ಇರಾನ್ ದಾಳಿ: ಇಸ್ರೇಲ್ ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ

ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆ ಬೆನ್ನಲ್ಲೇ ಇದೀಗ ಇರಾನ್ ದಾಳಿಯಿಂದಾಗಿ ಇಸ್ರೇಲ್ ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಇಸ್ರೇಲ್ ನಲ್ಲಿರುವ ಕೇಂದ್ರ ಸರ್ಕಾರ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
advisory forI ndian nationals
ಕೇಂದ್ರ ವಿದೇಶಾಂಗ ಸಚಿವಾಲಯ
Updated on

ನವದೆಹಲಿ: ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆ ಬೆನ್ನಲ್ಲೇ ಇದೀಗ ಇರಾನ್ ದಾಳಿಯಿಂದಾಗಿ ಇಸ್ರೇಲ್ ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಇಸ್ರೇಲ್ ನಲ್ಲಿರುವ ಕೇಂದ್ರ ಸರ್ಕಾರ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, 'ಭಾರತೀಯರೆಲ್ಲರೂ ಶಾಂತವಾಗಿರಿ, ಸ್ಥಳೀಯ ಅಧಿಕಾರಿಗಳು ನೀಡಿದ ಸುರಕ್ಷತಾ ಕ್ರಮಗಳಿಗೆ ಬದ್ಧರಾಗಿರಿ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ' ಎಂದು ಹೇಳಿದೆ.

advisory forI ndian nationals
Iran attacks Israel: ಇಸ್ರೇಲ್ ರಕ್ಷಣೆಗೆ ಬದ್ಧ- ಇರಾನ್ ಗೆ ಅಮೆರಿಕ ಎಚ್ಚರಿಕೆ; G-7 ನಾಯಕರ ಸಭೆಗೆ ಆಗ್ರಹ

ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದು, ಎಲ್ಲಾ ಭಾರತೀಯ ಪ್ರಜೆಗಳು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿದ್ದು, ಪಶ್ಚಿಮ ಏಷ್ಯಾ ವಲಯದಲ್ಲಿ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ಇಸ್ರೇಲ್ ಮತ್ತು ಇರಾನ್ ನಡುವೆ ಹಗೆತನ ಹೆಚ್ಚುತ್ತಿರುವ ಬಗ್ಗೆ ಭಾರತ ಗಂಭೀರವಾಗಿ ಚಿಂತಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಬೆಳಿಗ್ಗೆ ಹೇಳಿಕೆ ಬಿಡುಗಡೆ ಮಾಡಿತ್ತು.

ಸದ್ಯಕ್ಕೆ ಇಸ್ರೇಲ್ ಪ್ರವಾಸ ಬೇಡ

ಇರಾನ್ & ಇಸ್ರೇಲ್ ನಡುವೆ ಸಂಬಂಧ ತೀರಾ ಹದಗೆಟ್ಟಿದ್ದು. ಯುದ್ಧದ ಭೀತಿ ಇದೀಗ ಎದುರಾಗಿದೆ. ಈ ಕಾರಣಕ್ಕೆ ಇರಾನ್ & ಇಸ್ರೇಲ್‌ಗೆ ಹೋಗಬೇಡಿ ಎಂದು ಭಾರತೀಯರಿಗೆ ಈಗ ಎಚ್ಚರಿಕೆ ಸಂದೇಶ ನೀಡಲಾಗಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ. ಇರಾನ್ & ಇಸ್ರೇಲ್‌ನಲ್ಲಿ ಇರುವ ಭಾರತೀಯರು ತಮ್ಮ ಸುರಕ್ಷತೆ ಖಾತ್ರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಅನಗತ್ಯವಾಗಿ ಹೊರಗೆ ಹೋಗಿ ತಿರುಗಾಡುವುದನ್ನು ಕಡಿಮೆ ಮಾಡಿ ಎಂದು ಕೂಡ ತಿಳಿಸಲಾಗಿದೆ.

ಇರಾನ್ ಉಡಾಯಿಸಿದ 200 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳಲ್ಲಿ ಹೆಚ್ಚಿನವುಗಳನ್ನು ಭೂಮಿಗೆ ಅಪ್ಪಳಿಸುವ ಮೊದಲೇ ಮಿತ್ರರಾಷ್ಟ್ರಗಳ ಸಹಾಯದಿಂದ ತಡೆಹಿಡಿಯಲಾಗಿದೆ ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com