಮಾದರಿಗಳ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ ಮತ್ತು ಇಂದೇ ಅವುಗಳ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ ಎಂದರು.
ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗದಿರುವುದರಿಂದ ಎಷ್ಟು ಸಮಯದವರೆಗೆ ಜಾಗರೂಕತೆ ಮತ್ತು ಎಚ್ಚರಿಕೆ ವಹಿಸಬೇಕು ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳ ಪ್ರಕಾರ, ಕಳೆದ ಸಕಾರಾತ್ಮಕ ಪ್ರಕರಣದಿಂದ 42 ದಿನಗಳವರೆಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಕೇರಳದ ಕೋಯಿಕ್ಕೋಡ್‌ನಲ್ಲಿ ನಿಪಾ ವೈರಸ್‌ನಿಂದ ಇಬ್ಬರು ಸಾವು; ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಚ್ಚೆಚ್ಚರ!
ಸೋಂಕಿತರು ಭೇಟಿ ನೀಡಿದ ಪ್ರದೇಶದಲ್ಲಿದ್ದ ಅನೇಕ ವ್ಯಕ್ತಿಗಳಿಗೆ ಫೋನ್ ಕರೆ ಮಾಡಿದಾಗ, ಅವರು ತಾವು ಅಲ್ಲಿಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಪೂರ್ಣಗೊಳಿಸಲು ಪೊಲೀಸರ ಸಹಾಯವನ್ನು ಪಡೆಯಲಾಗುತ್ತದೆ. ಆದ್ದರಿಂದ ನಾವು ಅವರ ಮೊಬೈಲ್ ಟವರ್ ಸ್ಥಳಗಳನ್ನು ಪತ್ತೆಹಚ್ಚಲು ಪೊಲೀಸರ ಸಹಾಯವನ್ನು ಪಡೆಯುತ್ತೇವೆ. ಸಂಪರ್ಕ ಪತ್ತೆಹಚ್ಚುವಿಕೆಗೆ ಮಾತ್ರ ಇದನ್ನು ಮಾಡಲಾಗುತ್ತಿದೆ ಎಂದರು.
ಈಮಧ್ಯೆ, ಕೇಂದ್ರದ ತಂಡವು 2018 ರಲ್ಲಿ ನಿಪಾ ವೈರಸ್ ಉಲ್ಬಣಿಸಿದ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಿದೆ ಮತ್ತು ಅಲ್ಲಿ ಯಾವುದೇ ಪರಿಸರ ಬದಲಾವಣೆಗಳಾಗಿವೆಯೇ ಎಂದು ನೋಡಲಿದೆ. ಇದಲ್ಲದೆ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಂಡಗಳು ಜಿಲ್ಲೆಯಲ್ಲಿ ಕ್ಷೇತ್ರ ಸಮೀಕ್ಷೆಯನ್ನು ನಡೆಸುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಸೋಂಕು ದೃಢ; ಸಲಹೆ-ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ
'ವೈರಸ್‌ನ ಜೀನೋಮಿಕ್ ಸೀಕ್ವೆನ್ಸಿಂಗ್ ಅನ್ನು ಸಹ ನಡೆಸಲಾಗುತ್ತಿದೆ. ಬಾವಲಿ ಸಮೀಕ್ಷೆಯೂ ನಡೆಯುತ್ತಿದೆ. ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಬಾವಲಿ ಸಮೀಕ್ಷೆಯನ್ನು ನಡೆಸಲಾಯಿತು' ಎಂದು ಜಾರ್ಜ್ ಹೇಳಿದರು.
ಕೇಂದ್ರೀಯ ಬಾವಲಿ ಕಣ್ಗಾವಲು ತಂಡವು ಸಹ ಇಲ್ಲಿ ಸಸ್ತನಿಗಳ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಎಲ್ಲಾ ನಿಪಾ ಪಾಸಿಟಿವ್ ರೋಗಿಗಳು ಮತ್ತು ವೆಂಟಿಲೇಟರ್ ಬೆಂಬಲದಲ್ಲಿರುವ ಒಂಬತ್ತು ವರ್ಷದ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದರು.
ಸದ್ಯ ರಾಜ್ಯದಲ್ಲಿ ಆರು ನಿಪಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಆರು ಮಂದಿಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 4ಕ್ಕೆ ಏರಿಕೆಯಾಗಿದೆ.