ಬಂಡುಕೋರರ ವಶವಾದ ಸಿರಿಯಾ: ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಿ; ಭಾರತ ಸಲಹೆ!

ಈ ನಿರ್ಣಾಯಕ ಘಟ್ಟದಲ್ಲಿ ಸಿರಿಯಾದ ಏಕತೆ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಆದ್ಯತೆ ನೀಡುವ ಎಲ್ಲಾ ಪಕ್ಷಗಳ ಅಗತ್ಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೋಮವಾರ ಹೇಳಿದೆ.
Syrian rebel fighters celebrate near the Clock Tower in Homs
ಹಮಾಸ್ ನ ಕ್ಲಾಕ್ ಟವರ್ ಬಳಿ ಸಂಭ್ರಮಾಚರಣೆ ನಡೆಸುತ್ತಿರುವ ಬಂಡುಕೋರರು
Updated on

ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಸಿರಿಯಾದಲ್ಲಿ ಇತ್ತೀಚಿಗೆ ಇಸ್ಲಾಮಿಸ್ಟ್ ಬಂಡುಕೋರರು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಲ್ಲಿನ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರದ ಮಹತ್ವವನ್ನು ಭಾರತ ಒತ್ತಿ ಹೇಳಿದೆ.

ಈ ನಿರ್ಣಾಯಕ ಘಟ್ಟದಲ್ಲಿ ಸಿರಿಯಾದ ಏಕತೆ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಆದ್ಯತೆ ನೀಡುವ ಎಲ್ಲಾ ಪಕ್ಷಗಳ ಅಗತ್ಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೋಮವಾರ ಹೇಳಿದೆ.

ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಪ್ರದೇಶದಲ್ಲಿನ ತ್ವರಿತಗತಿಯ ಸನ್ನಿವೇಶದ ಬಗ್ಗೆ ಭಾರತ ಕಳವಳ ಹೊಂದಿದೆ. ಸಿರಿಯಾದ ರಾಜಕೀಯ ಶಾಂತಿಯುತ ಮತ್ತು ಅಂತರ್ಗತ ಹಾಗೂ ಸಿರಿಯನ್ ಸಮಾಜದ ಎಲ್ಲಾ ವರ್ಗಗಳ ಆಕಾಂಕ್ಷೆಗಳು ಮತ್ತು ಹಿತಾಸಕ್ತಿಗಳನ್ನು ಗೌರವಿಸಬೇಕು ಎಂದು ಹೇಳಿಕೆಯಲ್ಲಿ ಸಲಹೆ ನೀಡಿದೆ.

ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಜಾಗರೂಕವಾಗಿದೆ ಸಿರಿಯಾದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಗಾಗಿ ಅಲ್ಲಿನ ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭರವಸೆ ನೀಡಿದೆ.

ಸಿರಿಯನ್ ಬಂಡುಕೋರರು ಭಾನುವಾರ ಡಮಾಸ್ಕಸ್‌ಗೆ ಲಗ್ಗೆ ಹಾಕುವುದರೊಂದಿಗೆ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಎರಡು ದಶಕಗಳ ಆಡಳಿತವನ್ನು ಕೊನೆಗೊಳಿಸಿ ಪಲಾಯನವಾದರು. ಅಸ್ಸಾದ್ ಮತ್ತು ಅವರ ಕುಟುಂಬಕ್ಕೆ ರಷ್ಯಾ ಆಶ್ರಯ ನೀಡಿದೆ ಎಂದು ಕ್ರೆಮ್ಲಿನ್ ಮೂಲಗಳು ಖಚಿತಪಡಿಸಿವೆ.

ಬಂಡುಕೋರರು ಡಮಾಸ್ಕಸ್‌ ಪ್ರವೇಶಿಸಿದ್ದು, ರಾಜಧಾನಿಯ ಉತ್ತರದಲ್ಲಿರುವ ಕುಖ್ಯಾತ ತಾಣವಾದ ಸೈದ್ನಾಯಾ ಮಿಲಿಟರಿ ಸೆರೆಮನೆಯ ನಿಯಂತ್ರಣವನ್ನು ತೆಗೆದುಕೊಂಡಿದ್ದಾರೆ. ಬಶರ್ ಅಲ್-ಅಸ್ಸಾದ್ ಆಳ್ವಿಕೆಯಿಂದ ನಗರವನ್ನು ವಿಮೋಚನೆಗೊಳಿಸಲಿದ್ದು, ವಿಶ್ವದ ಇತರೆಡೆ ಇರುವ ಸಿರಿಯಾನ್ನರು ವಾಪಸ್ ಆಗುವಂತೆ ಟೆಲಿಗ್ರಾಮ್‌ನಲ್ಲಿ ಅವರು ಘೋಷಿಸಿದ್ದಾರೆ.

Syrian rebel fighters celebrate near the Clock Tower in Homs
ಸಿರಿಯನ್ ಯುದ್ಧದಲ್ಲಿ ಅಸ್ಸಾದ್ ಯುಗ ಅಂತ್ಯ: ಕವಲುದಾರಿಯಲ್ಲಿ ಸಿರಿಯಾ ಭವಿಷ್ಯ! (ಜಾಗತಿಕ ಜಗಲಿ)

ಡಿಸೆಂಬರ್ 6 ರಂದು ಭಾರತ ಸರ್ಕಾರವು ಭದ್ರತಾ ಪರಿಸ್ಥಿತಿಯಿಂದಾಗಿ ಸಿರಿಯಾದಲ್ಲಿರುವ ಭಾರತೀಯರು ಸ್ವದೇಶಕ್ಕೆ ವಾಪಾಸ್ಸಾಗುವಂತೆ ಕರೆ ನೀಡಿತ್ತು. ತುರ್ತು ಸಹಾಯವಾಣಿ ಮತ್ತು ಇಮೇಲ್ ID hoc.damascus@mea.gov.in) ಬಳಸಿಕೊಂಡು ಡಮಾಸ್ಕಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಿರಿಯಾದಲ್ಲಿರುವ ಭಾರತೀಯ ನಾಗರಿಕರಿಗೆ ಶಿಫಾರಸು ಮಾಡಿದೆ.

ಸಿರಿಯಾದಿಂದ ಬೇಗನೆ ಹೊರಡುವವರಿಗೆ ವಿಮಾನ ಲಭ್ಯವಿದ್ದು, ಇತರರು ತೀವ್ರ ಜಾಗ್ರತೆ ವಹಿಸುವಂತೆ, ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com