ಮುಂಬೈ: ನನ್ನ ಮೊಬೈಲ್ ಮತ್ತು ವಾಟ್ಸಪ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಎನ್ ಸಿಪಿ ಶರದ್ ಪವಾರ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.
‘ನನ್ನ ಮೊಬೈಲ್, ವ್ಯಾಟ್ಸ್‌ಆ್ಯಪ್ ಹ್ಯಾಕ್ ಮಾಡಲಾಗಿದೆ. ದಯವಿಟ್ಟು ಯಾರು ನನಗೆ ಕರೆ ಮಾಡಬೇಡಿ ಅಥವಾ ಸಂದೇಶ ಕಳುಹಿಸಬೇಡಿ ಎಂದು ಎನ್‌ಸಿಪಿ (ಶರದ್‌ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಅಂತೆಯೇ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸ್ ದೂರಿನಲ್ಲಿವಂತೆ ಆನ್ಲೈನ್ ಮೂಲಕ ಸುಪ್ರಿಯಾ ಸುಳೆ ಅವರ ಫೋನ್ ಮತ್ತು ವಾಟ್ಸಪ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
Advertisement