ಪೊಲೀಸರೊಂದಿಗೆ ಗುಂಡಿನ ಚಕಮಕಿ: ತೆಲಂಗಾಣದಲ್ಲಿ 7 ಮಾವೋವಾದಿಗಳ ಹತ್ಯೆ

ತೆಲಂಗಾಣ ಪೊಲೀಸರರ ನಕ್ಸಲ್ ವಿರೋಧಿ ಪಡೆಯಾದ ಗ್ರೇಹೌಂಡ್ಸ್ ಮತ್ತು ಅಲ್ಟ್ರಾಗಳ ನಡುವೆ ಎತುರ್ನಗರಂ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಹೈದರಾಬಾದ್: ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು ಭಾನುವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಹತರಾಗಿದ್ದಾರೆ.

ತೆಲಂಗಾಣ ಪೊಲೀಸರರ ನಕ್ಸಲ್ ವಿರೋಧಿ ಪಡೆಯಾದ ಗ್ರೇಹೌಂಡ್ಸ್ ಮತ್ತು ಅಲ್ಟ್ರಾಗಳ ನಡುವೆ ಎತುರ್ನಗರಂ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ, ಘಟನಾ ಸ್ಥಳದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ 47 ರೈಫಲ್‌ಗಳು ಸೇರಿವೆ.

ಕೊಲ್ಲಲ್ಪಟ್ಟವರಲ್ಲಿ ನಿಷೇಧಿತ ಸಿಪಿಐ-ಮಾವೋವಾದಿಯ ತೆಲಂಗಾಣ ರಾಜ್ಯ ಸಮಿತಿಯ (ಯೆಲ್ಲಾಂಡು ನರಸಂಪೇಟ್) ಕಾರ್ಯದರ್ಶಿ ಕುರ್ಸಮ್ ಮಂಗು ಅಲಿಯಾಸ್ ಭದ್ರು ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com