ಕೇರಳ: ಯೂಟ್ಯೂಬರ್ ಗುಂಪು ಹತ್ಯೆ, 10 ಮಂದಿ ಬಂಧನ

ಗುರುವಾರ ರಾತ್ರಿ ಮುವಾಟ್ಟುಪುಳ ಸಮೀಪದ ವಾಲಕೋಮ್‌ನಲ್ಲಿ ವಲಸೆ ಕಾರ್ಮಿಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತನಿಖೆಯಿಂದ ಗುಂಪು ಹತ್ಯೆ ದೃಢಪಟ್ಟಿದೆ ಎಂದು ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಚ್ಚಿ: ಗುರುವಾರ ರಾತ್ರಿ ಮುವಾಟ್ಟುಪುಳ ಸಮೀಪದ ವಾಲಕೋಮ್‌ನಲ್ಲಿ ವಲಸೆ ಕಾರ್ಮಿಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತನಿಖೆಯಿಂದ ಗುಂಪು ಹತ್ಯೆ ದೃಢಪಟ್ಟಿದೆ ಎಂದು ವರದಿಯಾಗಿದೆ. ಅರುಣಾಚಲ ಪ್ರದೇಶ ಮೂಲದ ಮತ್ತು ವಾಲಕೊಮ್‌ನ ರೆಸ್ಟೋರೆಂಟ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಅಶೋಕ್ ದಾಸ್ (24) ಮೇಲೆ ಹಲ್ಲೆ ನಡೆಸಿದ ಶಂಕಿತ 10 ಜನರನ್ನು ಶನಿವಾರ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಕುರಿತು ಮಾತನಾಡಿದ ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ, ಪ್ರಾಥಮಿಕ ತನಿಖೆಯಲ್ಲಿ ಗುಂಪೊಂದು ಅಶೋಕ್ ಮೇಲೆ ಹಲ್ಲೆ ನಡೆಸಿದ್ದು, ನೈತಿಕ ಪೊಲೀಸ್ ಗಿರಿಯ ತಪ್ಪಾಗಿರಬಹುದು ಎಂದು ತಿಳಿಸಿದ್ದಾರೆ. “ನಮ್ಮ ಅಶೋಕ್‌ಗೆ ತಲೆ ಮತ್ತು ಎದೆಗೆ ಗಾಯಗಳಾಗಿವೆ ಮತ್ತು ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ಮರಣೋತ್ತರ ಪರೀಕ್ಷೆಯು ಗಾಯಗಳನ್ನು ದೃಢಪಡಿಸಿದೆ. ತನಿಖೆಯ ಆಧಾರದ ಮೇಲೆ ಅಶೋಕ್‌ನನ್ನು ಕಂಬಕ್ಕೆ ಕಟ್ಟಿ ಹಾಕಿದ ಗುಂಪಿನಲ್ಲಿದ್ದ 10 ಮಂದಿಯನ್ನು ಬಂಧಿಸಿದ್ದೇವೆ. ಬಂಧಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದರು.

ಸಾಂದರ್ಭಿಕ ಚಿತ್ರ
ಮೈಸೂರು: ಹನುಮ ಜಯಂತಿ ವೇಳೆ ಗುಂಪು ಘರ್ಷಣೆ; ಯುವ ಬ್ರಿಗೇಡ್​ ಕಾರ್ಯಕರ್ತನ ಬರ್ಬರ ಹತ್ಯೆ

ಪೊಲೀಸರ ಪ್ರಕಾರ, ಅಶೋಕ್ ಅವರನ್ನು ಕಂಬಕ್ಕೆ ಕಟ್ಟಿಹಾಕುವ ಮೊದಲು ಮತ್ತು ನಂತರ ಹಲ್ಲೆ ನಡೆಸಲಾಗಿದೆ. ಅಶೋಕ್ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆತನ ಮಹಿಳಾ ಸ್ನೇಹಿತೆ ಮತ್ತು ಆಕೆಯ ಮನೆಯವರು ಹೇಳಿಕೆ ನೀಡಿದ್ದಾರೆ.

ಒನ್ಮನೋರಮಾ ವರದಿಯ ಪ್ರಕಾರ ಅಶೋಕ್ ದಾಸ್ ಅವರು ಯೂಟ್ಯೂಬರ್ ಆಗಿದ್ದು, ಅವರು ಹತ್ಯೆಯಾದ 11 ದಿನಗಳ ಮೊದಲು ಲಾಸ್ಟ್ ಆಫ್ ಟೈಮ್ ಶೀರ್ಷಿಕೆಯ ಅವರ ಇತ್ತೀಚಿನ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.

ವಾಲಕೊಮ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಮಹಿಳಾ ಸಹೋದ್ಯೋಗಿಯ ನಿವಾಸದಿಂದ ದಾಸ್ ಅವರನ್ನು ಗುಂಪೊಂದು ಹಿಡಿದು ಥಳಿಸಿದೆ ಎಂದು ವರದಿಯಾಗಿದೆ. ಮಾಜಿ ಪಂಚಾಯತ್ ಸದಸ್ಯರೊಬ್ಬರು ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com