ಹಿರಿಯ ಐಎಎಸ್ ಅಧಿಕಾರಿ ಟಿ ವಿ ಸೋಮನಾಥನ್ ಕೇಂದ್ರ ಸಂಪುಟ ಕಾರ್ಯದರ್ಶಿಯಾಗಿ ನೇಮಕ

30.08.2024 ರಿಂದ ಎರಡು ವರ್ಷಗಳ ಅವಧಿಗೆ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಟಿ ವಿ ಸೋಮನಾಥನ್ ಅವರನ್ನು ನೇಮಕ ಮಾಡಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ನಿರ್ಮಲಾ ಸೀತಾರಾಮನ್ - ಟಿ ವಿ ಸೋಮನಾಥನ್
ನಿರ್ಮಲಾ ಸೀತಾರಾಮನ್ - ಟಿ ವಿ ಸೋಮನಾಥನ್
Updated on

ನವದೆಹಲಿ: ಹಿರಿಯ ಐಎಎಸ್ ಅಧಿಕಾರಿ ಟಿ ವಿ ಸೋಮನಾಥನ್ ಅವರನ್ನು ಕೇಂದ್ರ ಸಂಪುಟ ಕಾರ್ಯದರ್ಶಿಯಾಗಿ ಶನಿವಾರ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ತಮಿಳುನಾಡು ಕೇಡರ್‌ನ 1987-ಬ್ಯಾಚ್ ಐಎಎಸ್ ಅಧಿಕಾರಿ, ಸೋಮನಾಥನ್ ಅವರನ್ನು ನೇಮಕ ಮಾಡಲಾಗಿದೆ.

ಸೋಮನಾಥನ್ ಅವರು ಪ್ರಸ್ತುತ ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿರ್ಮಲಾ ಸೀತಾರಾಮನ್ - ಟಿ ವಿ ಸೋಮನಾಥನ್
ಕೇಂದ್ರ ಅಧಿಕಾರಿಗಳ ವರ್ಗದಲ್ಲಿ ಮಹತ್ವದ ಬದಲಾವಣೆ: ರಾಜೀವ್ ಗೌಬಾ ಮುಂದಿನ ಗೃಹ ಕಾರ್ಯದರ್ಶಿ

30.08.2024 ರಿಂದ ಎರಡು ವರ್ಷಗಳ ಅವಧಿಗೆ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಟಿ ವಿ ಸೋಮನಾಥನ್ ಅವರನ್ನು ನೇಮಕ ಮಾಡಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಗೌಬಾ ಅವರು ಐದು ವರ್ಷಗಳ ಹಿಂದೆ ಆಗಸ್ಟ್ 30, 2019 ರಂದು ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com