ಜಮ್ಮು-ಕಾಶ್ಮೀರ: ಸಹೋದ್ಯೋಗಿಗೆ ಗುಂಡಿಕ್ಕಿ ಕೊಂದ ಪೊಲೀಸ್​ ತಾನೂ ಆತ್ಮಹತ್ಯೆ

ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಸೋದರ ಸಂಬಂಧಿಯಾಗಿದ್ದು, ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಕಾಳಿ ಮಠ ದೇವಾಲಯದ ಬಳಿ ವಾಹನವೊಂದರಲ್ಲಿ ಇಬ್ಬರು ಪೊಲೀಸರ ಮೃತದೇಹಗಳು ಪತ್ತೆಯಾಗಿದ್ದು, ಮೃತದೇಹದ ಮೇಲೆ ವ ಗುಂಡೇಟಿನ ಗಾಯಗಳು ಪತ್ತೆಯಾಗಿವೆ.

ಇಬ್ಬರೂ ಪೊಲೀಸ್ ಸಿಬ್ಬಂದಿಗಳು ಸೋಪೋರ್‌ನಿಂದ ಉಧಂಪುರದ ತಲ್ವಾರದಲ್ಲಿರುವ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 6.30ರ ಸುಮಾರಿದೆ ಘಟನೆ ನಡೆದಿದೆ ಎಂದು ಎಸ್‌ಎಸ್‌ಪಿ ಉಧಂಪುರ ಅಮೋದ್ ಅಶೋಕ್ ನಾಗ್‌ಪುರೆ ಅವರು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಯಲ್ಲಿ ಎಕೆ -47 ರೈಫಲ್ ಬಳಸಿರುವುದು ಸಾಬೀತಾಗಿದೆ. ಇಬ್ಬರು ಇದು ಸೋದರ ಸಂಬಂಧಿಯಾಗಿದ್ದು, ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿಗೂ ಮುನ್ನ ಇಬ್ಬರ ನಡುವೆ ಜಗಳವಾಗಿದೆ. ಆರೋಪಿಯು ತನ್ನ ಎಕೆ 47 ಅಸಾಲ್ಟ್​ ರೈಫಲ್​ ಅನ್ನು ದಾಳಿಗೆ ಬಳಸಿದ್ದಾನೆ. ಘಟನೆಯಲ್ಲಿ ಇಬ್ಬರಿಗೆ ಮಾರಣಾಂತಿಕ ಗಾಯಗಳಾಗಿವೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಆಯ್ಕೆ ದರ್ಜೆಯ ಕಾನ್​ಸ್ಟೇಬಲ್​ ಪ್ರಾಣಾಪಾಯದಿಂದ ಪಾರಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಉಧಂಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮೋದ್ ಅಶೋಕ್ ನಾಗ್ಪುರೆ ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಜಮ್ಮು-ಕಾಶ್ಮೀರ: ಹತ್ಯೆಯಾದ ವಿಡಿಜಿಗಳ ಮೃತದೇಹ ಪತ್ತೆ; ಕಿಶ್ತ್ವಾರ್‌ನಲ್ಲಿ ಉಗ್ರರಿಗಾಗಿ ಶೋಧ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com