ಪ್ರಗತಿಯತ್ತ ಭಾರತ: ಈಗ ಬಡವರ ಬಳಿಯೂ ಇದೆ ಬೈಕು-ಕಾರು; ದೇಶದಲ್ಲಿ ಹೆಚ್ಚುತ್ತಿದೆ ವಾಹನ ಮಾಲೀಕತ್ವ..!

ಈ ಕುರಿತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯೆ ಶಮಿಕಾ ರವಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದು, ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡವರಲ್ಲಿನ ವಾಹನ ಮಾಲೀಕತ್ವ ಹೆಚ್ಚಾಗಿರುವುದು ಕಂಡು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತ ಪ್ರಗತಿಯತ್ತ ಸಾಗಿದ್ದು, ಕಳೆದ ಕೆಲ ದಶಕಗಳಿಂದ ಬಡವರು ಗಮನಾರ್ಹ ಪ್ರಗತಿ ಕಾಣುತ್ತಿದ್ದಾರೆ. ದೇಶದಲ್ಲಿ ಬಡವರಲ್ಲಿನ ವಾಹನ ಮಾಲೀಕತ್ವ ಹೆಚ್ಚಾಗಿದ್ದು, 2012ರಲ್ಲಿ ಶೇ.6ರಷ್ಟಿದ್ದ ಬಡವರ ವಾಹನ ಮಾಲೀಕತ್ವದ ಪ್ರಮಾಣ 2023ರ ವೇಳಗೆ ಶೇ.40ರಷ್ಟು ಏರಿಕೆಯಾಗಿದೆ.

ಈ ಕುರಿತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯೆ ಶಮಿಕಾ ರವಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದು, ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡವರಲ್ಲಿನ ವಾಹನ ಮಾಲೀಕತ್ವ ಹೆಚ್ಚಾಗಿರುವುದು ತಿಳಿದುಬಂದಿದೆ.

ಅಂಕಿ ಅಂಶಗಳ ಪ್ರಕಾರ 2012ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಕೇವಲ 6 ಪ್ರತಿಶತ ಬಡ ಕುಟುಂಬಗಳು ಮಾತ್ರ ವಾಹನವನ್ನು ಹೊಂದಿದ್ದವು. 2023ರ ಹೊತ್ತಿಗೆ ಈ ಸಂಖ್ಯೆಯು 40 ಪ್ರತಿಶತಕ್ಕೆ ಜಿಗಿದಿದೆ ಎಂದು ತಿಳಿದುಬಂದಿದೆ.

ಗ್ರಾಮೀಣ ಬಡವರಲ್ಲಿ ವಾಹನ ಮಾಲೀಕತ್ವದ ಹೆಚ್ಚಳದ ಪಟ್ಟಿಯಲ್ಲಿ ಪಂಜಾಬ್ ರಾಜ್ಯ ಮುಂಚೂಣಿಯಲ್ಲಿದೆ, ಇಲ್ಲಿ ಹಣಕಾಸು ವರ್ಷ 2012 ರಲ್ಲಿ ಶೇಕಡಾ 9ರಷ್ಟಿದ್ದ ವಾಹನ ಮಾಲೀಕತ್ವದ ಪ್ರಮಾಣ 2023 ರಲ್ಲಿ ಶೇಕಡಾ 60ಕ್ಕೆ ಏರಿದೆ. ಇದೇ ಅವಧಿಯಲ್ಲಿ ರಾಜ್ಯದ ನಗರ ಬಡ ಕುಟುಂಬಗಳ ಸಂಖ್ಯೆ ಶೇ.15ರಿಂದ ಶೇ.65ಕ್ಕೆ ಏರಿಕೆಯಾಗಿದೆ.

ಸಂಗ್ರಹ ಚಿತ್ರ
Poverty in India: ಕಳೆದ 10 ವರ್ಷದಲ್ಲಿ ಭಾರತದ ಬಡತನ ಪ್ರಮಾಣ ಶೇ.8.5ಕ್ಕೆ ಇಳಿಕೆ- ವರದಿ

ಭಾರತದಲ್ಲಿ ಬಡವರು ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅವಕಾಶಗಳು ಸೀಮಿತವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನೆಲೆಗೊಂಡಿದ್ದಾರೆ. ಸಾಮಾನ್ಯವಾಗಿ ಇಲ್ಲಿನ ಬಹುತೇಕ ಜನರು ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿಗಳು)ಗಳಿಗೆ ಸೇರಿದವರಾಗಿರುತ್ತಾರೆ. ಈ ಸಮುದಾಯಗಳು ಕಡೆಗಣನೆ, ತಾರತಮ್ಯ ಹಾಗೂ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸುತ್ತಲೇ ಬಂದಿವೆ.

ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಬುಡಕಟ್ಟು ಗುಂಪುಗಳು ಭಾರತದ ಬಡವರ ಮತ್ತೊಂದು ವಿಭಾಗವಾಗಿದ್ದು, ಇವರು ಆಗಾಗ್ಗೆ ಸ್ಥಳಾಂತರಗೊಳ್ಳುವುದರಿಂದ ಬಡತನ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾಹೆ. ಈ ಬಡತನವೆಂಬ ಪಿಡುಗನ್ನು ಹೋಗಲಾಡಿಸಲು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸಾಕಷ್ಟು ಕಾರ್ಯಕ್ರಮ ಹಾಗೂ ಉಪಕ್ರಮಗಳನ್ನು ಕೈಗೊಂಡಿವೆ. ಈ ಪ್ರಯತ್ನಗಳು ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಅವಕಾಶಗಳ ಸೃಷ್ಟಿಸುವುದರ ಮೇಲೆ ಕೇಂದ್ರೀಕರಿಸುತ್ತಿವೆ. ಆದರೂ, ಈ ಪಿಡುಗು ಹೋಗಲಾಡಿಸುವುದು ದೊಡ್ಡ ಸವಾಲಾಗಿಯೇ ಉಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com