Video: ಬಿಹಾರದಲ್ಲಿ 3ನೇ ಬಾರಿಗೆ ಕುಸಿದ ಸೇತುವೆ, 'ನಿರ್ಮಾಣ ಸಂಸ್ಥೆ ಮೇಲೆ ನಿತೀಶ್ ಸರ್ಕಾರದ ಕೆಂಗಣ್ಣು'

ಬಿಹಾರದ ಸುಲ್ತಾನ್ ಗಂಜ್ ಮತ್ತು ಅಗುವಾನಿ ಘಾಟ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲ್ವಿನ್ಯಾಸದ ಒಂದು ಭಾಗ ಕುಸಿದು ಗಂಗಾ ನದಿಗೆ ಬಿದ್ದಿದೆ. ಈ ಸೇತುವೆಯನ್ನು ಕಳೆದ 9 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಸೇತುವೆಯ ಒಂದು ಭಾಗದ ಮೇಲ್ಛಾವಣಿ ಕುಸಿದುಬಿದ್ದಿದೆ.
Bridge In Bihar Collapses For 3rd Time
ಬಿಹಾರ ಸೇತುವೆ ಕುಸಿತ
Updated on

ಪಾಟ್ನಾ: ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿದಿದ್ದು, ಒಂದೇ ಸೇತುವೆ ಮೂರನೇ ಬಾರಿ ಕುಸಿದಿದ್ದು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಬಿಹಾರದ ಸುಲ್ತಾನ್ ಗಂಜ್ ಮತ್ತು ಅಗುವಾನಿ ಘಾಟ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲ್ವಿನ್ಯಾಸದ ಒಂದು ಭಾಗ ಕುಸಿದು ಗಂಗಾ ನದಿಗೆ ಬಿದ್ದಿದೆ.

ಈ ಸೇತುವೆಯನ್ನು ಕಳೆದ 9 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಸೇತುವೆಯ ಒಂದು ಭಾಗದ ಮೇಲ್ಛಾವಣಿ ಕುಸಿದುಬಿದ್ದಿದೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bridge In Bihar Collapses For 3rd Time
ಬಿಹಾರ: ಸೇತುವೆ ಕುಸಿತದ ಸರಣಿ ದುರಂತ; 16 ಇಂಜಿನಿಯರ್ ಗಳು ಅಮಾನತು!

3ನೇ ಬಾರಿ ಘಟನೆ

ಇನ್ನು ಈ ಸೇತುವೆ ಕುಸಿಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ 9 ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಒಂದಲ್ಲ ಒಂದು ಭಾಗದಲ್ಲಿ ವಿವಿಧ ಕಾರಣಗಳಿಂದ ಈ ವರೆಗೂ ಮೂರು ಬಾರಿ ಸೇತುವೆ ವಿವಿಧ ಭಾಗಗಳು ಕುಸಿದಿವೆ. ಈ ಹಿಂದೆ ಜೂನ್ 4, 2023 ರಂದು ಇದೇ ಸೇತುವೆಯ ಒಂದು ಭಾಗ ಕುಸಿದಿತ್ತು. ಖಗಾರಿಯಾ ಭಾಗದಲ್ಲಿ ಪಿಲ್ಲರ್ ಸಂಖ್ಯೆ 10 ಮತ್ತು 12 ರ ನಡುವಿನ ಭಾಗ ಕುಸಿದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

ಭಾಗಲ್ಪುರ್ ಬದಿಯಲ್ಲಿರುವ ಸೇತುವೆಯ ಮತ್ತೊಂದು ಭಾಗವು ಜೂನ್ 30, 2022 ರಂದು ಕುಸಿದು ಬಿದ್ದಿತು, ಪಿಲ್ಲರ್ ಸಂಖ್ಯೆ 5 ಮತ್ತು 6 ರ ನಡುವಿನ ಸೂಪರ್ ಸ್ಟ್ರಕ್ಚರ್ ಗಂಗಾ ನದಿಗೆ ಬಿದ್ದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಹಾರ ಸರ್ಕಾರ SK ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈ.ಲಿ. ಲಿಮಿಟೆಡ್, ಮತ್ತು ಸೇತುವೆಯನ್ನು ಕಂಪನಿಯ ವೆಚ್ಚದಲ್ಲಿ ಮರುನಿರ್ಮಾಣ ಮಾಡಬೇಕೆಂದು ಆದೇಶಿಸಿತ್ತು.

ಮುಗಿಯುತ್ತಲೇ ಇಲ್ಲ ಕಾಮಗಾರಿ

3.16 ಕಿ.ಮೀ ಉದ್ದದ ಸೇತುವೆಗೆ 2014ರ ಫೆ.23ರಂದು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, 2015ರ ಮಾರ್ಚ್ 9ರಂದು ಕಾಮಗಾರಿ ಆರಂಭಗೊಂಡಿತ್ತು. ಬಿಹಾರ ಸರ್ಕಾರವು ಈ ಯೋಜನೆಗೆ ₹ 1,710 ಕೋಟಿ ಮಂಜೂರು ಮಾಡಿದ್ದು, ಇದರ ಹೊರತಾಗಿಯೂ, ನಿರ್ಮಾಣದಲ್ಲಿ ಸುಮಾರು ಒಂಬತ್ತು ವರ್ಷಗಳ ನಂತರ, ಸೇತುವೆಯು ಅಪೂರ್ಣವಾಗಿದೆ.

ಬಿಹಾರ ಸರ್ಕಾರದ ರಸ್ತೆ ನಿರ್ಮಾಣ ಇಲಾಖೆಯು ಖಗಾರಿಯಾ ಕಡೆಯಿಂದ 16 ಕಿಮೀ ಅಪ್ರೋಚ್ ರಸ್ತೆ ಮತ್ತು ಭಾಗಲ್ಪುರ್ ಕಡೆಯಿಂದ 4 ಕಿಮೀ ಅಪ್ರೋಚ್ ರಸ್ತೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ, ಆದರೆ ಸೇತುವೆಯ ಮುಖ್ಯ ರಚನೆಯು ಅಪೂರ್ಣವಾಗಿದೆ. ಈ ದೀರ್ಘ ವಿಳಂಬ, ಪುನರಾವರ್ತಿತ ರಚನಾತ್ಮಕ ವೈಫಲ್ಯಗಳು ಈ ಸೇತುವೆ ಕಾಮಗಾರಿಯನ್ನು ಮತ್ತಷ್ಟು ವಿಳಂಬಗೊಳಿಸುತ್ತಾ ಸಾಗಿದೆ. ಅಲ್ಲದೆ SK ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈವೇಟ್‌ನ ಕೆಲಸದ ಗುಣಮಟ್ಟದ ಮೇಲೆ ಶಂಕೆ ವ್ಯಕ್ತವಾಗುತ್ತಿದ್ದು, ಬಿಹಾರ ಸರ್ಕಾರ ಕೂಡ ವ್ಯಾಪಕ ಮುಜುಗರಕ್ಕೀಡಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com