ಶೀಘ್ರದಲ್ಲೇ ನಿಮ್ಮನ್ನು ಹೊರಗಡೆ ಭೇಟಿಯಾಗುತ್ತೇನೆ: ತಿಹಾರ್ ಜೈಲಿನಿಂದ ಎಎಪಿ ನಾಯಕ ಮನೀಶ್ ಸಿಸೋಡಿಯಾ ಪತ್ರ

ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯದೊಂದಿಗೆ ತಮ್ಮ ದುಃಸ್ಥಿತಿಯನ್ನು ಹೋಲಿಸಿರುವ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ತಿಹಾರ್ ಜೈಲಿನಿಂದ ತಮ್ಮ ವಿಧಾನಸಭಾ ಕ್ಷೇತ್ರದ ಜನರಿಗೆ ಪತ್ರ ಬರೆದಿದ್ದು, ಶಿಕ್ಷಣದ ಬಗೆಗಿನ ತಮ್ಮ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯದೊಂದಿಗೆ ತಮ್ಮ ದುಃಸ್ಥಿತಿಯನ್ನು ಹೋಲಿಸಿರುವ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ತಿಹಾರ್ ಜೈಲಿನಿಂದ ತಮ್ಮ ವಿಧಾನಸಭಾ ಕ್ಷೇತ್ರದ ಜನರಿಗೆ ಪತ್ರ ಬರೆದಿದ್ದು, ಶಿಕ್ಷಣದ ಬಗೆಗಿನ ತಮ್ಮ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶೀಘ್ರದಲ್ಲೇ ತಾವು ಜೈಲಿನಿಂದ ಹೊರಬರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

'ಶೀಘ್ರದಲ್ಲೇ ನಿಮ್ಮನ್ನು ಹೊರಗೆ ಭೇಟಿಯಾಗುತ್ತೇನೆ. ಬ್ರಿಟಿಷ್ ಆಡಳಿತಗಾರರಿಗೂ ಅಧಿಕಾರದ ದುರಹಂಕಾರವಿತ್ತು ಮತ್ತು ಅವರು ಜನರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದರು. ಅನೇಕ ವರ್ಷ ಜೈಲಿನಲ್ಲಿ ಕಳೆದ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರು ತಮಗೆ ಸ್ಫೂರ್ತಿ ಎಂದಿದ್ದಾರೆ.

ಮನೀಶ್ ಸಿಸೋಡಿಯಾ
ಕೇಜ್ರಿವಾಲ್ ಸಂದೇಶ ಓದಿದ ಸುನೀತಾ ಕೇಜ್ರಿವಾಲ್; ಪ್ರತಿದಿನ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಎಎಪಿ ಶಾಸಕರಿಗೆ ಸಲಹೆ

ಶನಿವಾರ ದೆಹಲಿ ನ್ಯಾಯಾಲಯದಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆ ನಿಗದಿಯಾಗಿದೆ.

ಪೂರ್ವ ದೆಹಲಿಯ ತನ್ನ ವಿಧಾನಸಭಾ ಕ್ಷೇತ್ರವಾದ ಪತ್ಪರ್‌ಗಂಜ್‌ನ ಜನರಿಗೆ ಬರೆದ ಪತ್ರದಲ್ಲಿ ಸಿಸೋಡಿಯಾ, 'ದೇಶದ ಸ್ವಾತಂತ್ರ್ಯಕ್ಕಾಗಿ ಜನರು ಹೋರಾಡಿದಂತೆ ಉತ್ತಮ ಶಿಕ್ಷಣ ಮತ್ತು ಶಾಲೆಗಳಿಗಾಗಿ ಹೋರಾಟ ನಡೆಯುತ್ತಿದೆ. ಶಿಕ್ಷಣ ಕ್ರಾಂತಿ ಜಿಂದಾಬಾದ್. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ' ಎಂದು ತಿಳಿಸಿದ್ದಾರೆ.

ಮನೀಶ್ ಸಿಸೋಡಿಯಾ
ದೆಹಲಿ ಅಬಕಾರಿ ಪ್ರಕರಣ: ಮನೀಶ್ ಸಿಸೋಡಿಯಾ, ಪತ್ನಿ ಇತರರಿಗೆ ಸೇರಿದ 52 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಸೆರೆವಾಸದಲ್ಲಿರುವಾಗ ತಮ್ಮ ಕ್ಷೇತ್ರದ ಜನರ ಮೇಲಿನ ಪ್ರೀತಿ ಹೆಚ್ಚಿದೆ ಮತ್ತು ಅವರೇ ನನ್ನ ಶಕ್ತಿ. ಬ್ರಿಟಿಷರ ಸರ್ವಾಧಿಕಾರದ ನಡುವೆಯೂ ಸ್ವಾತಂತ್ರ್ಯದ ಕನಸು ನನಸಾಯಿತು. ಅದೇ ರೀತಿ ಪ್ರತಿ ಮಗುವೂ ಮುಂದೊಂದು ದಿನ ಉತ್ತಮ ಶಿಕ್ಷಣ ಪಡೆಯುತ್ತದೆ. ಅಭಿವೃದ್ಧಿ ಹೊಂದಿದ ದೇಶಕ್ಕೆ ಉತ್ತಮ ಶಿಕ್ಷಣ ಅಗತ್ಯ ಎಂದು ಸಿಸೋಡಿಯಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com