ಭಾರತ-ಚೀನಾ ಗಡಿ ಪರಿಸ್ಥಿತಿಯತ್ತ ತುರ್ತಾಗಿ ಗಮನಹರಿಸಬೇಕಿದೆ: ಪ್ರಧಾನಿ ಮೋದಿ

ಭಾರತ-ಚೀನಾ ಗಡಿ ಪರಿಸ್ಥಿತಿಯತ್ತ ತುರ್ತಾಗಿ ಗಮನ ಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
PM Modi-Xi jinping
ಮೋದಿ-ಕ್ಸೀ ಜಿನ್ಪಿಂಗ್online desk
Updated on: 

ನವದೆಹಲಿ: ಭಾರತ-ಚೀನಾ ಗಡಿ ಪರಿಸ್ಥಿತಿಯತ್ತ ತುರ್ತಾಗಿ ಗಮನ ಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ದ್ವಿಪಕ್ಷೀಯ ಸಂವಹನಗಳಲ್ಲಿ ಅಸಹಜತೆಗಳನ್ನು ನಿವಾರಿಸುವುದಕ್ಕಾಗಿ ಗಡಿ ಪರಿಸ್ಥಿತಿಯತ್ತ ಗಮನಹರಿಸಬೇಕು ಎಂದು ಮೋದಿ ಹೇಳಿದ್ದಾರೆ.

ಉಭಯ ದೇಶಗಳು ಮುಖ್ಯವಾದ ಸಂಬಂಧಗಳನ್ನು ಹೊಂದಿವೆ ಎಂದಿರುವ ಪ್ರಧಾನಿ, ಇಡೀ ಜಗತ್ತಿಗೆ ಭಾರತ-ಚೀನಾದ ಸ್ಥಿರ ಸಂಬಂಧಗಳು ಮುಖ್ಯವಾಗಿರುತ್ತದೆ ಎಂದು ಅಮೇರಿಕಾದ ನ್ಯೂಸ್ ವೀಕ್ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತಕ್ಕೆ ಚೀನಾದೊಂದಿಗಿನ ಸಂಬಂಧ ಮುಖ್ಯ ಹಾಗೂ ಮಹತ್ವದ್ದಾಗಿದೆ. ದೀರ್ಘಾವಧಿಯಿಂದ ಇರುವ ನಮ್ಮ ಗಡಿ ಪರಿಸ್ಥಿತಿಗಳತ್ತ ತುರ್ತಾಗಿ ಗಮನಹರಿಸಬೇಕು ತನ್ಮೂಲಕ ದ್ವಿಪಕ್ಷೀಯ ಸಂಬಂಧಗಳಲ್ಲಿನ ಅಸಹಜತೆಗಳನ್ನು ನಿವಾರಿಸಬೇಕು ಎಂಬುದು ನನ್ನ ನಂಬಿಕೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

PM Modi-Xi jinping
ಭಾರತದ ಒಂದಿಂಚು ಭೂಮಿಯನ್ನೂ ಚೀನಾ ಅತಿಕ್ರಮಿಸಲು ಸಾಧ್ಯವಿಲ್ಲ: Amit Shah

ಸಕಾರಾತ್ಮಕ ಮಾತುಕತೆ ಮೂಲಕ ಉಭಯ ದೇಶಗಳು ತನ್ನ ಗಡಿಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಇದೇ ವೇಳೆ ಆಶಿಸಿದ್ದಾರೆ. 2020 ರಲ್ಲಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ತಮ್ಮ ಸೈನಿಕರ ನಡುವಿನ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧಗಳು ಹದಗೆಟ್ಟಿದೆ. ಘರ್ಷಣೆಯಲ್ಲಿ ಸುಮಾರು 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು, ಚೀನಾ ಅನಿರ್ದಿಷ್ಟ ಸಂಖ್ಯೆಯ ಸಾವುನೋವುಗಳನ್ನು ಎದುರಿಸಿತ್ತು ಈ ಬಳಿಕ ಉನ್ನತ ಮಟ್ಟದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com