ರಣಧೀರ್ ಜೈಸ್ವಾಲ್
ರಣಧೀರ್ ಜೈಸ್ವಾಲ್

ಇಸ್ರೇಲ್-ಇರಾನ್ ಉದ್ವಿಗ್ನತೆಯ ನಡುವೆ ರಾಜತಾಂತ್ರಿಕ ಪಥದಲ್ಲಿ ನಡೆಯಲು ಭಾರತ ಸಲಹೆ

ಇರಾನ್- ಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ನಡುವೆಯೇ ಭಾರತ ರಾಜತಾಂತ್ರಿಕ ಪಥದಲ್ಲಿ ನಡೆಯುವುದಕ್ಕೆ ಉಭಯ ದೇಶಗಳಿಗೆ ಸಲಹೆ ನೀಡಿದೆ.

ನವದೆಹಲಿ: ಇರಾನ್- ಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ನಡುವೆಯೇ ಭಾರತ ರಾಜತಾಂತ್ರಿಕ ಪಥದಲ್ಲಿ ನಡೆಯುವುದಕ್ಕೆ ಉಭಯ ದೇಶಗಳಿಗೆ ಸಲಹೆ ನೀಡಿದೆ.

ಇಸ್ರೇಲ್ ಮೇಲೆ ಇರಾನ್ ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆ ನೀಡಿರುವ ಭಾರತ ತಕ್ಷಣವೇ ಉದ್ವಿಗ್ನತೆಯನ್ನು ತಗ್ಗಿಸುವಂತೆ ಕರೆ ನೀಡಿದೆ.

ರಣಧೀರ್ ಜೈಸ್ವಾಲ್
ಇಸ್ರೇಲ್ ಮೇಲೆ ಇರಾನ್ ದಾಳಿ: israelನಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಇಸ್ರೇಲ್-ಇರಾನ್ ನಡುವಿನ ಹಗೆತನದಿಂದಾಗಿ ಈ ಪ್ರದೇಶದಲ್ಲಿ ಶಾಂತಿ ಹಾಗೂ ಭದ್ರತೆಗೆ ಅಪಾಯ ಎದುರಾಗಲಿದೆ. ಆದ್ದರಿಂದ ಇದು "ತಕ್ಷಣವೇ ಸಂಯಮ ಕಾಯ್ದುಕೊಳ್ಳಬೇಕು, ಹಿಂಸೆಯಿಂದ ಹಿಂದೆ ಸರಿಯಬೇಕು ಎಂದು ಭಾರತ ಕರೆ ನೀಡಿದೆ. ಎರಡೂ ದೇಶಗಳು ರಾಜತಾಂತ್ರಿಕತೆಯ ಹಾದಿಗೆ ಮರಳುವಂತೆ ಭಾರತ ಇದೇ ವೇಳೆ ಒತ್ತಾಯಿಸಿದೆ.

ವಿದೇಶಾಂಗ ಸಚಿವಾಲಯ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. "ಈ ಪ್ರದೇಶದಲ್ಲಿನ ನಮ್ಮ ರಾಯಭಾರ ಕಚೇರಿಗಳು ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿವೆ. ಈ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದೆ.

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಹತ್ವದ ಸಲಹೆಯನ್ನು ನೀಡಿದೆ. ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತಾ ಪ್ರೋಟೋಕಾಲ್‌ಗೆ ಬದ್ಧರಾಗಿರುವುದಕ್ಕೆ ಮತ್ತು ಶಾಂತವಾಗಿರುವುದಕ್ಕೆ ಭಾರತೀಯರನ್ನು ಒತ್ತಾಯಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com