ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ INS Vikrant ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧ!

ಭಾರತದ ಸ್ವದೇಶಿ ವಿಮಾನವಾಹಕ ನೌಕೆ (ಐಎಸಿ) ಐಎನ್‌ಎಸ್ ವಿಕ್ರಾಂತ್ ಈ ವರ್ಷ ತನ್ನ ಅಂತಿಮ ಕಾರ್ಯಾಚರಣೆಯ ಅನುಮತಿಯನ್ನು ಪೂರ್ಣಗೊಳಿಸಿದ ನಂತರ ಸಂಪೂರ್ಣ ಕಾರ್ಯಾಚರಣೆಯ ಸ್ಥಾನಮಾನವನ್ನು ಸಾಧಿಸಿದೆ.
INS Vikrant
ಐಎನ್‌ಎಸ್ ವಿಕ್ರಾಂತ್
Updated on

ಮುಂಬೈ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ 'INS Vikrant' ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಭಾರತೀಯ ನೌಕಾದಳ ಸೋಮವಾರ ಘೋಷಣೆ ಮಾಡಿದೆ.

ಭಾರತದ ಸ್ವದೇಶಿ ವಿಮಾನವಾಹಕ ನೌಕೆ (ಐಎಸಿ) ಐಎನ್‌ಎಸ್ ವಿಕ್ರಾಂತ್ ಈ ವರ್ಷ ತನ್ನ ಅಂತಿಮ ಕಾರ್ಯಾಚರಣೆಯ ಅನುಮತಿಯನ್ನು ಪೂರ್ಣಗೊಳಿಸಿದ ನಂತರ ಸಂಪೂರ್ಣ ಕಾರ್ಯಾಚರಣೆಯ ಸ್ಥಾನಮಾನವನ್ನು ಸಾಧಿಸಿದೆ ಎಂದು ದಕ್ಷಿಣ ನೌಕಾ ಕಮಾಂಡ್ ಕಮಾಂಡಿಂಗ್-ಇನ್-ಚೀಫ್ (ಎಫ್‌ಒಸಿಎನ್‌ಸಿ) ಅಧಿಕಾರಿ ವೈಸ್ ಅಡ್ಮಿರಲ್ ವಿ ಶ್ರೀನಿವಾಸ್ ಸೋಮವಾರ ತಿಳಿಸಿದ್ದಾರೆ.

ಕೊಚ್ಚಿಯಲ್ಲಿ ನೌಕೆ ಐಎನ್‌ಎಸ್ ಶಾರ್ದೂಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀನಿವಾಸ್ ಅವರು, 'ಐಎನ್‌ಎಸ್ ವಿಕ್ರಾಂತ್ ಈ ವರ್ಷ ತನ್ನ ಅಂತಿಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ವಿವಿಧ ಪ್ರಯೋಗಗಳು ಮತ್ತು ಹಡಗಿನ ಫ್ಲೀಟ್ ಏಕೀಕರಣದೊಂದಿಗೆ, INS ವಿಕ್ರಾಂತ್ ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ರಸ್ತುತ ಐಎನ್ಎಸ್ ವಿಕ್ರಾಂತ್ ಪಶ್ಚಿಮ ಫ್ಲೀಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಶಕ್ಕೆ ಮತ್ತು ನೌಕಾಪಡೆಗೆ ಹೆಮ್ಮೆಯ ಸಂಕೇತವಾಗಿರುವ ಈ ಐಎನ್ಎಸ್ ವಿಕ್ರಾಂತ್ ಹಡಗು ಭಾರತೀಯ ನೌಕಾಪಡೆಯ ಎಲ್ಲಾ ಕಾರ್ಯಾಚರಣೆಗಳು ಮತ್ತು ಬದ್ಧತೆಗಳನ್ನು ಕೈಗೊಳ್ಳಲು ಸಂಪೂರ್ಣವಾಗಿ ಸಮರ್ಥವಾಗಿದೆ" ಎಂದು ಹೇಳಿದರು.

2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಿಯೋಜಿಸಲ್ಪಟ್ಟ INS ವಿಕ್ರಾಂತ್ ಈಗ ಪಶ್ಚಿಮ ನೌಕಾ ಕಮಾಂಡ್ ಅಡಿಯಲ್ಲಿದೆ ಮತ್ತು ನೌಕಾ ಕಾರ್ಯಗಳನ್ನು ನಿಭಾಯಿಸುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ.

ಐಎನ್ಎಸ್ ವಿಕ್ರಾಂತ್ ಅನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ (ಡಬ್ಲ್ಯೂಡಿಬಿ) ವಿನ್ಯಾಸಗೊಳಿಸಿದ್ದು, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟಿದೆ. ವಿಕ್ರಾಂತ್ ಭಾರತದ ಕಡಲ ಇತಿಹಾಸದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇದು ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಸುಮಾರು 2,200 ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಮಹಿಳಾ ಅಧಿಕಾರಿಗಳು ಮತ್ತು ನಾವಿಕರು ಸೇರಿದಂತೆ ಸುಮಾರು 1,600 ಸಿಬ್ಬಂದಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ.

INS Vikrant
INS Arighaat: ಪರಮಾಣು ದಾಳಿ ಸಾಮರ್ಥ್ಯದ ಕಲಾಂ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ! ಭಾರತದ ಸಬ್‌ಮರೀನ್ ಪಡೆಗೆ ಆನೆಬಲ ಹೇಗೆ?

ಈ ನೌಕೆಯಲ್ಲಿ MiG-29K ಫೈಟರ್ ಜೆಟ್‌ಗಳು, Kamov-31 ಹೆಲಿಕಾಪ್ಟರ್‌ಗಳು, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳು ಮತ್ತು ಸ್ಥಳೀಯವಾಗಿ ತಯಾರಿಸಿದ ಸುಧಾರಿತ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಲಘು ಯುದ್ಧ ವಿಮಾನ (LCA) (ನೌಕಾಪಡೆ) ಸೇರಿದಂತೆ ವೈವಿಧ್ಯಮಯ ವಾಯು ವಿಭಾಗವನ್ನು ನಿರ್ವಹಿಸಲು ಹಡಗು ಸಜ್ಜುಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com