Powai lake: ಪೊವೈ ಕೆರೆಯಿಂದ 5,895 ಮೆಟ್ರಿಕ್ ಟನ್ ಜೊಂಡು ಹೊರಹಾಕಿದ BMC

ವಾಣಿಜ್ಯ ರಾಜಧಾನಿ ಮುಂಬೈನ ಪೊವೈ ಕೆರೆಯಲ್ಲಿದ್ದ ಸುಮಾರು 5,895 ಮೆಟ್ರಿಕ್ ಟನ್ 'ಜೊಂಡು' ಗಿಡಗಳನ್ನು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕುವ ಮೂಲಕ ಕೆರೆ ರಕ್ಷಣೆಗೆ ಮುಂದಾಗಿದೆ.
ಮುಂಬೈನ ಪೊವೈ ಕೆರೆ
ಮುಂಬೈನ ಪೊವೈ ಕೆರೆ

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನ ಪೊವೈ ಕೆರೆಯಲ್ಲಿದ್ದ ಸುಮಾರು 5,895 ಮೆಟ್ರಿಕ್ ಟನ್ 'ಜೊಂಡು' ಗಿಡಗಳನ್ನು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕುವ ಮೂಲಕ ಕೆರೆ ರಕ್ಷಣೆಗೆ ಮುಂದಾಗಿದೆ.

ಈ ಜೊಂಡು ಸಸ್ಯಗಳನ್ನು ತೆಗೆಯುವುದರಿಂದ ಸರೋವರದ ನೈಸರ್ಗಿಕ ಸಂಪತ್ತನ್ನು ಹೆಚ್ಚಿಸುವುದರ ಜೊತೆಗೆ ಅದರ ಜೀವವೈವಿಧ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು BMC ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈನ ಪೊವೈ ಕೆರೆ
ವಿಭೂತಿಪುರ ಕೆರೆ: STP ನಿರ್ಮಾಣ ಕಾರ್ಯ ಪೂರ್ಣಗೊಂಡರೂ ವಿದ್ಯುತ್ ಪೂರೈಸದ BESCOM, ಕಾರ್ಯಾರಂಭ ಮತ್ತಷ್ಟು ತಡ!

ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಈ ಸರೋವರ ಒಟ್ಟು 123 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿದ್ದು, ಈ ಪೈಕಿ ಶೇ.23ರಷ್ಟು ನೀರು ಹಾಯಿಸಿರುವ ಪ್ರದೇಶದಲ್ಲಿ ಜೊಂಡು ಗಿಡಗಳನ್ನು ತೆರವುಗೊಳಿಸಿರುವುದಾಗಿ ಬಿಎಂಸಿ ತಿಳಿಸಿದೆ. "ಪೊವೈ ಸರೋವರದ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ನಾಗರಿಕ ಸಂಸ್ಥೆ ಮಾರ್ಚ್ 8 ರಿಂದ ತೆರವುಗೊಳಿಸುವ ಪ್ರಕ್ರಿಯೆಯನ್ನು ಕೈಗೊಂಡಿದೆ.

ಸುಮಾರು 123.97 ಎಕರೆ ಪ್ರದೇಶವು ಜೊಂಡು ಗಿಡಗಳಿಂದ ಮುಚ್ಚಲ್ಪಟ್ಟಿದ್ದು, ಈ ಪೈಕಿ 557.50 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದ ಜೊಂಡನ್ನು ತೆರವುಗೊಳಿಸಲಾಗಿದೆ. ಇನ್ನುಳಿದ 94.72 ಎಕರೆ ಪ್ರದೇಶದಲ್ಲಿ ಜೊಂಡು ಗಿಡಗಳನ್ನು ತೆಗೆದು ನೀರು ಹಾಯಿಸುವ ಕಾರ್ಯವೂ ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

1891 ರಲ್ಲಿ ನಿರ್ಮಿಸಲಾದ ಪೊವೈ ಸರೋವರವು 5,455 MLD (Mega Litre Perday) ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದರ ಜಲಾನಯನ ಪ್ರದೇಶವು 600 ಹೆಕ್ಟೇರ್‌ಗಳಲ್ಲಿ ಹರಡಿದ್ದು, ಕೆರೆಯ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com